Homeಕರ್ನಾಟಕಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ಭೀತಿ | ಕರ್ನಾಟಕದ ನಾಗರಿಕರಿಗೆ ನೆರವಿಗಾಗಿ 24x7 ತುರ್ತು ವ್ಯವಸ್ಥೆ...

ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ಭೀತಿ | ಕರ್ನಾಟಕದ ನಾಗರಿಕರಿಗೆ ನೆರವಿಗಾಗಿ 24×7 ತುರ್ತು ವ್ಯವಸ್ಥೆ ಸಕ್ರಿಯ

ಮಧ್ಯ ಪ್ರಾಚ್ಯದ ದೇಶಗಳಲ್ಲಿ ಉಂಟಾದ ಯುದ್ಧ ಪರಿಸ್ಥಿತಿ ಹಿನ್ನೆಲೆಯಲ್ಲಿ ಕರ್ನಾಟಕದ ನಾಗರಿಕರಿಗೆ ನೆರವಿಗಾಗಿ 24×7 ತುರ್ತು ವ್ಯವಸ್ಥೆ ಸಕ್ರಿಯವಾಗಿದೆ.

ಮಧ್ಯ ಪ್ರಾಚ್ಯದ ಕೆಲವು ದೇಶಗಳಲ್ಲಿ ಉಂಟಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಮನಗಂಡು, ಹಲವಾರು ರಾಷ್ಟ್ರಗಳು NOTAM (ವಿಮಾನಯಾನ ವಾಯುಪ್ರದೇಶ ಮುಚ್ಚುವಿಕೆ) ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರಕ್ಕೆ ಗಂಭೀರ ವ್ಯತ್ಯಯ ಉಂಟಾಗಿದೆ.

Ministry of Civil Aviation ಹೊರಡಿಸಿರುವ ಇತ್ತೀಚಿನ ಮಾರ್ಗಸೂಚಿಯ ಪ್ರಕಾರ, ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ, ಬಹ್ರೇನ್, ಓಮಾನ್, ಇರಾಕ್, ಜೋರ್ಡನ್, ಕುವೈತ್, ಯುಎಇ ಹಾಗೂ ಖತಾರ್ ದೇಶಗಳ ವಾಯುಪ್ರದೇಶಗಳು ಪ್ರಸ್ತುತ ಮುಚ್ಚಲ್ಪಟ್ಟಿವೆ. ಪರಿಸ್ಥಿತಿ ಇನ್ನೂ ಚಲಾಯಮಾನವಾಗಿದ್ದು, ಸಂಬಂಧಿತ ಪ್ರಾಧಿಕಾರಗಳು ವಾಯುಪ್ರದೇಶಗಳನ್ನು ತೆರೆಯುವ ಕುರಿತು ನಿರಂತರ ಪರಿಶೀಲನೆ ನಡೆಸುತ್ತಿವೆ.

ವಿಮಾನ ಸಂಚಾರದಲ್ಲಿ ಉಂಟಾದ ವ್ಯತ್ಯಯದಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಅನೇಕ ಪ್ರಯಾಣಿಕರು ಮಧ್ಯ ಪ್ರಾಚ್ಯದ ಪರಿಣಾಮಿತ ದೇಶಗಳಲ್ಲಿ, ವಿಶೇಷವಾಗಿ ಯುಎಇ (ದುಬೈ)ನಲ್ಲಿ ಸಿಲುಕಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಮಾನ್ಯ ಕಂದಾಯ ಸಚಿವರ ನಿರ್ದೇಶನದ ಮೇರೆಗೆ, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು (DEOCs) ಸಂಪೂರ್ಣವಾಗಿ ಸಕ್ರಿಯಗೊಳಿಸಲಾಗಿದ್ದು, 24×7 ಕಾರ್ಯನಿರ್ವಹಿಸುತ್ತಿವೆ. Karnataka State Disaster Management Authority ಆಯುಕ್ತರನ್ನು ನೋಡೆಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ಅವರು ನವದೆಹಲಿಯ ಕರ್ನಾಟಕ ಭವನದಲ್ಲಿರುವ ಕರ್ನಾಟಕ ರಾಜ್ಯ ನಿವಾಸ ಆಯುಕ್ತರ ಕಚೇರಿ ಹಾಗೂ Ministry of External Affairs ಜೊತೆಗೆ ಸಮನ್ವಯ ಸಾಧಿಸಿ, ಮಧ್ಯ ಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕರ್ನಾಟಕದ ನಾಗರಿಕರಿಗೆ ಅಗತ್ಯ ನೆರವು ಮತ್ತು ಬೆಂಬಲ ಒದಗಿಸಲು ಕ್ರಮ ಕೈಗೊಂಡಿದ್ದಾರೆ.

SEOC ಹಾಗೂ DEOCs ಗಳು Ministry of External Affairs ಮತ್ತು ಪರಿಣಾಮಿತ ದೇಶಗಳ ಭಾರತೀಯ ರಾಯಭಾರಿ ಕಚೇರಿ/ಕಾನ್ಸುಲೇಟ್‌ಗಳಿಂದ ಹೊರಡಿಸಲಾಗುತ್ತಿರುವ ಸೂಚನೆಗಳನ್ನು ನಿಯಮಿತವಾಗಿ ನವೀಕರಿಸುತ್ತಿವೆ. ನವದೆಹಲಿ ಕರ್ನಾಟಕ ಭವನದಲ್ಲಿಯೂ ಸಮನ್ವಯಕ್ಕಾಗಿ ವಿಶೇಷ ತಂಡವನ್ನು ಸಕ್ರಿಯಗೊಳಿಸಲಾಗಿದೆ.

ಭಾರತೀಯ ರಾಯಭಾರಿ ಕಚೇರಿ ಹಾಗೂ ಕಾನ್ಸುಲೇಟ್‌ಗಳ ಸಹಾಯವಾಣಿ ಸಂಖ್ಯೆಗಳು ಮತ್ತು ಸೂಚನೆಗಳನ್ನು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳಿಗೆ ರವಾನಿಸಲಾಗಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ (X, ವಾಟ್ಸಾಪ್ ಇತ್ಯಾದಿ) ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

SEOC ಹಾಗೂ ನವದೆಹಲಿಯ ಕರ್ನಾಟಕ ರಾಜ್ಯ ನಿವಾಸ ಆಯುಕ್ತರ ಕಚೇರಿ, Ministry of External Affairs ರ್ಯಾಪಿಡ್ ರೆಸ್ಪಾನ್ಸ್ ಸೆಲ್ ಜೊತೆ ಸಮನ್ವಯದಲ್ಲಿವೆ. ಮಾರ್ಚ್ 2 ರಂದು ಬೆಳಿಗ್ಗೆ 10 ಗಂಟೆಯವರೆಗೆ SEOC ಮತ್ತು DEOCs ಗೆ ಲಭಿಸಿದ ಮಾಹಿತಿಯ ಪ್ರಕಾರ, ಕರ್ನಾಟಕದ 109 ಮಂದಿ ಸಿಲುಕಿರುವವರ ವಿವರಗಳನ್ನು MEA ಹಾಗೂ ಕರ್ನಾಟಕ ಭವನಕ್ಕೆ ರವಾನಿಸಲಾಗಿದೆ.

ಯುಎಇ (ದುಬೈ) ಪಟ್ಟಿ

ಬಳ್ಳಾರಿ–32, ಬೆಂಗಳೂರು–25, ಚಿಕ್ಕಬಳ್ಳಾಪುರ–2, ಚಿಕ್ಕಮಂಗಳೂರು–5, ಚಿತ್ರದುರ್ಗ–2, ದಕ್ಷಿಣ ಕನ್ನಡ–3, ದಾವಣಗೆರೆ–9, ಕಲಬುರಗಿ–2, ಶಿವಮೊಗ್ಗ–3, ಕೊಡಗು–4, ತುಮಕೂರು–1, ಉಡುಪಿ–2, ವಿಜಯಪುರ–4, ರಾಯಚೂರು–3, ಜಿಲ್ಲೆ ವಿವರ ಲಭ್ಯವಿಲ್ಲ–3; ಒಟ್ಟು 100 ಮಂದಿ.

ಬಹ್ರೇನ್ ಪಟ್ಟಿ

ಹಾಸನ–4, ಕೊಡಗು–1, ಉಡುಪಿ–3, ಜಿಲ್ಲೆ ವಿವರ ಲಭ್ಯವಿಲ್ಲ–1; ಒಟ್ಟು 9 ಮಂದಿ.

ಮಧ್ಯ ಪ್ರಾಚ್ಯದ ಪರಿಣಾಮಿತ ದೇಶಗಳಲ್ಲಿ ವಾಸಿಸುತ್ತಿರುವ ಕರ್ನಾಟಕದ ನಾಗರಿಕರು ಅಲ್ಲಿ ಸ್ಥಳೀಯ ಸರ್ಕಾರಗಳಿಂದ ಹೊರಡಿಸಲಾದ ಮಾರ್ಗಸೂಚಿಗಳು ಹಾಗೂ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ. ಸಂಬಂಧಿತ ಭಾರತೀಯ ರಾಯಭಾರಿ ಕಚೇರಿ/ಕಾನ್ಸುಲೇಟ್‌ಗಳ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ, “ಸಾರ್ಥಿ ಸಹಾಯತಾ” ಪೋರ್ಟಲ್ ಸೇರಿದಂತೆ ಸಂಬಂಧಿತ ಅಧಿಕೃತ ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಟ್ರಾನ್ಸಿಟ್ ವೀಸಾ ಸಂಬಂಧಿತ ವಿಷಯಗಳಿಗೆ ಸಮೀಪದ FRRO ಕಚೇರಿಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.

Ministry of External Affairs ಸ್ಥಳಾಂತರ (evacuation) ಪ್ರಕ್ರಿಯೆ ಪ್ರಾರಂಭಿಸಿದ ಬಳಿಕ, ಭಾರತದಲ್ಲಿನ ವಿವಿಧ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಕರ್ನಾಟಕದ ನಾಗರಿಕರ ಸಮನ್ವಯಕ್ಕಾಗಿ ಮಾನದಂಡಿತ ಕಾರ್ಯಾಚರಣೆ ವಿಧಾನಗಳು (SOPs) ಪ್ರಕಟಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ

ಯು.ಎ.ಇ ಯ ಭಾರತೀಯ ರಾಯಭಾರಿ ಕಚೇರಿ ಸಹಾಯವಾಣಿ ಸಂಖ್ಯೆಗಳು:
+971 569916774
+971 563888288
+971 507576238

ಮುನೀಷ್ ಮೌದ್ಗಿಲ್, ಭಾ.ಆ.ಸೇ.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ
ವಿಪತ್ತು ನಿರ್ವಹಣೆ, ನೋಂದಣಿ & ಮುದ್ರಾಂಕ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments