Homeಕರ್ನಾಟಕಡಿ.25ಕ್ಕೆ ಹೊನ್ಕಲ್ ಸಾಹಿತ್ಯ ಪ್ರಶಸ್ತಿ ಪ್ರದಾನ, ಸಾಹಿತ್ಯ ಕೃತಿಗಳ ಲೋಕಾರ್ಪಣೆ ಹಾಗೂ ಗಜಲ್ ಕವಿಗೋಷ್ಠಿ

ಡಿ.25ಕ್ಕೆ ಹೊನ್ಕಲ್ ಸಾಹಿತ್ಯ ಪ್ರಶಸ್ತಿ ಪ್ರದಾನ, ಸಾಹಿತ್ಯ ಕೃತಿಗಳ ಲೋಕಾರ್ಪಣೆ ಹಾಗೂ ಗಜಲ್ ಕವಿಗೋಷ್ಠಿ

ರಾಜ್ಯಮಟ್ಟದ ಪ್ರತಿಷ್ಠಿತ ಹೊನ್ಕಲ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹೊನ್ಕಲ್ ಸಾಹಿತ್ಯ ಪ್ರಶಸ್ತಿ ಪ್ರದಾನ, ಸಾಹಿತ್ಯ ಕೃತಿಗಳ ಲೋಕಾರ್ಪಣೆ ಹಾಗೂ ಗಜಲ್ ಕವಿಗೋಷ್ಠಿಯನ್ನು ಡಿ.25ರಂದು (ಸೋಮವಾರ) ಆಯೋಜಿಸಲಾಗಿದೆ.

ಶಹಾಪುರದ ಸಿ ಬಿ ಕಮಾನ ಹತ್ತಿರದ ಕಲಬುರ್ಗಿ ಟವರ ಸಭಾಂಗಣದಲ್ಲಿ ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವ, ಸಣ್ಣ ಕೈಗಾರಿಕಾ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ, ಲೇಖಕ ಲೇಖಕಿಯರಿಗೆ 2022-2023 ಸಾಲಿನ ಹೊನ್ಕಲ್ ಸಾಹಿತ್ಯದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಿದ್ಧರಾಮ ಹೊನ್ಕಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇದಿಕೆಯಲ್ಲಿ ಲೇಖಕ ಸಿದ್ಧರಾಮ ಹೊನ್ಕಲ್ ರ “ಲೋಕಸಂಚಾರಿ” ಸಮಗ್ರ ಪ್ರವಾಸ ಕಥನ, “ನುಡಿನೋಟ”, ಹಾಗೂ “ಪ್ರತಿಬಿಂಬ” ಎಂಬ ಎರಡು ವಿಮರ್ಶೆ ಸಂಕಲನ, “ಹೊನ್ಕಲ್ ರ ಶಾಯಿರಿಲೋಕ”, ಹಾಗೂ ಹೊನ್ಕಲ್ ರ ಕುರಿತು ಪತ್ರಕರ್ತ ಲೇಖಕ ಶ್ರೀ ಪ್ರಭುಲಿಂಗ ನೀಲೂರೆ ಅವರು ಬರೆದ “ಹೊನ್ನುಡಿಯ ಸಾಧಕ ಸಿದ್ಧರಾಮ’ ಹೀಗೆ ಐದು ಕೃತಿಗಳು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಕೃತಿಗಳ ಕುರಿತು ಲೇಖಕರಾದ ಡಾ.ಎಚ್.ಎಸ್. ಸತ್ಯನಾರಾಯಣ ಹಾಗೂ ಪತ್ರಕರ್ತ ಹಾಗೂ ಬಾಲವಿಕಾಸ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಪ್ರಭುಲಿಂಗ ನೀಲೂರೆ ಮಾತನಾಡಲಿದ್ದಾರೆ. ಸಾನಿಧ್ಯವನ್ನು ಡಾ.ಸಿದ್ಧ ತೋಟೆಂದ್ರ ಶ್ರೀಗಳು ನಾಲವಾರ, ವೆ.ಮೂರ್ತಿ ಪೂಜ್ಯ ಬಸವಯ್ಯ ಶರಣರು ಚರಬಸವೇಶ್ವರ ಸಂಸ್ಥಾನ ಶಹಾಪುರ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಾದಗಿರಿ ಜಿಲ್ಲೆಯ ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ವಹಿಸಲಿದ್ದಾರೆ.

ಇದನ್ನೂ ಓದಿ: ರಾಜ್ಯಮಟ್ಟದ ‘ಹೊನ್ಕಲ್ ಸಾಹಿತ್ಯ ಪುರಸ್ಕಾರ’ಕ್ಕೆ ಐವರು ಲೇಖಕರ ಕೃತಿಗಳು ಆಯ್ಕೆ

ಹಿರಿಯ ಲೇಖಕ ಡಾ.ಬಸವಪ್ರಭು ಪಾಟೀಲ‌ ಬೆಟ್ಟದೂರು ರಾಯಚೂರು, ಡಾ.ಎಚ್.ಎಸ್. ಸತ್ಯನಾರಾಯಣ ವಿಮರ್ಶಕರು ಚಿಕ್ಕಮಗಳೂರು, ಕಾದಂಬರಿ ಲೇಖಕಿ ಶ್ರೀಮತಿ ಫೌಜಿಯಾ ಸಲಿಂ ದುಬೈ, ಕವಿಯತ್ರಿ ಶ್ರೀಮತಿ ಪದ್ಮಶ್ರೀ ಗೋವಿಂದರಾಜ್ ಭದ್ರಾವತಿ, ಹಾಗೂ ಭರವಸೆಯ ಯುವ ಕಥೆಗಾರ ವೀರೇಂದ್ರ ರಾವಿಹಾಳ್ ಬಳ್ಳಾರಿ ಅವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಅದೇ ವೇದಿಕೆಯಲ್ಲಿ ನಡೆಯಲಿರುವ‌ ಗಜಲ್ ಕವಿಗೋಷ್ಠಿ ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಸಂಶೋಧಕ ಡಾ.ಮೋನಪ್ಪ ಶಿರವಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೆ ಎಸ್ ಕೋಬಾಳ ಸಹಕಾರಿ ಮುಖಂಡರು ಕಲಬುರ್ಗಿ ಹಾಗೂ ಕಸಾಪ ಶಹಾಪುರದ ನಿಕಟಪೂರ್ವ ಅಧ್ಯಕ್ಷರಾದ ಸಿದ್ಧಲಿಂಗಣ್ಣ ಆನೇಗುಂದಿ ವಹಿಸಲಿದ್ದಾರೆ. ಈ ಗಜಲ್ ಕವಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕದ ಸುಮಾರು ಇಪ್ಪತ್ತೆರಡು ಹೆಸರಾಂತ ಗಜಲ್ ಲೇಖಕ ಲೇಖಕಿಯರು ಭಾಗವಹಿಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments