Homeಕರ್ನಾಟಕಮೊದಲ ಪಟ್ಟಿಯ ಎಲ್ಲ ಅಭ್ಯರ್ಥಿಗಳು ಗೆಲ್ಲುವವರೇ: ಡಿಸಿಎಂ ಡಿ ಕೆ ಶಿವಕುಮಾರ್

ಮೊದಲ ಪಟ್ಟಿಯ ಎಲ್ಲ ಅಭ್ಯರ್ಥಿಗಳು ಗೆಲ್ಲುವವರೇ: ಡಿಸಿಎಂ ಡಿ ಕೆ ಶಿವಕುಮಾರ್

ಲೋಕಸಭೆ ಚುನಾವಣೆಗೆ ಈಗ ಪ್ರಕಟವಾಗಿರುವ ಏಳು ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಇದೇ 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ನಂತರ ಉಳಿದ ಹೆಸರುಗಳು ಅಂತಿಮವಾಗಲಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, “ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಪಟ್ಟಿಯಲ್ಲಿ ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. ಆದರೆ ಆಗಿಲ್ಲ. ಸ್ಥಳೀಯ ಶಾಸಕರು, ಮುಖಂಡರ ಜತೆ ಚರ್ಚೆ ಮಾಡಿದಾಗ ಅವರು ಯಾರ ಹೆಸರನ್ನ ಪ್ರಸ್ತಾಪ ಮಾಡಿರುತ್ತಾರೋ ಹಾಗೂ ನಮ್ಮ ಸಮೀಕ್ಷೆಗಳ ಆಧಾರದ ಮೇಲೆ ನಾವು ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ” ಎಂದರು.

17 ಕ್ಷೇತ್ರಗಳಿಗೆ ನೀವು ಪಟ್ಟಿ ತೆಗೆದುಕೊಂಡು ಹೋಗಿದ್ದೀರಿ ಎಂದು ಕೇಳಿದಾಗ, “ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ” ಎಂದರು.

ಎಐಸಿಸಿ ಕಚೇರಿಯಲ್ಲಿ ಕೆ.ಸಿ.ವೇಣುಗೇಪಾಲ್‌, ಅಜಯ್ ಮಕೇನ್‌, ಪವನ್ ಖೇರಾ ಅವರು ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಕರ್ನಾಟಕದ 7, ತೆಲಂಗಾಣದ 4, ಛತ್ತೀಸ್​ಗಡದ 6, ಕೇರಳದ 15, ಮೇಘಾಲಯದ 2, ನಾಗಲ್ಯಾಂಡ್, ಸಕ್ಕಿಂ​ ಹಾಗೂ ತ್ರಿಪುರದ ತಲಾ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸಿದೆ. ಈ ಮೂಲಕ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡಗಡೆ ಮಾಡಿದೆ.

ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ

ಶಿವಮೊಗ್ಗ- ಗೀತಾ ಶಿವರಾಜ್​ ಕುಮಾರ್
ತುಮಕೂರು- ಎಸ್​ಪಿ ಮುದ್ದಹನುಮೇಗೌಡ
ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
ಹಾಸನ- ಶ್ರೇಯಸ್ ಪಟೇಲ್
ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್
ವಿಜಯಪುರ- ಎಚ್​ಆರ್​ ಅಲ್ಗೂರ್​
ಹಾವೇರಿ: ಆನಂದ್ ಸ್ವಾಮಿ ಗಡ್ಡ ದೇವರಮಠ

ತೆಲಂಗಾಣದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ

ಈ ಪಟ್ಟಿಯಲ್ಲಿ ತೆಲಂಗಾಣದ ನಾಲ್ಕು ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಜಹೀರಾಬಾದ್ ಕ್ಷೇತ್ರ- ಸುರೇಶ್ ಕುಮಾರ್ ಶೆಟ್ಕರ್, ಚೇವೆಲ್ಲಾ ಕ್ಷೇತ್ರ ಸುನೀತಾ ಮಹೇಂದರ್ ರೆಡ್ಡಿ, ನಲ್ಗೊಂಡ ಕ್ಷೇತ್ರ- ಕುಂದೂರು ರಘುವೀರ್, ಮಹಬೂಬಾಬಾದ್ ಕ್ಷೇತ್ರ (ಎಸ್‌ಟಿ )- ಪೋರಿಕ ಬಲರಾಮ್ ನಾಯಕ್​ಗೆ ಟಿಕೆಟ್​ ನೀಡಲಾಗಿದೆ.

ಕೇರಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ

ವಯನಾಡ್ (ಕೇರಳ): ರಾಹುಲ್ ಗಾಂಧಿ
ಕಾಸರಗೋಡು (ಕೇರಳ): ರಾಜಮೋಹನ್ ಉಣ್ಣಿತ್ತಾನ್
ಕಣ್ಣೂರು (ಕೇರಳ): ಕೆ ಸುಧಾಕರನ್
ವಡಕರ (ಕೇರಳ): ಶಫಿ ಪರಂಬಿಲ್
ಕೋಝಿಕ್ಕೋಡ್ (ಕೇರಳ): ಎಂಕೆ ರಾಘವನ್
ಪಾಲಕ್ಕಾಡ್ (ಕೇರಳ): ವಿಕೆ ಶ್ರೀಕಂಠನ್
ಅಲತೂರ್(ಎಸ್‌ಸಿ) (ಕೇರಳ): ರೆಮ್ಯಾ ಹರಿದಾಸ್
ತ್ರಿಶೂರ್ (ಕೇರಳ): ಕೆ ಮರಳೀಧರನ್
ಚಾಲಕ್ಕುಡಿ (ಕೇರಳ): ಬೆನ್ನಿ ಬಹನ್ನಾನ್
ಎರ್ನಾಕುಲಂ(ಕೇರಳ): ಹಿಬಿ ಇಡೆನ್
ಇಡುಕ್ಕಿ(ಕೇರಳ): ಡೀನ್ ಕುರಿಯಾಕೋಸ್
ಮಾವೇಲಿಕರ(ಎಸ್‌ಸಿ)(ಕೇರಳ): ಕೋಡಿಕುನ್ನಿಲ್ ಸುರೇಶ್
ಪಟ್ಟಣಂತಿಟ್ಟ(ಕೇರಳ): ಆ್ಯಂಟೋ ಆ್ಯಂಟೋನಿ
ಅತ್ತಿಂಗಲ್(ಕೇರಳ): ಅಡೂರ್ ಪ್ರಕಾಶ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments