Homeಕರ್ನಾಟಕಬಿಗ್‌ಬಾಸ್‌ ಶೋಗೆ ಸಂಕಷ್ಟ, ಜಾಲಿವುಡ್ ಸ್ಟುಡಿಯೋಗೆ ಬೀಗ

ಬಿಗ್‌ಬಾಸ್‌ ಶೋಗೆ ಸಂಕಷ್ಟ, ಜಾಲಿವುಡ್ ಸ್ಟುಡಿಯೋಗೆ ಬೀಗ

ಬಿಗ್‌ಬಾಸ್‌ ಕನ್ನಡ 12ನೇ ಆವೃತ್ತಿಯ ರಿಯಾಲಿಟಿ ಶೋಗೆ ದೊಡ್ಡ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಿ ಒಂದು ವಾರವಷ್ಟೇ ಮುಗಿದು, ಎರಡನೇ ವಾರಕ್ಕೆ ಕಾಲಿಟ್ಟಿದ್ದು ಅಷ್ಟರಲ್ಲಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಲಾಗಿದೆ.

ರಾಮನಗರ ತಹಶೀಲ್ದರ್ ತೇಜಸ್ವಿನಿ ಸಮ್ಮುಖದಲ್ಲಿ ಅಧಿಕಾರಿಗಳು ತೆರಳಿ ಬೀಗ ಹಾಕಿದ್ದಾರೆ. ಅಲ್ಲದೆ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲು 7.30ರವರೆಗೆ ಸಮಯ ನೀಡಲಾಗಿದೆ ಎಂದು ವರದಿಯಾಗಿದೆ. ಒಂದೇ ವೇಳೆ ಬಿಗ್ ಬಾಸ್ ಸ್ಪರ್ಧಿಗಳು ಹೊರಬಂದರೆ ರಿಯಾಲಿಟಿ ಶೋ ಸ್ಥಗಿತಗೊಳ್ಳಲಿದೆ.

ಪರಿಸರ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಿರಲಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಇದೀಗ ಅಧಿಕಾರಿಗಳು ಜಾಲಿವುಡ್​​ ಸ್ಟುಡಿಯೋಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಡೆಟ್ ಕಂಪನಿಗೆ ಬೀಗ ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ 17 ಮಂದಿ ಸ್ಪರ್ಧಿಗಳಿದ್ದು ನೂರಾರು ತಂತ್ರಜ್ಞರು ಈ ರಿಯಾಲಿಟಿ ಶೋಗಾಗಿ ಕೆಲಸ ಮಾಡುತ್ತಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ನೋಟಿಸ್ ಅನ್ನು ಜಾಲಿವುಡ್ ಮಾನೇಜ್ಮೆಂಟ್ ಸ್ವೀಕರಿಸಿದೆ.

“ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಶೋ ನಡೆಸಬೇಕು. ಹೊರಗೆ ಶೂಟಿಂಗ್ ವೇಳೆ ಇಲಾಖೆಯಿಂದ NOC ಪಡೆಯಬೇಕು. ಆದರೆ ಒಳಾಂಗಣ ಶೋ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪರವಾನಿಗೆ ಪಡೆದಿಲ್ಲ” ಎಂದು ಬೆಂಗಳೂರು ದಕ್ಷಿಣ ಎಸ್​ಪಿ ಶ್ರೀನಿವಾಸಗೌಡ ಸ್ಪಷ್ಟಪಡಿಸಿದ್ದಾರೆ.

“ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಒಳಾಂಗಣದಲ್ಲಿ ಗೇಮ್ಸ್ ಆಡಿಸುವ ಬಗ್ಗೆ ಎನ್​ಒಸಿ ಪಡೆದಿಲ್ಲ. ಏನಾದರೂ ಅವಘಡ ಆದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಆಗುತ್ತೆ” ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments