Homeಕರ್ನಾಟಕನಮ್ಮ ಸರ್ಕಾರದ ಅವಧಿಯಲ್ಲೇ ಕಲ್ಯಾಣ ಕರ್ನಾಟಕದ 50 ಸಾವಿರ ಹುದ್ದೆ ಭರ್ತಿ: ಸಚಿವ‌ ಶರಣಪ್ರಕಾಶ್ ಪಾಟೀಲ್...

ನಮ್ಮ ಸರ್ಕಾರದ ಅವಧಿಯಲ್ಲೇ ಕಲ್ಯಾಣ ಕರ್ನಾಟಕದ 50 ಸಾವಿರ ಹುದ್ದೆ ಭರ್ತಿ: ಸಚಿವ‌ ಶರಣಪ್ರಕಾಶ್ ಪಾಟೀಲ್ ಭರವಸೆ

2013-18 ರ ಅವಧಿಯಲ್ಲಿ ಕಕ ಭಾಗದ13,000 ಶಿಕ್ಷಕರು ಸೇರಿದಂತೆ 30,000 ಖಾಲಿ ಹುದ್ದೆಗಳನ್ನು‌ ಭರ್ತಿ ಮಾಡಲಾಗಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ 6,500 ಶಿಕ್ಷಕರು ಸೇರಿದಂತೆ 15,000 ಖಾಲಿ ಹುದ್ದೆ ತುಂಬಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ‌ ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕಲಬುರಗಿಯ ನಗರಾಭಿವೃದ್ದಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, “ನಂತರ ಎರಡು ವರ್ಷದ ಅವಧಿಯಲ್ಲಿ 25,000 ಹುದ್ದೆ ತುಂಬಲಾಗುವುದು” ಎಂದು ಭರವಸೆ ನೀಡಿದರು.

“ನಮ್ಮ ಸರ್ಕಾರದ ಅವಧಿ ಮುಗಿಯುವದರೊಳಗೆ 50,000 ಖಾಲಿ‌ ಹುದ್ದೆ ತುಂಬುವುದಾಗಿ ಹಾಗೂ ವಾರ್ಷಿಕ 5000 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹಿರಿಯ ನಾಯಕರಾದ ಖರ್ಗೆ ಹಾಗೂ‌ ಸಿಎಂ ಭರವಸೆ ನೀಡಿದ್ದಾರೆ. ಅದಕ್ಕೆ ಬದ್ಧವಾಗಿದ್ದೇವೆ” ಎಂದರು.

“ಬಿಜೆಪಿಯವರನ್ನು ಜನರು ತಿರಸ್ಕಾರ ಮಾಡಿದ್ದಾರೆ. ಅವರು ಸಕರಾತ್ಮಕ ರಾಜಕೀಯ ಮಾಡದೆ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಮತ್ತು ಸತ್ಯಕ್ಕೆ ಸಂಬಂಧವೇ ಇಲ್ಲ” ಎಂದು ಕುಟುಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments