Homeಕರ್ನಾಟಕಬೆಳಗಾವಿ | ತಂಗಿಯನ್ನು ಪ್ರೀತಿಸಿದ್ದಕ್ಕೆ ಅಣ್ಣನಿಂದ ಯುವಕನ ಬರ್ಬರ ಕೊಲೆ

ಬೆಳಗಾವಿ | ತಂಗಿಯನ್ನು ಪ್ರೀತಿಸಿದ್ದಕ್ಕೆ ಅಣ್ಣನಿಂದ ಯುವಕನ ಬರ್ಬರ ಕೊಲೆ

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯೊಂದಿಗೆ ಆರಂಭವಾದ ಪ್ರೇಮ ಪ್ರಕರಣ ವಿಚಾರವಾಗಿ ನಡೆಯುತ್ತಿರುವ ಬರ್ಬರ ಕೊಲೆ ಪ್ರಕರಣಗಳು ರಾಜ್ಯದಲ್ಲಿ ಸರಣಿ ರೀತಿಯಲ್ಲಿ ಮುಂದುವರಿದಿದ್ದು ದೊಡ್ಡ ಆತಂಕವನ್ನೇ ಸೃಷ್ಟಿಸಿದೆ.

ಬುಧವಾರ ಹುಬ್ಬಳ್ಳಿಯಲ್ಲಿ ಅಂಜಲಿ ಯುವತಿಯ ಕೊಲೆ ಘಟನೆ ಮಾಸುವ ಮುನ್ನವೇ ಪಕ್ಕದ ಜಿಲ್ಲೆ ಬೆಳಗಾವಿಯಲ್ಲೂ ಗುರುವಾರ ಪ್ರೀತಿ ವಿಚಾರವಾಗಿ ಮುಸ್ಲಿಂ ಯುವಕನ ಬರ್ಬರ ಕೊಲೆಯಾಗಿದೆ.

ಪ್ರೀತಿಯ ವಿಚಾರಕ್ಕೆ ಬೆಳಗಾವಿ ನಗರದಲ್ಲಿ ಹಾಡ ಹಗಲೇ ಸ್ಕ್ರೂಡ್ರೈವರ್ ನಿಂದ ಚುಚ್ಚಿ ಯುವಕನ ಕೊಲೆ ಮಾಡಲಾಗಿದೆ. ಈ ಘಟನೆ ಬೆಳಗಾವಿಯ ಮಹಾಂತೇಶ ನಗರದ ಬ್ರೀಡ್ಜ್ ಬಳಿ ನಡೆದಿದೆ.

ಗಾಂಧಿ ನಗರ ನಿವಾಸಿ ಇಬ್ರಾಹಿಂ ಗೌಸ್ (22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಗಾಂಧಿ ನಗರದ ಯುವತಿಯ ಜೊತೆಗೆ ಇಬ್ರಾಹಿಂ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದ್ದು, ಇವತ್ತು (ಮೇ16) ಯುವತಿ ಜೊತೆಗೆ ಬೈಕ್ ನಲ್ಲಿ ಹೊರಟ್ಟಿದ್ದ ಇಬ್ರಾಹಿಂನನ್ನು ನೋಡಿದ ಯುವತಿಯ ಸಹೋದರ ಸಿಟ್ಟಿನಿಂದ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ಇಬ್ರಾಹಿಂನನ್ನು ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಮುಜಮಿಲ್ ಸತ್ತಿಗೇರಿ ಹತ್ಯೆ ಮಾಡಿದ ಆರೋಪಿ. ಹತ್ಯೆಯಾದ ಇಬ್ರಾಹಿಂಗೂ ಅದೇ ಬಡಾವಣೆಯ ಮುಜಮಿಲ್ ಸತ್ತಿಗೇರಿ ಎಂಬುವವನ ಸಹೋದರಿ ಪರಸ್ಪರ ಪ್ರೀತಿಸುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಈ ಮೊದಲು ಜಗಳವಾಗಿದೆ. ಇಬ್ರಾಹಿಂ ಈ ಹಿಂದೆ ವಾರ್ನಿಂಗ್ ಕೊಟ್ಟಿದ್ದ ಎನ್ನಲಾಗಿದೆ. ಇಬ್ಬರೂ ಒಂದೇ ಸಮುದಾಯದವರಾಗಿದ್ದಾರೆ.

ಗುರುವಾರ ಸಹೋದರಿಯೊಂದಿಗೆ ಬೈಕ್‌ನಲ್ಲಿ ಹೊರಟಿದ್ದನ್ನು ನೋಡಿ ಇಬ್ರಾಹಿಂನ ಬೆನ್ನಟ್ಟಿ ಸ್ಕ್ರೂಡ್ರೈವರ್‌ನಿಂದ ಮನಬಂದಂತೆ ಚುಚ್ಚಿ ಹತ್ಯೆ ಮಾಡಿದ್ದಾನೆ. ಮಾಳ ಮಾರುತಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments