Homeಕರ್ನಾಟಕರಾಜಕಾರಣಿಯಾಗಿ ಫೇಲ್ ಆಗಿರುವೆ, ಇನ್ಮುಂದೆ ಖಂಡಿತ ರಾಜಕಾರಣ ಕಲಿಯುವೆ: ಪ್ರತಾಪ್ ಸಿಂಹ

ರಾಜಕಾರಣಿಯಾಗಿ ಫೇಲ್ ಆಗಿರುವೆ, ಇನ್ಮುಂದೆ ಖಂಡಿತ ರಾಜಕಾರಣ ಕಲಿಯುವೆ: ಪ್ರತಾಪ್ ಸಿಂಹ

ನಾನು ಇದುವರೆಗೂ ರಾಜಕಾರಣ ಕಲಿತಿರಲಿಲ್ಲ. ಹೀಗಾಗಿ ಒಬ್ಬ ರಾಜಕಾರಣಿಯಾಗಿ ನಾನು ಫೇಲ್ ಆಗಿದ್ದೇನೆ. ಆದರೆ, ಇನ್ನು ಮುಂದೆ ಖಂಡಿತಾ ರಾಜಕಾರಣ ಕಲಿಯುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುತ್ತ, “ಒಬ್ಬ ರಾಜಕಾರಣಿಯಾಗಿ ನಾನು ಫೇಲ್ ಆಗಿದ್ದರೂ ಒಬ್ಬ ಸಂಸದನಾಗಿ ಸಕ್ಸಸ್ ಆಗಿದ್ದೇನೆ. ರಾಜಕಾರಣಕ್ಕೂ ಅಭಿವೃದ್ಧಿಗೂ ಬಹಳ ವ್ಯತ್ಯಾಸವಿದೆ ಎಂಬುದು ಅರ್ಥವಾಗಿದೆ” ಎಂದರು.

“ರಾಜಕಾರಣಿಯಾದವರು ಕೇವಲ ಚುನಾವಣಾ ಟಿಕೆಟ್‌ಗಾಗಿ ಹೋರಾಟ ಮಾಡಬಾರದು. ಒಳ್ಳೆಯ ಕೆಲಸ ಮಾಡುವುದಕ್ಕಾಗಿ ಹೋರಾಡಬೇಕು. ನಾನು ಕೇವಲ ಕೆಲಸದ ಬಲದಿಂದಲೇ ಜನರ ಪ್ರೀತಿ, ವಿಶ್ವಾಸ ಗಳಿಸಿದೆ. ಅದೇ ರೀತಿ ನಾಗಾಲೋಟದಿಂದ ಓಡಾಡಿ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ” ಎಂದರು.

“ಜನರು ಎರಡು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಇವುಗಳ ಮಧ್ಯೆ ರಾಜಕಾರಣ ಇರುತ್ತದೆ ಎಂಬುದು ಅರಿತುಕೊಳ್ಳುವಲ್ಲಿ ನಾನು ಎಡವಿದೆ” ಎಂದು ಹೇಳಿದ್ದಾರೆ.

ಪ್ರತಾಪ ಸಿಂಹ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಯ ಟಿಕೆಟ್‌ ಕೈತಪ್ಪಿದೆ. ಇವರ ಬದಲು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪರ್ಧಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments