Homeದೇಶಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಹತ್ಯೆ

ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಹತ್ಯೆ

ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಮಾಧ್ಯಮ ಕೂಡ ಹತ್ಯೆಯನ್ನ ದೃಢಪಡಿಸಿದೆ.

ಇಸ್ಲಾಮಿಕ್ ಗಣರಾಜ್ಯದ ಮೇಲೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸಿದ ಜಂಟಿ ದಾಳಿಯಲ್ಲಿ  ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ಸ್ಟೇಟ್ಸ್‌ ಮೀಡಿಯಾ ಖಚಿತಪಡಿಸಿದೆ. ಈ ಬೆಳವಣಿಗೆ ಬಳಿಕ ಇರಾನ್‌ ದೇಶಾದ್ಯಂತ 40 ದಿನಗಳ ಶೋಕಾಚರಣೆ ಘೋಷಿಸಿದೆ.

ಖಮೇನಿ ಎಂಬ ಇತಿಹಾಸದ ಅತ್ಯಂತ ಕ್ರೂರ ವ್ಯಕ್ತಿಗಳಲ್ಲಿ ಒಬ್ಬ ಹತನಾಗಿದ್ದಾನೆ ಎಂದು ಟ್ರಂಪ್ ತನ್ನ ಸೋಷಿಯಲ್‌ ಮೀಡಿಯಾ ವೇದಿಕೆ ʻಟ್ರುತ್‌ ಸೋಶಿಯಲ್ʼನಲ್ಲಿ ಬರೆದುಕೊಂಡಿದ್ದರು. ಇದು ಕೇವಲ ಇರಾನ್ ಜನರಿಗೆ ಸಂದ ಜಯ ಮಾತ್ರವಲ್ಲ, ಖಮೇನಿ ಮತ್ತು ಆತನ ರಕ್ತಪಿಪಾಸು ಗೂಂಡಾ ಪಡೆಯಿಂದ ಹತರಾದ ಅಥವಾ ಅಂಗವೈಕಲ್ಯಕ್ಕೊಳಗಾದ ಶ್ರೇಷ್ಠ ಅಮೆರಿಕನ್ನರಿಗೆ ಹಾಗೂ ವಿಶ್ವದ ವಿವಿಧ ದೇಶಗಳ ಜನರಿಗೆ ಸಿಕ್ಕ ನ್ಯಾಯ ಎಂದು ಹೇಳಿದ್ದಾರೆ.

ನಮ್ಮ ಗುಪ್ತಚರ ಮತ್ತು ಅತ್ಯಾಧುನಿಕ ಟ್ರ್ಯಾಕಿಂಗ್ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. ಇಸ್ರೇಲ್ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಿದ ನಮಗೆ, ಆತನಾಗಲಿ ಅಥವಾ ಆತನ ಜೊತೆಗೆ ಹತರಾದ ಇತರ ನಾಯಕರಾಗಲಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಇರಾನ್ ಜನರಿಗೆ ತಮ್ಮ ದೇಶವನ್ನು ಮರಳಿ ಪಡೆಯಲು ಇದು ಅತ್ಯುತ್ತಮ ಅವಕಾಶ. ಇರಾನ್‌ನ ಐಆರ್‌ಜಿಸಿ, ಸೇನೆ, ಇತರ ಭದ್ರತಾ ಹಾಗೂ ಪೊಲೀಸ್ ಪಡೆಗಳು ಇನ್ನು ಮುಂದೆ ಹೋರಾಟ ನಡೆಸಲು ಇಚ್ಛಿಸುತ್ತಿಲ್ಲ. ಅವರು ನಮ್ಮ ದಾಳಿಯಿಂದ ರಕ್ಷಣೆಯನ್ನಷ್ಟೇ ಬಯಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗುತ್ತಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments