Homeಕರ್ನಾಟಕಕೆ.ಸುಧಾಕರ್‌ ಹೆಸರಲ್ಲಿ ಮತ ಕೇಳಿದರೆ ಬಿಜೆಪಿಗೆ ನಷ್ಟ: ಎಸ್‌ ಆರ್‌ ವಿಶ್ವನಾಥ್‌

ಕೆ.ಸುಧಾಕರ್‌ ಹೆಸರಲ್ಲಿ ಮತ ಕೇಳಿದರೆ ಬಿಜೆಪಿಗೆ ನಷ್ಟ: ಎಸ್‌ ಆರ್‌ ವಿಶ್ವನಾಥ್‌

ಚಿಕ್ಕಬಳ್ಳಾಪುರ ಲೋಕಸಭ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿನ ಆಂತರಿಕ ಭಿನ್ನಮತ ದಿನೇ ದಿನೇ ಹೆಚ್ಚುತ್ತಿದೆ. ಯಲಹಂಕ ಬಿಜೆಪಿ ಶಾಸಕ ಎಸ್‌ ಆರ್‌ ವಿಶ್ವನಾಥ್‌ ಅವರು ತಮ್ಮದೇ ಪಕ್ಷದ ಡಾ.ಕೆ. ಸುಧಾಕರ್‌ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಸೋಮವಾರ (ಏ.1) ಯಲಹಂಕದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಡಾ.ಕೆ.ಸುಧಾಕರ್‌ ಅವರ ಹೆಸರಲ್ಲಿ ಮತ ಕೇಳಿದರೆ ಪಕ್ಷಕ್ಕೇ ಮೈನಸ್‌ ಆಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ, ನಾವು ಮೋದಿ ಹೆಸರಿನಲ್ಲೇ ಮತ ಕೇಳುತ್ತೇವೆ” ಎಂದರು.

“ಟಿಕೆಟ್‌ ಸಿಗದಿದ್ದಾಗ ಅಸಮಾಧಾನ ಇರುವುದು ಸಹಜ. ನನ್ನ ಮಗನಿಗೆ ಟಿಕೆಟ್‌ ಸಿಕ್ಕಿಲ್ಲ. ಹಾಗಂತ ನಾನು ನಾನು ಯಾರ ಮೇಲೂ ಮುನಿಸಿಕೊಂಡಿಲ್ಲ. ನಮಗೆ ಪಕ್ಷದ ಹಿತಾಸಕ್ತಿ ಮುಖ್ಯ. ಆದರೆ, ಮಾಧ್ಯಮಗಳನ್ನು ಕರೆತಂದು ಸಿಂಪತಿ ಕ್ರಿಯೇಟ್‌ ಮಾಡುವ ಕೆಲಸ ನಾನು ಮಾಡುವುದಿಲ್ಲ” ಎಂದು ಹೇಳಿದರು.

“ನಾನು ಸುಧಾಕರ್‌ ಅವರನ್ನು ಒಬ್ಬನೇ ಭೇಟಿ ಮಾಡುವುದಿಲ್ಲ. ಮುಖಂಡರ ಜತೆ ತೆರಳಿ ಭೇಟಿ ಮಾಡುತ್ತೇನೆ. ನಾಲ್ಕೈದು ದಿನಗಳ ಹಿಂದೆ ಭೇಟಿ ಮಾಡಬೇಕು ಎಂದು ಮೆಸೇಜ್‌ ಮಾಡಿದ್ದರು ಅಷ್ಟೆ. ನಮ್ಮ ಕ್ಷೇತ್ರದಲ್ಲಿ ನಾಳೆ ಮತದಾನ ನಡೆದರೂ ಮತ ಹಾಕಿಸುವ ವ್ಯವಸ್ಥೆ ಮಾಡಿಕೊಂಡಿದ್ದೇವೆ” ಎಂದರು.

ಮಾಜಿ ಸಚಿವ ಸುಧಾಕರ್‌ ಅವರನ್ನು ಮನೆಯೊಳಗೆ ಬಿಟ್ಟಿಲ್ಲ ಎಂಬುದು ಸುಳ್ಳು. ಅವರು ಬರುವ ವಿಚಾರ ನನಗೆ ಗೊತ್ತಿರಲಿಲ್ಲ. ಹೀಗಾಗಿ ನಾನು ಬೇರೆ ಕೆಲಸದ ಮೇಲೆ ಹೊರಗೆ ಹೋಗಿದ್ದೆ. ಯಲಹಂಕದವರನ್ನು ಖಳನಾಯಕರು ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಿದ್ದಾರೆ” ಎಂದು ಪರೋಕ್ಷವಾಗಿ ಸುಧಾಕರ್‌ಗೆ ಟಾಂಗ್‌ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments