ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 3.5 ಕೋಟಿ ಮೌಲ್ಯದ ಮಾದಕ ವಸ್ತು 3.05 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಕ್ರಮವಾಗಿ ಥೈಲ್ಯಾಂಡ್ ನ ಬ್ಯಾಕಾಂಕ್ ನಿಂದ ಹೈಡ್ರೋಪೋನಿಕ್ ಗಾಂಜಾ ತಂದಿದ್ದ ಕೇರಳ ಮೂಲದ ಆರೋಪಿ ಶಾಹನ್ಸಾ ಸಾಹುಲ್ ಅಹ್ಮದ್ನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಶಾಹನ್ಸಾ ಸಾಹುಲ್ ಅಹ್ಮದ್ ಲಗೇಜ್ ಬ್ಯಾಗ್ನಲ್ಲಿ ಅಡಗಿಸಿಕೊಂಡು 3.5 ಕೋಟಿ ಮೌಲ್ಯದ 3.5 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು 6ಇ1056 ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಆರೋಪಿ ತಂದಿದ್ದಾಗ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಲಗೇಜ್ನಲ್ಲಿ ಗಾಂಜಾ ಸಿಕ್ಕಿದೆ. ಕವರ್ನಲ್ಲಿ ಪ್ಯಾಕ್ ಮಾಡಿ ಲಗೇಜ್ ಮಧ್ಯೆ ಗಾಂಜಾ ಇರಿಸಲಾಗಿತ್ತು.
ಗಾಂಜಾ ಸಮೇತ ಆರೋಪಿಯನ್ನ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹೈಡ್ರೋಪೋನಿಕ್ ಗಾಂಜಾಗೆ ಭಾರೀ ಬೆಲೆ ಇದೆ. ಸೂರ್ಯನ ಕಿರಣಗಳು ಬೀಳದೆ ಶೀತ ಪ್ರದೇಶದಲ್ಲಿ ಈ ಗಾಂಜಾವನ್ನು ಬೆಳೆಯಲಾಗುತ್ತದೆ.
ಅತ್ಯುತ್ತಮ ಗುಣಮಟ್ಟದ ಗಾಂಜಾ ಎಂದು ಹೈಡ್ರೋಪೋನಿಕ್ ಗಾಂಜಾ ಮಾರುಕಟ್ಟೆಯಲ್ಲಿ ಹೆಸರು ಪಡೆದಿದೆ. ಶ್ರೀಮಂತರು ಹೆಚ್ಚಾಗಿ ಇದನ್ನು ಖರೀದಿಸುತ್ತಾರೆ.