ಬೆಂಗಳೂರಿನಲ್ಲಿ ಕೋಟ್ಯಾಂತರ ರೂ. ವ್ಯವಹಾರವನ್ನು ಹೊಂದಿದ್ದ ಉದ್ಯಮಿಯೊಬ್ಬರಿಂದ ಬರೋಬ್ಬರಿ 1.5 ಕೋಟಿ ರೂ. ಲಂಚದ ಹಣ ಪಡೆದು ವಂಚಿಸಿದ್ದ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಉದ್ಯಮಿಯೊಬ್ಬನಿಗೆ ಜಿಎಸ್‌ಟಿ ಅಧಿಕಾರಿಗಳು 1.5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಉದ್ಯಮಿ ಸ್ಥಳೀಯ ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ತಿಂಗಳ 31ನೇ ತಾರೀಖು ದಾಖಲಾಗಿದ್ದ ಪ್ರಕರಣದ ದೂರನ್ನು ಆಧರಿಸಿ ಬೈಯಪ್ಪನಹಳ್ಳಿ ಪೊಲೀಸರು ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಜಿಎಸ್‌ಎಟಿ ಅಧಿಕಾರಿಗಳು ತಾವು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಎಂದು ಹೇಳಿಕೊಂಡು ಉದ್ಯಮಿ ಕೇಶವ್ ಎಂಬಾತನಿಗೆ ಬೆದರಿಕೆ ಹಾಕಿದ್ದರು. ಜೊತೆಗೆ, ನೀವು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇಡಿ ದಾಳಿ ಮಾಡಬಾರದೆಂದರೆ 1.5 ಕೋಟಿ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಆದರೆ, ಉದ್ಯಮಿ ಕೇಶವ್ ಹಣ ಕೊಡದಿದ್ದಾಗ ಆತನ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುವುದಾಗಿ ಉದ್ಯಮಿಯನ್ನ ಎರಡು ದಿನ ಕೂಡಿ ಹಾಕಿದ್ದರು. ನೀವು ಕಂಪನಿಯನ್ನ ನಕಲಿಯಾಗಿ ನಡೆಸುತ್ತಿದ್ದೀರಿ. ನಾವು ಇ.ಡಿ ಮತ್ತು ಜಿಎಸ್ ಟಿ ಅಧಿಕಾರಿಗಳು.ಅಕ್ರಮವಾಗಿ ಕಚೇರಿ ನಡೆದಿರೋದು ಗೊತ್ತಾಗಿದೆ. ಹೀಗಾಗಿ ನಿಮ್ಮನ್ನ ಅರೆಸ್ಟ್ ಮಾಡ್ತೀವಿ ಅಂತಾ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದರು. ನಂತರ, ಕಚೇರಿಯ ಒಳಗಿಟ್ಟುಕೊಂಡು ಬರೋಬ್ಬರಿ ಒಂದೂವರೆ ಕೋಟಿ ರೂ. ಹಣವನ್ನು ನೀಡಿದರೆ ನಿನ್ನನ್ನು ಬಿಟ್ಟು ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಆಗಸ್ಟ್ 30 ರಂದು ಕೇಶವ್ ಮನೆ ಮೇಲೆ ದಾಳಿ ನಡೆಸಿದ್ದ ಜಿಎಸ್ ಟಿ ಮತ್ತು ಇಡಿ ಅಧಿಕಾರಿಗಳು. ಅತಿಕ್ರಮ ಪ್ರವೇಶ ಮಾಡಿ ಮೊಬೈಲ್ ಫೋನ್ ಹಾಗೂ ಕೆಲವು ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದರು. ನಂತರ ಕೇಶವ್, ಮುಖೇಶ್ ಜೈನ್, ಪವನ್ ತಕ್, ರಾಕೇಶ್ ಮಾಣಕ್ ಚಾಂದನಿ ಅವರನ್ನ ಬಲವಂತವಾಗಿ ಕರೆದೊಯ್ದಿದ್ದಾರೆ. ಬಲವಂತವಾಗಿ ಇಂದಿರಾನಗರಕ್ಕೆ ಕರೆದೊಯ್ದು ಪೋನ್ ಫ್ಲೈಟ್ ಮೋಡ್ ಹಾಕಿಸಿದ್ದ ಅಧಿಕಾರಿಗಳು. ನಂತರ ರೋಷನ್ ಜೈನ್ ಎಂಬಾತನಿಗೆ ಕರೆ ಮಾಡಿಸಿ 3 ಕೋಟಿ ಹಣ ತರಲು ಸೂಚನೆ. ವಾಟ್ಸಪ್ ಕರೆ ಮಾಡಿ ಹಣ ತರಲು ಸೂಚನೆ ನೀಡಿದ್ದರು.
ಈ ಪ್ರಕರಣದ ತನಿಖೆಯಲ್ಲಿ ಅನುಮೋದನೆ ಇಲ್ಲದೆ ದಾಳಿ ಮಾಡಿರುವುದು ಧೃಡಪಟ್ಟಿರುತ್ತದೆ. ಅಲ್ಲದೇ ಜಿ.ಎಸ್.ಟಿ ಅಧಿಕಾರಿಗಳು ಹಲವಾರು ವಸ್ತುಗಳನ್ನು ನಿಯಮ ಬಾಹಿರವಾಗಿ ಜಪ್ತಿ ಮಾಡಿರುವುದು, ಯಾವುದೇ ಅನುಮತಿ ಇಲ್ಲದೇ ಎರಡು ದಿನಗಳ ಕಾಲ ಫಿರ್ಯಾದುದಾರರನ್ನು ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿರುತ್ತದೆ.