Homeಕರ್ನಾಟಕಬಿಜೆಪಿಯವರ ಹಗರಣಗಳನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ: ಪ್ರಿಯಾಂಕ್‌ ಖರ್ಗೆ

ಬಿಜೆಪಿಯವರ ಹಗರಣಗಳನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ: ಪ್ರಿಯಾಂಕ್‌ ಖರ್ಗೆ

ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ 21 ಹಗರಣಗಳದ್ದು ಕೇವಲ ಟ್ರೈಲರ್. ಎಲ್ಲ ಹಗರಣಗಳನ್ನು ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಸಿದರು.

‘ಒತ್ತಡ ಹಾಕಿ ಕೋವಿಡ್ ಹಗರಣ ವರದಿ ತರಿಸಿಕೊಂಡಿದ್ದಾರೆ’ ಎಂಬ ಮಾಜಿ ಆರೋಗ್ಯ ಸಚಿವ ಡಾ. ಸುಧಾಕರ್ ಆರೋಪಕ್ಕೆ ಬೆಂಗಳೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, “ಕೆಲವು ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಏಜೆನ್ಸಿಗಳು ಬಂದು ಕೈಯಾಡಿಸುತ್ತಿವೆ. ಕಾನೂನಾತ್ಮಕವಾಗಿ ಎಲ್ಲವನ್ನೂ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಬಿಜೆಪಿಯವರಿಗೆ ಇದರಲ್ಲಿ ಯಾವುದೇ ಅನುಮಾನ ಬೇಡ” ಎಂದರು.

“ಒತ್ತಡ ಹಾಕಿ ತನಿಖಾ ವರದಿ ತರಿಸಿಕೊಳ್ಳುವುದರಲ್ಲಿ ತಪ್ಪೇನಿದೆ. ತನಿಖಾ ಸಂಸ್ಥೆಗಳಿಗೆ ಬೇಗ ತನಿಖೆ ಮುಗಿಸಿ ಎಂದು ಹೇಳಿದರೆ ತಪ್ಪೇನು? ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡುತ್ತಾರೆ. ಯಾರೋ ವಿಡಿಯೊ ಇದೆ ಅಂದಾಕ್ಷಣ ಯಾಕೆ ತಡೆಯಾಜ್ಞೆ ತರುತ್ತಾರೆ. ವರದಿ ಬಂದ ತಕ್ಷಣ ಕಾನೂನು ಹೋರಾಟ ಮಾಡುತ್ತೇವೆ ಎಂದು ಯಾಕೆ ಹೇಳುತ್ತಾರೆ” ಎಂದು ಹರಿಹಾಯ್ದರು.

“ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ನ್ಯಾಯಮೂರ್ತಿ ಡಿ ಕುನ್ಹಾ ಆಯೋಗ ನೀಡಿದೆ. ಮೇಲ್ನೋಟಕ್ಕೆ ಬಹಳಷ್ಟು ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆ ಆಗಿದೆ. ಅಧಿಕಾರಿಗಳಿಂದಲೂ ಕೂಡ ಲೋಪ ಆಗಿದೆ. ಅಕ್ರಮ ನಡೆದಿದೆ ಎಂದು ವರದಿಯಲ್ಲಿ ಇದೆ. ಮಧ್ಯಂತರ ವರದಿಯಲ್ಲಿ ಏನಿದೆ ಎಂಬ ಮಾಹಿತಿ ಅಧಿಕೃತವಾಗಿ ಇಲ್ಲ. ಮಧ್ಯಂತರ ವರದಿಯ ಬಗ್ಗೆ ಸಚಿವ ಸಂಪುಟದ ಮುಂದೆ ಇಟ್ಟಾಗ ಎಲ್ಲ ಗೊತ್ತಾಗುತ್ತದೆ” ಎಂದು ಹೇಳಿದರು.

“ನಾವು ಮಧ್ಯಂತರ ವರದಿ ಕೊಡಿ ಎಂದು ತನಿಖಾ ಆಯೋಗಕ್ಕೆ ಒತ್ತಡ ಹಾಕಿಲ್ಲ. ನಾವು ಮಾಜಿ ಮುಖ್ಯಮಂತ್ರಿ, ಸಚಿವರ ಹೆಸರು ಹೇಳಿದ್ದೇವೆಯೇ ? ವರದಿಯಲ್ಲಿ ಏನಿದೆ ಎಂದು ನಮಗೆ ಗೊತ್ತಿಲ್ಲ. ಏನಿದೆ ಎಂದು ಅವರಿಗೆ ಹೇಗೆ ಗೊತ್ತಾಗುತ್ತದೆ” ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments