Homeಕರ್ನಾಟಕರಾಜ್ಯದಲ್ಲಿ ಯಾವುದೇ ಹಗರಣ ನಡೆಯಲು ನಾವು ಬಿಡಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯದಲ್ಲಿ ಯಾವುದೇ ಹಗರಣ ನಡೆಯಲು ನಾವು ಬಿಡಲ್ಲ: ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯದಲ್ಲಿ ಯಾವುದೇ ಹಗರಣ ನಡೆಯಲು ನಾವು ಬಿಡಲ್ಲ. ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಯ ಸತ್ಯ ಸಿಐಡಿ ತನಿಖೆಯಲ್ಲಿ ಹೊರ ಬರಲಿ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಭ್ರಷ್ಟಾಚಾರ ಕುರಿತು ಆರೋಪಿಸಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಸಚಿವರು ಪ್ರತಿಕ್ರಿಯಿಸಿದರು.

“ಸಚಿವ ನಾಗೇಂದ್ರ ಸ್ಪಷ್ಟವಾಗಿ ಹೇಳಿದ್ದಾರೆ. ಸಿಐಡಿ ತನಿಖೆಯಲ್ಲಿ ಸತ್ಯಾಸತ್ಯತೆ ಹೊರಬರಲಿ. ಯಾವುದ ಹಗರಣ ನಡೆಯಲು ನಾವು ಬಿಡಲ್ಲ. ಕೆಲವು ಹೆಸರುಗಳು ಡೆತ್ ನೋಟ್ ನಲ್ಲಿವೆ. ಮೌಖಿಕ ಆದೇಶದ ಮೇಲೆ ಸರ್ಕಾರ ನಡೆಯಲ್ಲ. ಹಣ ವರ್ಗಾವಣೆ ಆಗಲ್ಲ. ಇಬ್ಬರು ಸಿಬ್ಬಂದಿ ಎಂಡಿ ಮೇಲೆ ಆರೋಪವಿದೆ. ಪ್ರಕರಣದಲ್ಲಿ ಪ್ರಾಥಮಿಕ ವರದಿ ಬರಲಿ. ಆಮೇಲೆ ನೋಡಣ” ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, “ಬಿಜೆಪಿ ಅವರ ಕಾಲದಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಶ್ರೀರಾಮಸೇನೆ ಹರೀಶ್ ಪೂಂಜಾ ಇಂಥವರಿಂದಲೇ ಹಾಳಾಗಿದೆ. ಇಂಥವರಿಂದಲೇ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅವರು ಕಟ್ಟಿ ಬೆಳೆಸಿದವರೇ ದಾಂಧಲೆ ಮಾಡ್ತಿದ್ದಾರೆ ಬಿಜೆಪಿಯವರ ಕಾಲದಲ್ಲಿ ಆದ ಘಟನೆಗಳ ಬಗ್ಗೆ ಗೊತ್ತಿಲ್ವಾ” ಎಂದು ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments