ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ನಡೆಯುತ್ತಿರುವ ಯುದ್ಧವು ಈಗ ಕೊನೆಗೊಳ್ಳುತ್ತದೆ. ಇಸ್ರೇಲ್‌ನ ಭದ್ರತಾ ಕ್ಯಾಬಿನೆಟ್ ಮಂಗಳವಾರ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ತನ್ನ ಒಪ್ಪಂದವನ್ನು ಘೋಷಿಸಿದೆ. ನ.27ರಿಂದಲೇ ಕದನ ವಿರಾಮ ಜಾರಿಯಾಗುವ ಸಾಧ್ಯತೆ ಇದೆ.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲಿ ಭದ್ರತಾ ಕ್ಯಾಬಿನೆಟ್ ಲೆಬನಾನ್‌ನಲ್ಲಿ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದ್ದಾರೆ.
ಇಸ್ರೇಲ್ ಜನರನ್ನು ಉದ್ದೇಶಿಸಿ ಮಾತನಾಡಿದ ನೆತನ್ಯಾಹು, “ನಾವು ಮಧ್ಯಪ್ರಾಚ್ಯದ ಮುಖವನ್ನು ಬದಲಾಯಿಸುತ್ತಿದ್ದೇವೆ. ಉತ್ತಮ ಒಪ್ಪಂದವು ಕಾರ್ಯಗತಗೊಳಿಸಬಹುದಾದವುಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.
ಅಮೆರಿಕ ರೂಪಿಸಿದ ಯೋಜನೆಯಂತೆ ಹಿಬ್ಬುಲ್ಲಾ ಸಂಘಟನೆಯೊಂದಿಗೆ ಕದನವಿರಾಮ ಘೋಷಿಸುವ ಸಂಬಂಧ ಇಸ್ರೇಲ್‌ನ ಸಂಪುಟವು ಮಂಗಳವಾರ ಒಪ್ಪಿಗೆ ನೀಡುವ ಸಂಭವವಿದೆ. ಈ ಮೂಲಕ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಇಸ್ರೇಲ್-ಹಿಜ್ಜುಲ್ಲಾ ಯುದ್ಧವು ಅಂತ್ಯಗೊಳ್ಳುವ ಸಾಧ್ಯತೆ ಇದೆ.
ಕದನವಿರಾಮ ಘೋಷಣೆಯಾದರೆ ಅದನ್ನು ಜಾರಿಗೊಳಿಸಲು 60 ದಿನಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಹಿಬ್ಬುಲ್ಲಾದ ಹಿಡಿತದಲ್ಲಿರುವ ಲೆಬನಾನ್‌ನ ದಕ್ಷಿಣ ಭಾಗದಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು ಇಸ್ರೇಲ್ ವಾಪಸ್ ಕರೆಸಿಕೊಳ್ಳಬೇಕು. ಜೊತೆಗೆ, ಈ ಪ್ರದೇಶದಲ್ಲಿ ಲೆಬನಾನ್ ತನ್ನ ಸೈನ್ಯ ನಿಯೋಜನೆಗೊಳ್ಳಬೇಕು. ಜೊತೆಗೆ, ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯೂ ಇರಲಿದೆ ಎನ್ನಲಾಗಿದೆ.
ಕದನವಿರಾಮ ಕುರಿತು ನಿಗಾ ಇರಿಸಲು ಅಮೆರಿಕ ಅಧ್ಯಕ್ಷತೆಯ ಅಂತರರಾಷ್ಟ್ರೀಯ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ಹೇಳಲಾಗಿದೆ. ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ದಾಳಿಗೆ ಲೆಬನಾನ್ 3,750 ಮಂದಿ ಮೃತಪಟ್ಟಿದ್ದಾರೆ ಹಾಗೂ 10 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.