Homeಕರ್ನಾಟಕಅಲ್ ಖೈದಾ ಉಗ್ರರ ಜೊತೆ ನಂಟು, ಕರ್ನಾಟಕ 9 ರಾಜ್ಯಗಳಲ್ಲಿ ಎನ್‌ಐಎ ದಾಳಿ

ಅಲ್ ಖೈದಾ ಉಗ್ರರ ಜೊತೆ ನಂಟು, ಕರ್ನಾಟಕ 9 ರಾಜ್ಯಗಳಲ್ಲಿ ಎನ್‌ಐಎ ದಾಳಿ

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳ ತಂಡ ಸೋಮವಾರ (ನ.12) ಕರ್ನಾಟಕ ಸೇರಿದಂತೆ ದೇಶದ 9 ರಾಜ್ಯಗಳಲ್ಲಿ ದಾಳಿ ಮಾಡಿ, ಶೋಧ ಕಾರ್ಯಾಚರಣೆ ನಡೆಸಿದೆ.

ದಾಳಿ ಸಂದರ್ಭದಲ್ಲಿ ಅಧಿಕಾರಿಗಳು ಶಂಕಿತ ವ್ಯಕ್ತಿಗಳ ಬ್ಯಾಂಕಿಂಗ್ ವಹಿವಾಟು ವಿವರ, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಹಾಗೂ ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದಾರೆ. ಜೊತೆಗೆ ಅಲ್ ಖೈದಾ ಉಗ್ರ ಸಂಘಟನೆ ಕುರಿತು ಪ್ರಚಾರ, ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳ ವಿರುದ್ದ ಜಮ್ಮು-ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಆಸ್ಸಾಂನ 9 ಕಡೆ ದಾಳಿ ಮಾಡಲಾಗಿದೆ.

ಮೊಹಮ್ಮದ್, ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ, ಅಜರುಲ್ ಇಸ್ಲಾಂ, ಅಬ್ದುಲ್ ಲತೀಫ್ ಎಂದು ಗುರುತಿಸಲಾದ ವ್ಯಕ್ತಿ ಹಾಗೂ ನಾಲ್ವರು ಬಾಂಗ್ಲಾದೇಶ ಪ್ರಜೆಗಳು ಸೇರಿ 2023ರ ನವೆಂಬರ್‌ನಲ್ಲಿ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಬಂಧಿತನಾಗಿದ್ದ ಐದನೇ ಆರೋಪಿ ಫರೀದ್ ಭಾರತೀಯ ಪ್ರಜೆಯಾಗಿದ್ದ ಎಂದು ಎನ್ಐಎ ತಿಳಿಸಿದೆ.

2023ರ ನವೆಂಬರ್‌ನಲ್ಲಿ, ಮೊಹಮ್ಮದ್ ಎಂದು ಗುರುತಿಸಲಾದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಐವರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ ಅಲಿಯಾಸ್​ ಮುನ್ನಾ ಖಾನ್, ಅಜರುಲ್ ಇಸ್ಲಾಂ ಅಲಿಯಾಸ್​ ಜಹಾಂಗೀರ್ ಅಥವಾ ಆಕಾಶ್ ಖಾನ್, ಅಬ್ದುಲ್ ಲತೀಫ್ ಅಲಿಯಾಸ್​ ಮೊಮಿನುಲ್ ಅನ್ಸಾರಿ ಮತ್ತು ಐದನೇ ಆರೋಪಿ ಫರೀದ್ ಭಾರತೀಯ ಪ್ರಜೆಯಾನ್ನು ಬಂಧಿಸಲಾಗಿತ್ತು ಎಂದು ಎನ್​ಐಎ ತಿಳಿಸಿದೆ.

ಬಂಧಿತ ಆರೋಪಿಗಳು ತಮ್ಮ ಉಗ್ರ ಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬುದು ಎನ್‌ಐಎ ತನಿಖೆಯಿಂದ ತಿಳಿದು ಬಂದಿತ್ತು. ಉಗ್ರ ಚಟುವಟಿಕೆ ನಡೆಸಲು ಭಾರತದಲ್ಲಿನ ಮುಸ್ಲಿಂ ಯುವಕರನ್ನು ಪ್ರೇರೇಪಿಸುವಲ್ಲಿ ಬಂಧಿತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಜತೆಗೆ ಅಲ್ ಖೈದಾದ ಹಿಂಸಾತ್ಮಕ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದರು. ಅಲ್-ಖೈದಾಗೆ ಹಣ ಸಂಗ್ರಹಿಸಿ ಕಳುಹಿಸಿಕೊಡುತ್ತಿದ್ದರು. ಆರೋಪಿಗಳು ತಮ್ಮ ಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲು ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಎಂದು ಎನ್ಐಎ ಮಾಹಿತಿ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments