Homeಕರ್ನಾಟಕನವಜಾತ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್!

ನವಜಾತ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್!

ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ನಾಗರಿಕ ಸಮಾಜ ಬೆಚ್ಚಿಬೀಳುವಂಥ ಆಘಾತಕಾರಿ ಕೃತ್ಯವೊಂದು ನಡೆದಿದ್ದು, ನವಜಾತ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಲಾಗಿದೆ.

ಬುಧವಾರ ರಾತ್ರಿ ಈ ಅಮಾನವೀಯ ವಿದ್ಯಮಾನ ನಡೆದಿದ್ದು, ಗುರುವಾರ ಬೆಳಕಿಗೆ ಬಂದಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಗೆ ಬಂದು ಶಿಶುವಿಗೆ ಜನ್ಮ ಕೊಟ್ಟಿರುವುದೇ ಅಥವಾ ಮಗು ಜನಿಸಿದ್ದನ್ನು ಮುಚ್ಚಿಡಲು ಮಾಡಿದ ಕೃತ್ಯವೇ ಎಂಬ ಬಗ್ಗೆ ಸದ್ಯ ತನಿಖೆ ನಡೆಯುತ್ತಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇನ್ನಷ್ಟು ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ.

ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್​ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್​​ನಲ್ಲಿ‌ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ‌ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚಿಸಿದ್ದಾರೆ. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಕ್ಲೀನ್ ಮಾಡಿದ್ದಾರೆ. ಆಗ ಏನೋ‌ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.

ಟಾಯ್ಲೆಟ್ ಶುಚಿಗೊಳಿಸುವ ಬ್ಲಾಕ್ ನಿರ್ಮೂಲನೆಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈಗ ಶಿಶುವಿನ ಮೃತದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಟಾಯ್ಲೆಟ್ ಒಳಗೆ ನವಜಾತ ಶಿಶು ಹೇಗೆ ಬಂದಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಯಾವ ತಾಯಿ ಕೂಡ ಹೀಗೆ ಮಾಡಲು ಸಾಧ್ಯವೇ ಎಂದು ಸ್ಥಳದಲ್ಲಿದ್ದವರು ಕಳವಳ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments