ಎರಡು ಸೀಟು ಪಡೆಯಲು ನಾನು ಇಷ್ಟೆಲ್ಲ ಪ್ರಯತ್ನ ಪಡಬೇಕಾ? ನಾವೇನು ಆರೇಳು ಸೀಟುಗಳನ್ನು ಕೇಳಿಲ್ಲ. ನಾವು ಕೇಳಿದ್ದೇ ಮೂರರಿಂದ ನಾಲ್ಕು ಸೀಟುಗಳು. ನಮ್ಮ ಶಕ್ತಿ ಅವರಿಗೂ ಗೊತ್ತಿದೆ. ಮೂರು ನಾಲ್ಕು ಸೀಟು ಸಿಗುವ ನಂಬಿಕೆ ಇದೆ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಅಧಿಕೃತ ಟಿಕೆಟ್ ಘೋಷಣೆ ಆಗುವರೆಗೂ ಮಾತಾಡುವುದಿಲ್ಲ. ಹಾಸನ, ಮಂಡ್ಯದಲ್ಲಿ ಸ್ವತಂತ್ರವಾಗಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ತ್ರಿಕೋನ ಸ್ವರ್ಧೆ ಆದರೂ ಸುಲಭವಾಗಿ ಗೆಲ್ಲುತ್ತೇವೆ” ಎಂದರು.
“18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಕ್ತಿಯನ್ನು ದಾರೆಯರೆದರೆ ಬಿಜೆಪಿಗೆ ಪ್ಲಸ್ ಪಾಯಿಂಟ್. ಕರ್ನಾಟಕ ರಾಜಕೀಯವೇ ಬೇರೆ ದೇಶದ ರಾಜಕಾರಣವೇ ಬೇರೆ. ನಮ್ಮ ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡಬಾರದು. ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
“ದೇಶದಲ್ಲಿ ಎನ್ಡಿಎ ಸರ್ಕಾರ ಬರುತ್ತದೆ ಎಂಬ ಭಾವನೆ ಇದೆ. ಮೈತ್ರಿಯ ಉದ್ದೇಶ ಅಧಿಕಾರಕ್ಕಿಂತ ಹೆಚ್ಚಾಗಿ ರಾಜ್ಯದ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಡುವುದಾಗಿದೆ. ಇದಕ್ಕೆಲ್ಲ ಪರಿಹಾರ ತರಬೇಕು ಅನ್ನೋದೆ ನಮ್ಮ ಪಕ್ಷದ ನಿಲುವು. ಲೋಕಸಭೆ ಸದಸ್ಯರಿಗೆ ಧ್ವನಿ ಇಲ್ಲ ಅಂತಿದ್ದಾರೆ. ಈ ಧ್ವನಿಯನ್ನ ಲೋಕಸಭೆಯಲ್ಲಿ ತರಬೇಕಂತ ನಿರ್ಧಾರ ಮಾಡಲಾಗಿದೆ” ಎಂದು ಹೇಳಿದರು.