Homeಕರ್ನಾಟಕಪ್ರೇಯಸಿ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ನಕ್ಸಲ್‌ ಸಿಸಿಬಿ ವಶಕ್ಕೆ

ಪ್ರೇಯಸಿ ಭೇಟಿಯಾಗಲು ಬೆಂಗಳೂರಿಗೆ ಬಂದಿದ್ದ ನಕ್ಸಲ್‌ ಸಿಸಿಬಿ ವಶಕ್ಕೆ

ಪ್ರೇಯಸಿ ನೋಡಲು ಹರಿಯಾಣದಿಂದ ಬೆಂಗಳೂರು ನಗರಕ್ಕೆ ಬಂದಿದ್ದ ನಕ್ಸಲ್‌ ನೊಬ್ಬನನ್ನು ಸಿಸಿಬಿಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಬಂಧಿಸಿದ್ದಾರೆ.‌

ಹರಿಯಾಣ ಮೂಲದ ಅನಿರುದ್ಧ್‌ ಬಂಧಿತ ನಕ್ಸಲ್ ಆಗಿದ್ದು, ಈತ ಸಿಪಿಐ ಮಾವೋವಾದಿಗಳ‌ ಪರವಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಈತನನ್ನು‌ ಎಟಿಸಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಅನಿರುದ್ಧ್‌ ನಿಷೇಧಿತ ಬರಹಗಳನ್ನು ಸರ್ಕ್ಯೂಲೇಟ್ ಮಾಡುತ್ತಿದ್ದ. ಇದುವರೆಗೂ ಯಾವ ಪೊಲೀಸರಿಗೂ ಸಿಕ್ಕಿಬಿದ್ದಿರಲಿಲ್ಲ. ಲಾಡ್ಜ್‌ವೊಂದರಲ್ಲಿ ಉಳಿದುಕೊಂಡಿದ್ದ ನಕ್ಸಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.

ನಿಷೇಧಿತ ನಕ್ಸಲ್ ಸಂಘಟನೆಯಾಗಿರುವ ಸಿಪಿಐ(ಎಂ)ನಲ್ಲಿ ಅನಿರುದ್ಧ್‌ ತನ್ನನ್ನು ತೊಡಗಿಸಿಕೊಂಡಿದ್ದ. ನಿಷೇಧಿತ ಸಂಘಟನೆ ಪರ ಕೆಲಸ ಮಾಡುತ್ತಾ ಹಣ ಸಂಗ್ರಹ, ಗುಪ್ತ ಸಭೆಗಳನ್ನು ನಡೆಸುತ್ತಿದ್ದ.

ತನ್ನ ಗೆಳತಿ ನೋಡಲು ಮೂರ್ನಾಲ್ಕು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ. ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ. ಸದ್ಯ ಬಂಧಿತನಿಂದ ಎರಡು ಬ್ಯಾಗ್‌ಗಳು, ಪೆನ್ ಡ್ರೈವ್‌ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ.

ಈ ವೇಳೆ ಆತನ ಮೇಲೆ ನಿಗಾ ಇಟ್ಟಿದ್ದ ಎಟಿಸಿ ತಂಡ ಅನಿರುದ್ದನನ್ನು ಬಂಧಿಸಿ ಯುಎಪಿಎ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments