ಮಂಡ್ಯ ತಾಲೂಕು ಹೆಮ್ಮಿಗೆ ಗ್ರಾಮದ ನಿವಾಸಿ ಕಿರಣ್ ಪುಟ್ಟಲಿಂಗಯ್ಯ ಎಂಬ ಕನ್ನಡಿಗ ಯುವಕ ರಾಯಲ್ ಕೆರೆಬಿಯನ್ ಇಂಟರ್ನ್ಯಾಷನಲ್ ರವರು ನೂತನವಾಗಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಕ್ರೂಸ್ ಹಡಗು Legend of the seas ಗೆ ಆಯ್ಕೆಯಾಗಿರುವ ಮೊಟ್ಟಮೊದಲ ಕನ್ನಡಿಗ ಎನಿಸಿಕೊಂಡಿದ್ದಾನೆ.
ಮಧ್ಯಮ ವರ್ಗದಲ್ಲಿ ಹುಟ್ಟಿ ಅದರಲ್ಲೂ ಸರಿಯಾದ ಸೌಲಭ್ಯಗಳಿಲ್ಲದ ಸರ್ಕಾರಿ ಪ್ರೌಢಶಾಲೆಯಲ್ಲಿ ತನ್ನ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಮೈಸೂರಿನಲ್ಲಿ ಕಾರ್ಯನಿರ್ವಹಿಸಿ ಕಳೆದ ಬುಧವಾರದಂದು ಪಿನ್ ಲ್ಯಾಂಡ್ ನ ತುರ್ಕು ನಗರದಲ್ಲಿ ತನ್ನ ಕರ್ತವ್ಯಕ್ಕೆ ಮರಳಿದ್ದಾನೆ.
ಅಲ್ಲಿಂದಲೇ ತನ್ನ ಕಾರ್ಯಕ್ಷೇತ್ರದ ಅನುಭವವನ್ನು ಹಂಚಿಕೊಂಡಿರುವ ಕಿರಣ್ ಪುಟ್ಟಲಿಂಗಯ್ಯ ಕ್ರೂಸ್ ಕನ್ನಡಿಗರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಭವ ಹಾಗೂ ವಿಶ್ವದಾದ್ಯಂತ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಪ್ರತಿನಿಧಿಸುವ ಅವಕಾಶವನ್ನು ಕಲ್ಪಿಸಿದೆ ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.


