Homeಕರ್ನಾಟಕಪೆನ್‌ಡ್ರೈವ್‌ ಪ್ರಕರಣ | ಪ್ರಜ್ವಲ್‌ ರೇವಣ್ಣ ನನ್ನ ಜೊತೆ ಮೊದಲಿನಿಂದಲೂ ಸಂಪರ್ಕದಲ್ಲಿಲ್ಲ: ಎಚ್‌ ಡಿ ಕುಮಾರಸ್ವಾಮಿ

ಪೆನ್‌ಡ್ರೈವ್‌ ಪ್ರಕರಣ | ಪ್ರಜ್ವಲ್‌ ರೇವಣ್ಣ ನನ್ನ ಜೊತೆ ಮೊದಲಿನಿಂದಲೂ ಸಂಪರ್ಕದಲ್ಲಿಲ್ಲ: ಎಚ್‌ ಡಿ ಕುಮಾರಸ್ವಾಮಿ

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಮೊದಲಿನಿಂದಲೂ ಪಕ್ಷದ ಚಟುವಟಿಕೆಗಳ ಸಂದರ್ಭದಲ್ಲಿ ನನ್ನ ಸಂಪರ್ಕದಲ್ಲಿ ಇರಲಿಲ್ಲ. ಪೆನ್‌ಡ್ರೈವ್‌ ಪ್ರಕರಣ ಬೆಳಕಿಗೆ ಬಂದ ಮೇಲೂ ನನ್ನ ಸಂಪರ್ಕದಲ್ಲಿಲ್ಲ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡುತ್ತ, “ರಾಜ್ಯದಲ್ಲಿದ್ದಾಗಲೇ ನನ್ನ ಸಂಪರ್ಕದಲ್ಲಿರದ ಪ್ರಜ್ವಲ್ ವಿದೇಶದಲ್ಲಿರುವಾಗ ಹೇಗೆ ನನ್ನ ಜೊತೆ ಸಂಪರ್ಕದಲ್ಲಿರುತ್ತಾನೆ” ಎಂದು ಪ್ರಶ್ನಿಸಿದರು.

“ಎಸ್ಐಟಿಯವರಿಗೆ ದೇವೇರಾಜೇಗೌಡರಿಂದ ಏನು ಮಾಹಿತಿ ಬೇಕಿದೆ? ಅವರ ವಿರುದ್ಧ ಪ್ರಕರಣ ದಾಖಲಾಗಿ ತಿಂಗಳು ಕಳೆದಿದ್ದರೂ ಈಗ ಏಕೆ ಬಂಧಿಸಿದ್ದಾರೆ? ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಮಾಹಿತಿನಾ? ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿನಾ? ಎಸ್‌ಐಟಿ ತನಿಖೆ ನೋಡಿದರೆ ಅನವಶ್ಯಕವಾಗಿ ಕೆಲವರನ್ನು ಬಂಧಿಸುತ್ತಿದೆ” ಎಂದು ಆರೋಪಿಸಿದರು.

“ಪೆನ್‌ಡ್ರೈವ್‌ ಪ್ರಕರಣದಲ್ಲಿ ಎರಡು ಭಾಗ ಇದೆ. ಒಂದು ವಿಡಿಯೋ ಮಾಡಿಕೊಂಡವನ ಅಪರಾಧ. ಮತ್ತೊಂದು ಆ ವಿಡಿಯೋ ವೈರಲ್ ಮಾಡಿ ಕುಟುಂಬಗಳನ್ನು ಬೀದಿಗೆ ತಂದವರದ್ದು. ಇದು ಕೂಡ ಘೋರ ಅಪರಾಧ. ಆದರೆ ಎಸ್ಐಟಿ ವೈರಲ್ ಮಾಡಿದವರನ್ನು ಬಂಧಿಸುವಲ್ಲಿ ವಿಫಲವಾಗಿದೆ” ಎಂದು ಕಿಡಿಕಾರಿದರು.

“ವಿಡಿಯೋ ವೈರಲ್‌ ಮಾಡಿದ ಆರೋಪಿ ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡುತ್ತಾನೆ. ಆದರೆ ಎಸ್ಐಟಿಗೆ ಸಿಗುತ್ತಿಲ್ಲ ಅಂದರೆ ಏನು ಅರ್ಥ? ಎಸ್ಐಟಿ ಸೂಕ್ತವಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬುದು ಇದರಿಂದ ಅರ್ಥವಾಗುತ್ತೆ” ಎಂದರು.

ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿಲ್ಲ: ಜೆ ಟಿ ದೇವೇಗೌಡ

“ವಿದೇಶಕ್ಕೆ ಹೋಗಿರುವ ಪ್ರಜ್ವಲ್ ರೇವಣ್ಣ ಇದುವರೆಗೂ ಅವರ ಕುಟುಂಬದವರ ಸಂಪರ್ಕಕ್ಕೂ ಸಿಕ್ಕಿಲ್ಲ. ಪ್ರಜ್ವಲ್ ಮಾಹಿತಿ ನನಗೂ ಸೇರಿದಂತೆ ಯಾರಿಗೂ ಇಲ್ಲ. ಆರೋಪ ಕೇಳಿಬಂದ ತಕ್ಷಣ ಪಕ್ಷ ಅವರ ವಿರುದ್ಧ ಕ್ರಮ ಕೈಗೊಂಡಿದೆ. ಈಗ ಏನಿದ್ದರೂ ಸರ್ಕಾರದ ಕೆಲಸ. ಆರೋಪಗಳ ಕುರಿತು ಎಸ್‌ಐಟಿ ತನಿಖೆ ನಡೆಸುತ್ತಿದೆ. ಭಾರತಕ್ಕೆ ಕರೆ ತಂದು ವಿಚಾರಣೆ ನಡೆಸಲಿ” ಎಂದು ಜೆಡಿಎಸ್‌ ಪ್ರಮುಖರ ಸಮಿತಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments