Homeಕರ್ನಾಟಕನಾನೂ ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವೆ: ಸಚಿವ ಎಂ ಬಿ ಪಾಟೀಲ್

ನಾನೂ ಒಂದು ದಿನ ರಾಜ್ಯದ ಮುಖ್ಯಮಂತ್ರಿ ಆಗುವೆ: ಸಚಿವ ಎಂ ಬಿ ಪಾಟೀಲ್

ಒಂದಲ್ಲಾ ಒಂದು ದಿನ ನಾನು ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಸಚಿವ ಎಂ ಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ‘ಎಂ ಬಿ ಪಾಟೀಲ್‌ ಸಿಎಂ ಆಗುವುದಿಲ್ಲ’ ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ‌ಪ್ರತಿಕ್ರಿಯೆ ನೀಡಿದರು.

ಈಗ ನಾನು ಸಿಎಂ ಆಗುವ ಸನ್ನಿವೇಶ ಬಂದಿಲ್ಲ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ, ಮುಂದೆಯೂ ಸಿಎಂ ಆಗಿಯೇ ಇರುತ್ತಾರೆ. ನಾನೂ ಹಿರಿಯನಿದ್ದೇನೆ. ಒಂದಲ್ಲಾ ಒಂದು ದಿನ ರಾಜ್ಯದ ಮುಖ್ಯಮಂತ್ರಿಯಾಗುವೆ” ಎಂದರು.

“ಶಿವಾನಂದ ಪಾಟೀಲರು ಸಿಎಂ‌ ಆಗಲ್ಲ, ಅವರು ಜೆಡಿಎಸ್ ನಿಂದ ಬಂದವರು. ಬದಲಾಗಿ ವಿಜಯಪುರದಿಂದ ಸಿಎಂ ಆಗೋದು ನಾನೇ” ಎಂದು ಪರೋಕ್ಷವಾಗಿ ಕುಟುಕಿದರು.

“ನಾನು ಗೃಹ ಸಚಿವನಾಗಿದ್ದೆ. ಆಗಲೂ ಜೈಲಿನಲ್ಲಿ ಇಂತ ವ್ಯವಸ್ಥೆ ನೋಡಿದ್ದೇನೆ. ಘಟನೆಯನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಅದಕ್ಕಾಗಿ ದರ್ಶನ್ ಅಂಡ್ ಟೀಮ್ ಚದುರಿಸಲಾಗಿದೆ. ಚದುರಿಸಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ” ಎಂದರು.

“ಮುಡಾ ಸೈಟ್ ಹಂಚಿಕೆ ಆಗಿದ್ದು ಬಿಜೆಪಿ ಅವಧಿಯಲ್ಲಿ. ಇದರಲ್ಲಿ ಸಿದ್ದರಾಮಯ್ಯನವರ ಪಾಲೇನಿದೆ. ಮುಡಾದಿಂದ ಯಾರು ಭಯಗೊಂಡಿಲ್ಲ. ಕಾನೂನಾತ್ಮಕವಾಗಿ ಹೋರಾಟ ಮಾಡ್ತಿದ್ದೇವೆ. ಇದರಲ್ಲಿ ನಮಗೆ‌ ಜಯ ಸಿಕ್ಕೇ ಸಿಗುತ್ತದೆ. ಹಗಲು ಗನಸು ಬೇಡ. ಆದರೆ ಗವರ್ನರ್ ನಡವಳಿಕೆ ಮಾತ್ರ ಕಾನೂನು ಬಾಹಿರ” ಎಂದು ತಿಳಿಸಿದರು.

“ವಿಜಯೇಂದ್ರ ಅವರು ತಮ್ಮ ತಂದೆ ಸಿಲುಕಿಸಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳಬೇಕು. ಏನೇನೋ‌ ಮಾಡಿ ಅವರ ರಾಜೀನಾಮೆ ಕೊಡಿಸಿದ್ರಲ್ಲ. ಬಿಜೆಪಿಯವರೇ ಅವರನ್ನು ಕೆಳಗೆ ಇಳಿಸಿದ್ದು. ಇದನ್ನು ಮೊದಲು ವಿಜಯೇಂದ್ರ ಅರಿಯಲಿ” ಎಂದು ಪ್ರಶ್ನೆಯೊಂದಕ್ಕೆ

“ಬಿಜೆಪಿ ಅವಧಿಯಲ್ಲಿ ಕೋವಿಡ್ ಹಗರಣ ನಡೆದಿದ್ದು, ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಇದನ್ನ ನಾನು ಹೇಳಿಲ್ಲ‌,ಯತ್ನಾಳ್ ಹೇಳಿದ್ದಾರೆ. ಜೋಶಿ ಇದನ್ನು ಸಮರ್ಥನೆ ಮಾಡಿಕೊಳ್ಳುತ್ತಾರಾ? ಬಿಜೆಪಿಯವರು ಆ ಹಣವನ್ನು ಚುನಾವಣೆಗೆ ಖರ್ಚು ಮಾಡಿದ್ರಾ? ಇಲ್ಲ ಬಿಜೆಪಿ ಹೈಕಮಾಂಡ್‌ಗೆ ಹೋಯ್ತಾ” ಎಂದು ಪ್ರಶ್ನಿಸಿದರು.

ಡಿಕೆಶಿ ಅವರನ್ನು ಬದಲಾಯಿಸುವ ಒತ್ತಡ ಇಲ್ಲ

“ತೆಲಂಗಾಣ ಮಾದರಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್ ಗಮನದಲ್ಲಿ ಇದೆ. ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ . ಪಾರ್ಲಿಮೆಂಟ್ ಚುನಾವಣೆಗೂ ಅವರನ್ನು ಮುಂದುವರಿಸಲಾಗಿದೆ. ಸ್ವಾಭಾವಿಕವಾಗಿ ಅವರ ಮೇಲೆ ಒತ್ತಡ ಇದೆ . ಅವರನ್ನ ತೆಗೆಯಬೇಕು ಎಂಬ ಒತ್ತಡ ಇಲ್ಲ”‌ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments