Homeಕರ್ನಾಟಕ2025ನೇ ವರ್ಷದ ಸಾರ್ವತ್ರಿಕ ರಜಾ ದಿನ ಪಟ್ಟಿಗೆ ಸಂಪುಟ ಒಪ್ಪಿಗೆ, ಈ ವರ್ಷ ಎಷ್ಟು ರಜೆ?

2025ನೇ ವರ್ಷದ ಸಾರ್ವತ್ರಿಕ ರಜಾ ದಿನ ಪಟ್ಟಿಗೆ ಸಂಪುಟ ಒಪ್ಪಿಗೆ, ಈ ವರ್ಷ ಎಷ್ಟು ರಜೆ?

2025ನೇ ವರ್ಷದ ಸಾರ್ವತ್ರಿಕ ರಜಾ ದಿನಗಳು ಮತ್ತು ಪರಿಮಿತ ರಜಾ ದಿನಗಳ ಪಟ್ಟಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಮುಂದಿನ ವರ್ಷದಲ್ಲಿ 19 ಸಾರ್ವತ್ರಿಕ ರಜಾ ದಿನಗಳು ಮತ್ತು 20 ಪರಿಮಿತ ರಜಾ ದಿನಗಳು ಇರಲಿವೆ.

ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.

ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.

ಇನ್ನು ದಿನಾಂಕ 03/09/2025 (ಬುಧವಾರ) ಕೈಲ್ ಮೂಹರ್ತ, ದಿನಾಂಕ 18/10/2025 (ಶನಿವಾರ) ತುಲ ಸಂಕ್ರಮಣ ಹಾಗೂ ದಿನಾಂಕ 05/12/2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.

2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು

14.01.2025, ಮಂಗಳವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26.02.2025, ಬುಧವಾರ. ಮಹಾಶಿವರಾತ್ರಿ
31.03.2025, ಸೋಮವಾರ. ಖುತುಬ್-ಎ-ರಂಜಾನ್
10.04.2025, ಗುರುವಾರ. ಮಹಾವೀರ ಜಯಂತಿ
14.04.2025, ಸೋಮವಾರ. ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
18.04.2025, ಶುಕ್ರವಾರ. ಗುಡ್‌ ಫ್ರೈಡೆ
30.04.2025, ಬುಧವಾರ. ಬಸವ ಜಯಂತಿ, ಅಕ್ಷಯ ತೃತೀಯ
1.05.2025, ಗುರುವಾರ. ಕಾರ್ಮಿಕ ದಿನಾಚರಣೆ
7.06.2025, ಶನಿವಾರ. ಬಕ್ರೀದ್
15.08.2025, ಶುಕ್ರವಾರ. ಸ್ವಾತಂತ್ರ್ಯ ದಿನಾಚರಣೆ
27.08.2025, ಬುಧವಾರ. ವರಸಿದ್ಧಿ ವಿನಾಯಕ ವ್ರತ
5.09.2025, ಶುಕ್ರವಾರ. ಈದ್-ಮಿಲಾದ್
1.10.2025, ಬುಧವಾರ. ಮಹಾನವಮಿ, ಆಯುಧಪೂಜೆ, ವಿಜಯದಶಮಿ
2.10.2025, ಗುರುವಾರ. ಗಾಂಧಿ ಜಯಂತಿ
7.10.2025, ಮಂಗಳವಾರ. ವಾಲ್ಮೀಕಿ ಜಯಂತಿ
20.10.2025, ಸೋಮವಾರ. ನರಕ ಚತುದರ್ಶಿ
22.10.2025, ಬುಧವಾರ. ಬಲಿಪಾಡ್ಯಮಿ, ದೀಪಾವಳಿ
01.11.2025, ಶನಿವಾರ. ಕನ್ನಡ ರಾಜೋತ್ಸವ
25.12.2025, ಗುರುವಾರ. ಕ್ರಿಸ್‌ಮಸ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments