ವಿಜಯಪುರದ ಬಿಎಲ್ ಡಿಇ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ವಚನ ಪಿತಾಮಹ ಫ.ಗು.ಹಳಕಟ್ಟಿ ಸಂಶೋಧನಾ ಸಂಸ್ಥೆಯ ಬೆಂಗಳೂರು ಶಾಖೆ ನಗರದ ಶಿವಾನಂದ ವೃತ್ತದ ಮನೆಯೊಂದರಲ್ಲಿ ಕಾರ್ಯಾರಂಭವಾಗಿದ್ದು, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಶನಿವಾರ ಖುದ್ದು ಭೇಟಿ ನೀಡಿ ಸಾಹಿತಿ ಗೊ.ರು.ಚನ್ನಬಸಪ್ಪ, ಎಸ್.ಜಿ.ಸಿದ್ದರಾಮಯ್ಯ ಅವರೊಟ್ಟಿಗೆ ಮಾತುಕತೆ ನಡೆಸಿದರು.
ತಾಳೆ ಗರಿ ಸೇರಿದಂತೆ ಇತರ ರೂಪಗಳಲ್ಲಿ ಇರುವ ವಚನಗಳ ಸಂಗ್ರಹ ಮತ್ತು ಅವುಗಳನ್ನು ದಾಖಲಿಸುವ ಕೆಲಸವನ್ನು ಇಲ್ಲಿ ಮಾಡುತ್ತಿದ್ದು ಅದನ್ನು ಸಚಿವರು ಪರಿಶೀಲಿಸಿದರು.
ಸಚಿವರು ಬಿಎಲ್ ಡಿಇ ಸಂಸ್ಥೆ ಅಧ್ಯಕ್ಷರು ಕೂಡ ಆಗಿದ್ದು, ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಮೂಲಗಳಿಂದ ಸಂಗ್ರಹಿಸಿರುವ ಬೇರೆ ಬೇರೆ ರೂಪಗಳಲ್ಲಿನ ಮಾಹಿತಿಯನ್ನು ಸ್ಕ್ಯಾನ್ ಮಾಡಿ, ಅದನ್ನು ಟೈಪಿಸುವ ಕೆಲಸ ಮಾಡುತ್ತಿದ್ದು ಅದಕ್ಕೆ ಹಣಕಾಸಿನ ನೆರವು ಕೂಡ ನೀಡಲಾಗುವುದು ಎಂದರು.
ಬೆಂಗಳೂರು ಶಾಖೆ ಉಸ್ತುವಾರಿ ಅಶೋಕ ದೊಮ್ಮಲೂರು, ಮಹಾಂತೇಶ ಬಿರಾದರ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.