Homeಕರ್ನಾಟಕಶಿವಮೊಗ್ಗ ದಸರಾ ವೇಳೆ ಅವಘಡ; ನೆಲಕ್ಕುರುಳಿದ ಅಂಬಾರಿ

ಶಿವಮೊಗ್ಗ ದಸರಾ ವೇಳೆ ಅವಘಡ; ನೆಲಕ್ಕುರುಳಿದ ಅಂಬಾರಿ

ಶಿವಮೊಗ್ಗದಲ್ಲಿ ಮೈಸೂರು ರೀತಿಯಲ್ಲೇ ದಸರಾ ಹಬ್ಬ ಆಚರಿಸಲಾಗುತ್ತದೆ. ಆದರೆ ಈ ಬಾರಿ ಅಂಬಾರಿ ಹೊತ್ತ ಆನೆ ದಿಕ್ಕಾಪಾಲಾಗಿ ಓಡಿದ ಪರಿಣಾಮ ಅವಘಡ ಸಂಭವಿಸಿದೆ.

ಮೊಟ್ಟಮೊದಲ ಬಾರಿಗೆ ಚಾಮುಂಡೇಶ್ವರಿ ದೇಹ ದೇವಿಯ ವಿಗ್ರಹ ಹೊತ್ತಿದ್ದ ಸೋಮಣ್ಣ ಮೆರವಣಿಗೆಯಲ್ಲಿ ಬೆದರಿ ದಿಕ್ಕಾಪಾಲಾಗಿ ಓಡಿದೆ. ಆನೆ ಮೇಲಿದ್ದ ಅಂಬಾರಿ ಕೆಳಕ್ಕೆ ಬಿದ್ದರೆ, ಮಾವುತ ಕೆಳಕ್ಕೆ ಬಿದ್ದು ಗಾಯಗೊಂಡಿದ್ದಾನೆ. ಇತ್ತ ಹಲವು ವಾಹನಗಳು ಜಖಂಗೊಂಡಿದೆ.

ಶಿವಮೊಗ್ಗದ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ದಸರಾ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹಾಗೂ ಶಾಸಕ ಚನ್ನಬಸಪ್ಪ ಶಿವಮೊಗ್ಗ ದಸರಾ ಅಂಬಾರಿಗೆ ಚಾಲನೆ ನೀಡಲಾಗಿತ್ತು. ಮೆರವಣಿಗೆಯಲ್ಲಿ ಸ್ವಲ್ಪ ದೂರ ಸಾಗಿದ ಅಂಬಾರಿ ಹೊತ್ತ ಆನೆ ಸೋಮಣ್ಣ ಭಯಗೊಂಡಿದೆ. ಒಂದೆಡೆ ಬ್ಯಾಂಡ್ ವಾದ್ಯ, ಮತ್ತೊಂದೆಡೆ ಕಿಕ್ಕಿರಿದು ಸೇರಿದ ಜನರನ್ನು ನೋಡಿ ಆನೆ ಬೆದರಿ ದಿಕ್ಕಪಾಲಾಗಿ ಓಡಿದೆ.

ಸೋಮಣ್ಣ ಆನೆ ಮೇಲೆ ದಸರಾ ಅಂಬಾರಿ ಕಟ್ಟಲಾಗಿತ್ತು. ಆದರೆ ದಿಕ್ಕಾಪಾಲಾಗಿ ಓಡುವ ವೇಳೆ ಅಂಬಾರಿ ಕೆಳಕ್ಕೆ ಬಿದ್ದಿದೆ. ಆನೆಯನ್ನು ನಿಯಂತ್ರಿಸಲು ಮಾವುತ ಹರಹಾಸ ಪಟ್ಟರೂ ಸಾಧ್ಯವಾಗಲಿಲ್ಲ. ಅಂಬಾರಿ ಕಳಚಿ ಬೀಳುತ್ತಿದ್ದಂತೆ ಆನ ಮೇಲಿದ್ದ ಮಾವುತ ಕೂಡ ಕೆಳಕ್ಕೆ ಬಿದ್ದಿದ್ದಾನೆ. ಇದರಿಂಕ ಮಾವುತನಿಗೂ ಗಾಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments