ಅಮೆರಿಕದ ದಾಳಿಯಲ್ಲಿ ಹತ್ಯೆಗೀಡಾದ ಅಲಿ ಖಮೇನಿ ಅವರ 56 ವರ್ಷದ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್ನ ನೂತನ ಪರಮೋಚ್ಛ ನಾಯಕನಾಗಿ ದೇಶದ ಶಿಯಾ ಧಾರ್ಮಿಕ ಪಂಡಿತರನ್ನೊಳಗೊಂಡ ಸಂಸ್ಥೆ Assembly of Experts ಆಯ್ಕೆ ಮಾಡಿದೆ ಎಂದು ವರದಿಯಾಗಿದೆ.
ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾನನ್ನು ಮುಂದಿನ ಪರಮೋಚ್ಛ ನಾಯಕನಾಗಿ ಆಯ್ಕೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ Iran International ಸುದ್ದಿ ಮಾಧ್ಯಮ ವರದಿ ಮಾಡಿದೆ.
ಈ ಬೆಳವಣಿಗೆ ಅಲಿ ಖಮೇನಿ ಅವರ ನಿಧನದ ನಂತರ ನಡೆದಿದೆ. ಅಮೆರಿಕಾ–ಇಸ್ರೇಲ್ ದಾಳಿಗಳ ಹಿನ್ನೆಲೆಯಲ್ಲಿ ಖಮೇನಿ ಹತ್ಯೆಗೀಡಾದಿದ್ದು, ಪಶ್ಚಿಮ ಏಷ್ಯಾದಾದ್ಯಂತ ಸಶಸ್ತ್ರ ಸಂಘರ್ಷಗಳನ್ನು ಹೆಚ್ಚಿಸಿವೆ. ಪರಮೋಚ್ಛ ನಾಯಕನ ಸ್ಥಾನವು ರಾಜ್ಯದ ಎಲ್ಲಾ ವಿಷಯಗಳ ಮೇಲೆ ಅಂತಿಮ ಅಧಿಕಾರವನ್ನೂ, ಇರಾನ್ನ ಸಶಸ್ತ್ರ ಪಡೆಗಳು ಹಾಗೂ ಪ್ರಭಾವಶಾಲಿ ರೆವಲ್ಯೂಷನರಿ ಗಾರ್ಡ್ ಮೇಲಿನ ನಿಯಂತ್ರಣವನ್ನು ಹೊಂದಿದೆ.
ಮೊಜತಬಾ ಅವರು ಇರಾನ್ನ ರೆವಲ್ಯೂಷನರಿ ಗಾರ್ಡ್ನೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ. ಬಿಕ್ಕಟ್ಟಿನ ಈ ಸಮಯದಲ್ಲಿ ದೇಶವನ್ನು ಮುನ್ನಡೆಸಲು, ದೇಶದ ಭದ್ರತೆ ಹಾಗೂ ಮಿಲಿಟರಿಯ ನಿರ್ವಹಣೆ ಮಾಡಲು ಮೊಜತಬಾ ಅವರಿಗೆ ಸಾಧ್ಯವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


