Homeಕರ್ನಾಟಕಡಿ ಕೆ ಶಿವಕುಮಾರ್ ವಿರುದ್ಧ ಇ.ಡಿ ದಾಖಲಿಸಿದ್ದ ಪ್ರಕರಣ ವಜಾ; ಸುಪ್ರೀಂ ಕೋರ್ಟ್‌ಗೆ ಸಾಷ್ಟಾಂಗ ನಮಸ್ಕಾರ...

ಡಿ ಕೆ ಶಿವಕುಮಾರ್ ವಿರುದ್ಧ ಇ.ಡಿ ದಾಖಲಿಸಿದ್ದ ಪ್ರಕರಣ ವಜಾ; ಸುಪ್ರೀಂ ಕೋರ್ಟ್‌ಗೆ ಸಾಷ್ಟಾಂಗ ನಮಸ್ಕಾರ ತಿಳಿಸಿದ ಡಿಕೆಶಿ

‌ಸುಪ್ರೀಂ ಕೋರ್ಟ್‌ ಮತ್ತು ನ್ಯಾಯಮೂರ್ತಿಗಳಿಗೆ ಸಾಷ್ಟಾಂಗ ನಮಸ್ಕಾರ. ಸುಪ್ರೀಂ ರಿಲೀಫ್ ನೀಡಿದ ಮಾಹಿತಿ ಸಿಕ್ಕಿದ್ದು, ಕಷ್ಟದ ಜೀವನಕ್ಕೆ ದೊಡ್ಡ ಸಂತೋಷದ ಇವತ್ತು. ವಕೀಲರುಗಳಿಂದ ಫೋನಿನ ಸುರಿಮಳೆ ಬರುತ್ತಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

ಸುಪ್ರೀಂ ಕೋರ್ಟ್‌ನಿಂದ ಇ.ಡಿ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ, “ಇ.ಡಿ ಅಧಿಕಾರಿಗಳಿಂದ ಕ್ರಮ ಆಗಿದ್ದು ತಪ್ಪು ಎನ್ನುವ ಮಾಹಿತಿ ಗೊತ್ತಾಗ್ತಿದೆ. ಈಗಲೂ ಸಿಬಿಐನವರು ಏನೇನು ಮಾಡ್ತಿದ್ದಾರೆಂದು ಸದ್ಯದಲ್ಲೇ ಹೇಳುವೆ” ಎಂದರು.

“ಸುರ್ಜೇವಾಲ ಸೇರಿದಂತೆ ಎಲ್ಲರೂ ಸುಪ್ರೀಂ ಕೋರ್ಟ್‌ನಲ್ಲಿ ಇದ್ದರು. ಸುಪ್ರೀಂಕೋರ್ಟ್‌ನ ತೀರ್ಪಿನ ಮುಂದೆ ಮತ್ತೇನಿದೆ. ಜೈಲಿಗೆ ಹೋಗುವಾಗಲೂ ಆತ್ಮವಿಶ್ವಾಸದಿಂದಲೇ ಹೋಗಿದ್ದೆ, ಈಗಲೂ ಅದೇ ಆತ್ಮ ವಿಶ್ವಾಸದಲ್ಲಿದ್ದೇನೆ. ಸಿಬಿಐನವರು ಈಗಲೂ ನನ್ನ ಸುತ್ತಮುತ್ತಲಿನವರಿಗೆ ಕಿರುಕುಳ ನೀಡುತ್ತಿದ್ದಾರೆ. ಆದರೆ, ಯಾರೂ ಕೂಡ ವಿರೋಧಿಗಳಿಲ್ಲ, ಎಲ್ಲ ಪ್ರಕೃತಿಯ ನಿಯಮ” ಎಂದು ಹೇಳಿದರು.

ಏನಿದು ಘಟನೆ

ದೆಹಲಿಯಲ್ಲಿರುವ ಡಿಕೆ ಶಿವಕುಮಾರ್ ನಿವಾಸದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದಾಗ ಅಪಾರ ಪ್ರಮಾನದ ನಗದು ಪತ್ತೆಯಾಗಿತ್ತು. ಆಗ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು.

ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಜಾರಿ ನಿರ್ದೇಶನಾಲಯ ನೀಡಿದ ಸಮನ್ಸ್ ಅನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಇದರ ವಿರುದ್ಧ ಡಿಕೆ ಶಿವಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) 120 ಬಿ ಅಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನೂ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣದಲ್ಲಿ ಶಿವಕುಮಾರ್ ಸುಮಾರು ಮೂರು ತಿಂಗಳ ಕಾಲ ಜೈಲು ಪಾಲಾಗಿದ್ದರು.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments