Homeಕರ್ನಾಟಕಕೋವಿಡ್‌ ಹಗರಣ | ಸಾವಿರಾರು ಜನರ ಜೀವದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟ: ನ್ಯಾ. ಮೈಕಲ್...

ಕೋವಿಡ್‌ ಹಗರಣ | ಸಾವಿರಾರು ಜನರ ಜೀವದ ಜೊತೆ ಬಿಜೆಪಿ ಸರ್ಕಾರ ಚೆಲ್ಲಾಟ: ನ್ಯಾ. ಮೈಕಲ್ ಡಿಕುನ್ನ ಆಯೋಗ ವರದಿಯಲ್ಲಿ ಉಲ್ಲೇಖ

ಕಳೆದ ಬಿಜೆಪಿ ಸರ್ಕಾರ ಕೋವಿಡ್‌ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಒಟ್ಟು 447.00 ಕೋಟಿ ರೂ. ಅನುದಾನವನ್ನು ಸಮರ್ಪಕವಾಗಿ ಬಳಸದೇ ಜನಸಾಮಾನ್ಯರ ಜೀವದ ಜೊತೆ ಚೆಲ್ಲಾಟವಾಡಿದೆ. ಇದರಿಂದ, ಜನರನ್ನು ಕೋವಿಡ್-19 ನಿಂದ ಜೀವ ರಕ್ಷಣೆ ಮಾಡಬೇಕಾದ ಸರ್ಕಾರ ಸಾವಿರಾರು ಜನರ ಸಾವಿಗೆ ಕಾರಣವಾಗಿದೆ ಎಂದು ನ್ಯಾಯಮೂರ್ತಿ ಮೈಕಲ್‌ ಡಿಕುನ್ಹ ಆಯೋಗ ತನಿಖಾ ವರದಿಯಲ್ಲಿ ಗಂಭೀರವಾಗಿ ಆರೋಪಿಸಿದೆ.

ಕೋವಿಡ್ ನಿರ್ವಹಣೆಗಾಗಿ ನಡೆಸಿದ ಖರೀದಿಯಲ್ಲಿನ ಅಕ್ರಮ ಪತ್ತೆಗೆ ರಾಜ್ಯ ಸರ್ಕಾರವು ರಚಿಸಿದ್ದ ಆಯೋಗವು ಸಲ್ಲಿಸಿರುವ ವರದಿಯ ಕೆಲಭಾಗಗಳು ಮತ್ತು ಅದರ ಮೇಲೆ ಕ್ರಮ ತೆಗೆದುಕೊಳ್ಳಲು ಸಿದ್ಧಪಡಿಸಿರುವ ಟಿಪ್ಪಣಿ ಮಾಧ್ಯಮಗಳಿಗೆ ಸೋರಿಕೆಯಾಗಿದೆ.

ಕೋವಿಡ್ ನಿರ್ವಹಣೆಗಾಗಿ ನಡೆದ ಖರೀದಿಯಲ್ಲಿ ನಿಯಮಗಳ ಉಲ್ಲಂಘನೆಯಿಂದ ಅಪಾರ ನಷ್ಟವಾಗಿದ್ದು, ಅದರಲ್ಲಿ ₹187.8 ಕೋಟಿಯವನ್ನು ವಸೂಲಿ ಮಾಡಬೇಕು. ಈ ಖರೀದಿ ಒಪ್ಪಂದ ಮಾಡಿಕೊಂಡ ಅಧಿಕಾರಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಬೇಕು ಎಂದು ನ್ಯಾಯಮೂರ್ತಿ ಮೈಕಲ್ ಡಿಕುನ್ನ ಆಯೋಗವು ಶಿಫಾರಸು ಮಾಡಿದೆ.

ಜಸ್ಟೀಸ್ ಮೈಕೆಲ್ ಕುನ್ನಾ ಕೋವಿಡ್-19 ಹಗರಣದ ಸಂಕ್ಷಿಪ್ತ ಸಾರಾಂಶ

ರಾಷ್ಟ್ರೀಯ ಆರೋಗ್ಯ ಮಿಷನ್ ಇಂದ ಕೋವಿಡ್-19 ಸಾಮಗ್ರಿಗಳ ಖರೀದಿ ವಿವರ

ಕೋವಿಡ್-19 ಸಂಧರ್ಭದಲ್ಲಿ 447.00 ಕೋಟಿ ರೂ. ಅನುದಾನ ಖರ್ಚು ಮಾಡದೇ ಉಳಿಸಿಕೊಂಡಿರುವುದು.

  • ಕೋವಿಡ್-19ಕ್ಕೆ ಸ್ವೀಕರಿಸಿದ ಒಟ್ಟು ಅನುದಾನ 1742.42 ಕೋಟಿ ರೂ.
  • ಇದರಲ್ಲಿ ಜಿಲ್ಲೆಗಳಿಗೆ ಬಿಡುಗಡೆಯಾದ ಅನುದಾನ 277.00 ಕೋಟಿ ರೂ.
  • ರಾಜ್ಯ ಮಟ್ಟದ ಅನುಷ್ಠಾನ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನ 1121.86 ರೂ.
  • ಎಂ.ಡಿ. ರಾಷ್ಟ್ರೀಯ ಅರೋಗ್ಯ ಮಿಷನ್ ಇವರ ಕಛೇರಿಗೆ ಬಿಡುಗಡೆಯಾದ ಅನುದಾನ 24.00 ಕೋಟಿ ರೂ.
  • ಇದರಲ್ಲಿ ಒಟ್ಟಾಗಿ ಖರ್ಚಾಗಿರುವ ಅನುದಾನ 140656.53 ಲಕ್ಷ ರೂ.
  • ಒಟ್ಟು 340.85 ಕೋಟಿ ರೂ. ಅನುದಾನ ಕೋವಿಡ್-19 ಅತ್ಯಂತ ತುರ್ತು ಸಂಧರ್ಭದಲ್ಲಿ ಬಳಕೆಯಾಗದೇ ಸಂಬಂಧಪಟ್ಟವರಿಗೆ ಕಿಕ್ ಬ್ಯಾಕ್ ಬರದೇ ಇರುವುದರಿಂದ ಸದರಿ ಅನುದಾನದ ಸಮರ್ಪಕ ಬಳಕೆಯಾಗಿರುವುದಿಲ್ಲ.

ECRP-1 (Emergency Covid Response Plan-1)

ಬಿಡುಗಡೆಯಾದ ಅನುದಾನ 43,764.00 ಲಕ್ಷ ರೂ.
ಖರ್ಚಾದ ಅನುದಾನ 33,115.84 ಲಕ್ಷ ರೂ.
ಖರ್ಚಾಗದೇ ಬಾಕಿ ಉಳಿದ ಅನುದಾನ 10,648.16 ಲಕ್ಷ ರೂ.

ಅರ್ಹತೆಯಿಲ್ಲದ ಖಾಸಗಿ ಲ್ಯಾಬ್‌ಗಳಿಗೆ RTPCR Testಗೆ ಅನುಮೋದನೆ ನೀಡಿದ್ದು

  1. ICMR ಮಾರ್ಗಸೂಚಿಯನ್ವಯ ಅರ್ಹತೆಯಿಲ್ಲದ 14 ಖಾಸಗಿ ಲ್ಯಾಬ್‌ಗಳಿಗೆ 6.93 ಕೋಟಿ ರೂ. ಪಾವತಿಸಿರುತ್ತಾರೆ.
  2. ಇದರಿಂದಾಗಿ, ತಾಂತ್ರಿಕ ಅರ್ಹತೆಯಿಲ್ಲದ ಖಾಸಗಿ ಲ್ಯಾಬ್‌ಗಳಿಗೆ ಒಳಒಪ್ಪಂದ ಮಾಡಿಕೊಂಡು ಯಾವುದೇ ಸರ್ಕಾರಿ ಆದೇಶ ನೀಡದೇ ಅತ್ಯಂತ ಗಂಭೀರವಾದ ಕೋವಿಡ್-19 ಸ್ಯಾಂಪಲ್‌ಗಳನ್ನು ಸದರಿ ಲ್ಯಾಬ್‌ಗಳಿಗೆ ಟೆಸ್ಟ್‌ಗಾಗಿ ಕಳುಹಿಸಿದ್ದರಿಂದ ಸಾವಿರಾರು ಜನರ ಜೀವದ ಜೊತೆ ಚೆಲ್ಲಾಟವಾಡಿದಂತಾಗಿದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments