Homeಕರ್ನಾಟಕಬೆಂಗಳೂರು 'ಗ್ಯಾಸ್ ಚೇಂಬರ್' ಆಗದಂತೆ ಎಚ್ಚರವಹಿಸಿ: ಸಚಿವ ಖಂಡ್ರೆ ಸೂಚನೆ

ಬೆಂಗಳೂರು ‘ಗ್ಯಾಸ್ ಚೇಂಬರ್’ ಆಗದಂತೆ ಎಚ್ಚರವಹಿಸಿ: ಸಚಿವ ಖಂಡ್ರೆ ಸೂಚನೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯುಮಾಲಿನ್ಯ ಅತಿಯಾಗಿದ್ದು, ಬೆಂಗಳೂರಿಗೂ ಈ ಸ್ಥಿತಿ ಬಾರದಂತೆ ಎಲ್ಲ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ವಿವಿಧ ಯೋಜನೆಗಳ ಅನುಷ್ಠಾನದಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತಂತೆ ಪರಾಮರ್ಶಿಸಲು ನೇಮಕಗೊಂಡಿರುವ ರಾಜ್ಯ ತಜ್ಞರ ನಿಷ್ಕರ್ಷ ಸಮಿತಿ – SEAC ಮತ್ತು SEIAA ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಔಪಚಾರಿಕವಾಗಿ ಮಾತನಾಡಿದ ಅವರು, ನೂತನ ವರ್ಷದಲ್ಲಿ ಪ್ರಕೃತಿ, ಪರಿಸರ ಸಂರಕ್ಷಣೆಗೆ ಸಂಕಲ್ಪ ಮಾಡಿ ಎಂದರು.

ಇತ್ತೀಚೆಗೆ ದೆಹಲಿಗೆ ಹೋಗಿದ್ದಾಗ ಹೊಗೆ ಮತ್ತು ಮಂಜಿನಿಂದ ಕೂಡಿದ ವಾತಾವರಣದಲ್ಲಿ ಉಸಿರಾಡಲೂ ಕಷ್ಟವಾಯಿತು ಎಂದ ಅವರು, ಬೆಂಗಳೂರು ನಗರದ ರಕ್ಷಣೆಗೆ ಕಟಿಬದ್ಧರಾಗಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪರಿಸರ ಸಂರಕ್ಷಣೆಗಾಗಿ ರೂಪಿಸಿರುವ ಎಲ್ಲ ಕಾಯಿದೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments