Homeದೇಶಮಣಿಪುರ | ಜಿರಿಬಾಮ್ ಜಿಲ್ಲೆಯಲ್ಲಿ ಮೂವರು ಮಹಿಳೆಯರ ಶವ ಪತ್ತೆ

ಮಣಿಪುರ | ಜಿರಿಬಾಮ್ ಜಿಲ್ಲೆಯಲ್ಲಿ ಮೂವರು ಮಹಿಳೆಯರ ಶವ ಪತ್ತೆ

ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಮೆಟೀಸ್‌ನ ಆರು ಮಂದಿ ಸದಸ್ಯರು ನಾಪತ್ತೆಯಾದ ನಂತರ ಮಣಿಪುರ-ಅಸ್ಸಾಂ ರಾಜ್ಯಗಳ ಗಡಿಯ ಸಮೀಪ ಶುಕ್ರವಾರ ರಾತ್ರಿ ಮೂರು ಕೊಳೆತ ಶವಗಳು ಪತ್ತೆಯಾಗಿವೆ.

ಮೃತದೇಹಗಳ ಗುರುತು ಇನ್ನೂ ಸಿಕ್ಕಿಲ್ಲ. ನಿನ್ನೆ ಸಂಜೆ ಮರಣೋತ್ತರ ಪರೀಕ್ಷೆಗಾಗಿ ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗೆ ತರಲಾಯಿತು.

ಮಣಿಪುರದ ಜಿರಿಬಾಮ್ ಜಿಲ್ಲೆಯಿಂದ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಕಳೆದ ಸೋಮವಾರ ನಾಪತ್ತೆಯಾಗಿದ್ದರು. ಜಿರಿಬಾಮ್ ತನ್ನ ಗಡಿಯನ್ನು ಅಸ್ಸಾಂನ ಕ್ಯಾಚಾರ್ ಜಿಲ್ಲೆಯೊಂದಿಗೆ ಹಂಚಿಕೊಂಡಿದ್ದು, ಸಿಲ್ಚಾರ್ ಪ್ರಧಾನ ಕಛೇರಿಯಾಗಿದೆ.

ಉಗ್ರರು ಅಪಹರಿಸಿದ್ದಾರೆ ಎನ್ನಲಾದ ಆರು ಮಂದಿಯನ್ನು ರಕ್ಷಿಸುವಂತೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಹೊತ್ತಿನಲ್ಲಿಯೇ ಶವಗಳು ಪತ್ತೆಯಾಗಿರುವ ಸುದ್ದಿ ಹೊರಬಿದ್ದಿದೆ.

ಈ ಘಟನೆಯ ನಂತರ, 13 ನಾಗರಿಕ ಸಮಾಜ ಸಂಘಟನೆಗಳು ಕಳೆದ ಬುಧವಾರ ಇಂಫಾಲ್ ಕಣಿವೆಯಲ್ಲಿ ಬಂದ್ ನಡೆಸಿದ್ದು, ಆರು ವ್ಯಕ್ತಿಗಳ ಬಿಡುಗಡೆಗೆ ಸರ್ಕಾರದ ಮಧ್ಯಸ್ಥಿಕೆಗೆ ಒತ್ತಾಯಿಸಿವೆ.

ಅಂತರರಾಜ್ಯ ಗಡಿಯಲ್ಲಿ ಅಪಹರಣ ನಡೆದ 15 ಕಿಲೋಮೀಟರ್ ದೂರದ ನದಿ ಬಳಿ ಕೊಳೆತ ಸ್ಥಿತಿಯಲ್ಲಿದ್ದ ಈ ಶವಗಳು ಪತ್ತೆಯಾಗಿವೆ. ಆದರೆ ಈ ಮೃತದೇಹಗಳು ಅಪಹರಣಕ್ಕೆ ಒಳಗಾಗಿರುವವರದ್ದೇ ಎನ್ನುವುದು ಇನ್ನೂ ದೃಢಪಟ್ಟಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments