Homeಕರ್ನಾಟಕಮಾದರ ಚೆನ್ನಯ್ಯ ಸ್ವಾಮೀಜಿ ರಾಜಕೀಯಕ್ಕೆ ಬಂದರೆ ತಪ್ಪೇನಿದೆ: ಕೆ ಎಸ್‌ ಈಶ್ವರಪ್ಪ ಪ್ರಶ್ನೆ

ಮಾದರ ಚೆನ್ನಯ್ಯ ಸ್ವಾಮೀಜಿ ರಾಜಕೀಯಕ್ಕೆ ಬಂದರೆ ತಪ್ಪೇನಿದೆ: ಕೆ ಎಸ್‌ ಈಶ್ವರಪ್ಪ ಪ್ರಶ್ನೆ

ಮಾದರ ಚೆನ್ನಯ್ಯ ಸ್ವಾಮೀಜಿ ರಾಜಕೀಯಕ್ಕೆ ಬರಲೇಬಾರದಾ? ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಕು. ದೇಶ ಸೇವೆ ಮಾಡಲು ಸ್ವಾಮೀಜಿಗಳು ರಾಜಕೀಯಕ್ಕೆ ಬಂದರೆ ತಪ್ಪೇನಿಲ್ಲ ಎಂದು ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ಹೇಳಿದರು.

ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾದಾರ ಚೆನ್ನಯ್ಯ ಸ್ವಾಮೀಜಿಗೆ ಬಿಜೆಪಿ ಟಿಕೆಟ್ ಕೊಟ್ಟರೆ ನಾನಂತೂ ಖುಷಿ ಪಡುತ್ತೇನೆ. ಚರ್ಚೆ ಆಗಿದ್ದರೆ ಇದರಲ್ಲಿ ತಪ್ಪಿಲ್ಲ” ಎಂದರು.

“ರಾಜಕೀಯ ಪಕ್ಷಗಳು ಎಂದ ಮೇಲೆ ಒಂಚೂರು ಗಲಾಟೆ ಇದ್ದಿದ್ದೇ. ಸಾಮಾನ್ಯ ಅಲ್ಲಲ್ಲಿ ಮಾತ್ರ ಬಡಿದಾಟ ಇದೆ. ನಮ್ಮ ಪಕ್ಷದ ಅಸಮಾಧಾನಿತರನ್ನು ಕರೆದು ರಿಪೇರಿ ಮಾಡುತ್ತೇವೆ” ಎಂದು ಈಶ್ವರಪ್ಪ ತಿಳಿಸಿದರು.

“ರಾಮಮಂದಿರದಲ್ಲಿ ಪರಿಶಿಷ್ಟ ಜಾತಿಯವರಿಗೆ ಆಹ್ವಾನ ಇರಲಿಲ್ಲ ಎಂದು ರಾಹುಲ್‌ ಹೇಳಿದ್ದಾರೆ. ದೇಶವನ್ನು ವಿಭಜಿಸುವ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಧರ್ಮದ ಬಗ್ಗೆ ಸಹ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಇಡೀ ದೇಶವನ್ನು ಒಂದುಗೂಡಿಸುವ ರಾಮಮಂದಿರ ಕಾರ್ಯಕ್ರಮವಾಗಿತ್ತು. ರಾಹುಲ್ ಗಾಂಧಿ ಹೇಳಿಕೆಯಿಂದ ಬೇಸರ ಆಗಿದೆ. ರಾಹುಲ್ ಗಾಂಧಿ ಅವರು ಈ ದೇಶದ ಜನತೆಯ ಕ್ಷಮೆ ಕೇಳಬೇಕು” ಎಂದು ಆಗ್ರಹಿಸಿದರು.

“ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಸಹ ಭಾಗಿಯಾಗಿದ್ದರು. ಅದೇ ರೀತಿ ಕಾಗಿನೆಲೆ ಸ್ವಾಮೀಜಿ ಸಹ ರಾಮಮಂದಿರ ಉದ್ಘಾಟನೆಗೆ ಹೋಗಿದ್ದರು. ಅಲ್ಲದೆ ಇಂತಹ ಅನೇಕ ಸಾಧು ಸಂತರು ಸಹ ರಾಮಮಂದಿರ ಲೋಕಾರ್ಪಣೆಗೆ ಬಂದಿದ್ದರು. ಹಿಂದೂ ಸಮಾಜವನ್ನು ಜೋಡಿಸುವ ಸ್ವಾಮೀಜಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು” ಎಂದರು‌.

ಜ್ಞಾನ ದೇಗುಲ ವಿಚಾರಕ್ಕೆ ಪ್ರತಿಕ್ರಿಯಿಸಿ, “ಯಾರಿಗೆ ಪ್ರಶ್ನೆ ಮಾಡಬೇಕು, ಎಲ್ಲೆಲ್ಲಿ ಎಷ್ಟು ಲೂಟಿ ಆಗುತ್ತೆ ಅಂತ ಪ್ರಶ್ನೆ ಮಾಡಬೇಕಾ? ಆ ಬೋರ್ಡ್ ಹಾಕಿರುವುದನ್ನು ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೆ ಏನು ಆದೇಶ ಮಾಡ್ತಿವಿ ಅನ್ನೋದು ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದೆ ಆದೇಶ ಮಾಡುತ್ತಾರಾ?” ಎಂದು ಕಿಡಿಕಾರಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments