Homeಕರ್ನಾಟಕ'ನಂದಿನಿ' ಬ್ರಾಂಡ್‌ನ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ, ಸಿದ್ದರಾಮಯ್ಯ ಬಿಡುಗಡೆ

‘ನಂದಿನಿ’ ಬ್ರಾಂಡ್‌ನ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ, ಸಿದ್ದರಾಮಯ್ಯ ಬಿಡುಗಡೆ

ನಂದಿನಿ ವತಿಯಿಂದ ಪ್ರಥಮ ಬಾರಿಗೆ ಗ್ರಾಹಕರಿಗೆ ಒದಗಿಸಲು ತಯಾರಿಸಿರುವ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ಮಾರುಕಟ್ಟೆಗೆ ಬಂದಿದೆ.

ವಿಧಾನಸೌಧದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನಂದಿನಿ ಬ್ರಾಂಡ್‌ನ ‘ರೆಡಿ ಟು ಕುಕ್’ ನಂದಿನಿ ವೇ ಪ್ರೋಟೀನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.

ಕೆಎಂಎಫ್ ಬಿಡುಗಡೆ ಮಾಡಿರುವ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ ಶೇ.5ರಷ್ಟು ಪ್ರೋಟೀನ್ ಅಂಶವನ್ನು ಮಿಶ್ರ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಎರಡು ವಿಧದ ಪ್ಯಾಕೆಟ್ ಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 450 ಗ್ರಾಂ. ತೂಕದ ಪ್ಯಾಕೆಟ್‌ಗೆ ₹40 ಹಾಗೂ 900 ಗ್ರಾಂ. ತೂಕದ ಪ್ಯಾಕೆಟ್‌ಗೆ ₹80 ಗರಿಷ್ಠ ಮಾರಾಟ ದರ ನಿಗದಿಪಡಿಸಲಾಗಿದೆ.

ಬಿಡುಗಡೆ ಸಂದರ್ಭದಲ್ಲಿ ಸಚಿವರಾದ ವೆಂಕಟೇಶ್ವರ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆ.ಎಂ.ಎಫ್. ಅಧ್ಯಕ್ಷ ಭೀಮಾನಾಯ್ಕ, ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಸ್ವಾಮಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments