Homeಕರ್ನಾಟಕವಸತಿ ಯೋಜನೆ ಕಾಮಗಾರಿ ನಿಲ್ಲಿಸುವಂತಿಲ್ಲ: ಸಚಿವ ಜಮೀರ್ ಅಹಮದ್ ಖಾನ್ ಸೂಚನೆ

ವಸತಿ ಯೋಜನೆ ಕಾಮಗಾರಿ ನಿಲ್ಲಿಸುವಂತಿಲ್ಲ: ಸಚಿವ ಜಮೀರ್ ಅಹಮದ್ ಖಾನ್ ಸೂಚನೆ

ಬೆಳಗಾವಿ: ಬಿಲ್ ಪಾವತಿ ಬಾಕಿ ನೆಪವೊಡ್ಡಿ ಗುತ್ತಿಗೆ ಸಂಸ್ಥೆಗಳು ವಸತಿ ಯೋಜನೆ ಗಳ ಕಾಮಗಾರಿ ನಿಲ್ಲಿಸುವಂತಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಸೂಚನೆ ನೀಡಿದರು.

ಶುಕ್ರವಾರ ಸುವರ್ಣಸೌಧ ದಲ್ಲಿ ಶಿವಮೊಗ್ಗ ಶಾಸಕ ಚೆನ್ನಬಸಪ್ಪ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಸಚಿವರು, “ವಸತಿ ಯೋಜನೆ ಗಳು ಕಾಲಮಿತಿಯಲ್ಲಿ ಪೂರ್ಣ ಗೊಂಡು ಫಲಾನುಭವಿಗಳಿಗೆ ಹಂಚಿಕೆ ಆಗಬೇಕು. ಬಿಲ್ ಪಾವತಿ ಅಥವಾ ಇತರೆ ಕಾರಣಗಳಿಗೆ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ಕಪ್ಪು ಪಟ್ಟಿಗೆ ಸೇರಿಸಲಾಗುವುದು” ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

“ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಹದಿನಾರು ಕೊಳೆಗೇರಿ ಗಳಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿಕೊಡಲಾಗುತ್ತಿರುವ 1590 ಒಂಟಿ ಮನೆ ಯೋಜನೆ ಮೂರು ತಿಂಗಳಲ್ಲಿ ಪೂರ್ಣಗೊಳಿಸಲು” ಸೂಚನೆ ನೀಡಿದರು.

ಹದಿನಾರು ಕೊಳೆಗೇರಿಗಳಲ್ಲಿ 1590 ಮನೆ ನಿರ್ಮಾಣ ಕ್ಕೆ 88.59 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಎನ್ ಪಿ ಎಸ್ ಸಂಸ್ಥೆ ಗೆ ಗುತ್ತಿಗೆ ನೀಡಿದ್ದು 884 ಮನೆ ಗಳಿಗೆ ಸಂಬಂಧಿ ಸಿದಂತೆ 36 ಕೋಟಿ ರೂ. ಪಾವತಿ ಆಗಿದ್ದು,1.5 ಕೋಟಿ ರೂ. ಬಾಕಿ ಇದ್ದು, ಕಾಮಗಾರಿ ಸ್ಥಗಿತ ಮಾಡಿರುವ ಬಗ್ಗೆ ಸಿಡಿ ಮಿಡಿ ಗೊಂಡ ಸಚಿವರು ಮೊದಲು ಕಾಮಗಾರಿ ಪ್ರಾರಂಭಿಸಿ ಮೂರು ತಿಂಗಳಲ್ಲಿ ಪೂರ್ಣ ಗೊಳಿಸಿ ನಂತರ ಬಾಕಿ ಬಿಲ್ ಪಾವತಿಸ ಲಾಗುವುದು ಎಂದು ಗುತ್ತಿಗೆ ಸಂಸ್ಥೆ ಯವರಿಗೆ ನಿರ್ದೇಶನ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments