ಬೇರೆ ಜೈಲಿಗೆ ಆರೋಪಿ ನಟ ದರ್ಶನ್‌ನನ್ನು ಸ್ಥಳಾಂತರಿಸುವ ಬಗ್ಗೆ ಎರಡು ಮೂರು ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ಬೇರೆ ಜೈಲಿಗೆ ಸ್ಥಳಾಂತರಿಸುವ ತೀರ್ಮಾನ ನಾವು ಮಾಡಲು ಆಗಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ಸ್ಥಳಾಂತರ ಮಾಡಬೇಕು”ಎಂದರು.
:”ದರ್ಶನ್ ವಿಚಾರಣಾಧೀನಾ ಕೈದಿ ಆಗಿರುವ ಹಿನ್ನೆಲೆ ಕೆಲ ನಿಯಮಗಳಿವೆ. ಇನ್ನೂ ಎರಡು ಮೂರು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ” ಎಂದು ಹೇಳಿದರು.
“ದರ್ಶನ್‌ಗೆ ಕೆಲ ಸಿಬ್ಬಂದಿಗಳು ಸಹಾಯ ಮಾಡಿದ್ದಾರೆ. ಇದು ಸಿಸಿಟಿವಿಯಿಂದ ತಿಳಿದು ಬಂದಿದೆ. ಈಗಾಗಲೇ 9 ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿದೆ. ಸಿಸಿಟಿಯಲ್ಲಿ ಸೆರೆಯಾಗಿದ್ದಕ್ಕೆ ಕ್ರಮ ಕೈಗೊಳ್ಳುಲು ಸಾಧ್ಯವಾಯಿತು. ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಸಂಪೂರ್ಣ ತನಿಖಾ ವರದಿ ಬಂದ ನಂತರ ಉಳಿದವರ ಬಗ್ಗೆ ಕ್ರಮ ಕೈಗೊಳ್ಳಳಾಗುತ್ತದೆ” ಎಂದರು.
“ಇನ್ನು ಬೇರೆ ಜೈಲಿನಲ್ಲಿ ಏನು ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಲಾಗುತ್ತದೆ. ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗುವುದು. ಬೇರೆ ಬೇರೆ ಜೈಲುಗಳ ಅಕ್ರಮದ ಬಗ್ಗೆಯೂ ಪರಿಶೀಲನೆ ನಡೆಸುತ್ತೇವೆ. ಬೇರೆ ಜೈಲುಗಳಬಗ್ಗೆ ಹಿಂಡಿಲಗಾ ಜೈಲು ಸೇರಿ ಎಲ್ಲ ಕಾರಗೃಹಗಳ ವ್ಯವಸ್ಥೆ ಬಗ್ಗೆ ವರದಿಗೆ ಸೂಚನೆ ನೀಡಲಾಗಿದೆ” ಎಂದು ಪರಮೇಶ್ವರ್ ತಿಳಿಸಿದರು.