Homeಕರ್ನಾಟಕಕರ್ನಾಟಕ ಅರಣ್ಯ ಇಲಾಖೆಯ ಪಡೆಗಳ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

ಕರ್ನಾಟಕ ಅರಣ್ಯ ಇಲಾಖೆಯ ಪಡೆಗಳ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

ಕರ್ನಾಟಕ ಅರಣ್ಯ ಇಲಾಖೆಯ ಪಡೆಗಳ ಮುಖ್ಯಸ್ಥರಾಗಿ ( ಎಚ್‌ಒಎಫ್‌ಎಫ್) ಹಿರಿಯ ಐಎಫ್‌ಎಸ್ ಅಧಿಕಾರಿ ಮೀನಾಕ್ಷಿ ನೇಗಿ ನೇಮಕವಾಗಿದ್ದಾರೆ. ರಾಜ್ಯ ಸರ್ಕಾರ ಗುರುವಾರ ನೇಮಕಾತಿ ಆದೇಶವನ್ನು ಹೊರಡಿಸಿದೆ.

ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ಅರಣ್ಯ ಇಲಾಖೆಯಲ್ಲಿ ಹಲವಾರು ಮಹಿಳೆಯರು ಸೇವೆ ಸಲ್ಲಿಸಿದ್ದರೂ ಇಲಾಖೆಯ ಅತ್ಯುನ್ನತ ಹುದ್ದೆ ಅಲಂಕರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ಐಎಫ್‌ಎಸ್ ಹಿರಿಯ ಮಹಿಳಾ ಅಧಿಕಾರಿ ಮೀನಾಕ್ಷಿ ನೇಗಿ ಚುಕ್ಕಾಣಿ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಮೀನಾಕ್ಷಿ ನೇಗಿ ಅವರು ಮೂಲತಃ ಉತ್ತರಖಂಡ ರಾಜ್ಯದವರು. ಐಎಫ್‌ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಗೊಂಡವರು. 1989ರ ಬ್ಯಾಚ್‌ ಕರ್ನಾಟಕ ಕೇಡರ್‌ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೀನಾಕ್ಷಿ ನೇಗಿ ಅವರು ಅವರು ಅರಣ್ಯ ಪಡೆಗಳ ಮುಖ್ಯಸ್ಥರಾಗುವ ಮೊದಲು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದರು.

ಭಾರತದ ಆಡಳಿತ ವಲಯದಲ್ಲಿ ಅತ್ಯುತ್ತಮ ಹಾಗೂ ದಕ್ಷ ಅಧಿಕಾರಿ ಎಂದೇ ಅವರು ಹೆಸರು ಮಾಡಿದವರು. ಕರ್ನಾಟಕದ ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿ ಡಿಸಿಎಫ್ ಆಗಿ ಸೇವೆ ಸಲ್ಲಿಸಿದವರು. ಬಳ್ಳಾರಿಯಲ್ಲಿ ಡಿಸಿಎಫ್ ಆಗಿ ಆವರು ಮಾಡಿದ ಕೆಲಸವನ್ನು ಈಗಲೂ ಆ ಭಾಗದವರು ನೆನಪಿಸಿಕೊಳ್ಳುತ್ತಾರೆ. ನಾಲ್ಕು ವರ್ಷ ಮಂಡ್ಯದಲ್ಲೂ ಡಿಸಿಎಫ್ ಆಗಿ ಗಮನ ಸೆಳೆಯುವ ಕೆಲಸ ಮಾಡಿದವರು ಮೀನಾಕ್ಷಿ ನೇಗಿ, ಟಿಂಬರ್ ಮಾರಾಟಕ್ಕೆ ಆನ್‌ಲೈನ್ ಸ್ವರೂಪ ನೀಡಿದವರು. ಆನಂತರ ಕೇಂದ್ರ ಸೇವೆಗೆ ತೆರಳಿ ಅಲ್ಲಿ ಆಯುಷ್ ಇಲಾಖೆ ಜಂಟಿ ಕಾರ್ಯದರ್ಶಿಯಾಗಿದ್ದವರು.

ಮೀನಾಕ್ಷಿ ನೇಗಿ ಅವರ ಪತಿ ವಿಜಯ ಶರ್ಮ ಕೂಡ ಕರ್ನಾಟಕ ಕೇಡರ್ ಐಎಫ್‌ಎಸ್‌ ಅಧಿಕಾರಿಯಾಗಿದ್ದರು. ಅತ್ಯುತ್ತಮ ಅಧಿಕಾರಿಯಾಗಿ ಹೆಸರು ಮಾಡಿದವರು. ಕರ್ನಾಟಕ ಸರ್ಕಾರಿ ಸ್ವಾಮ್ಯದ ಜಂಗಲ್ ರೆಸಾರ್ಟ್ ಎಂಡಿಯಾಗಿ ಅದಕ್ಕೆ ಹೊಸ ರೂಪ ನೀಡಿದವರು. ಅವರು ಜನವರಿಯಲ್ಲಿ ನಿವೃತ್ತರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments