ಕೋಲಾರ: ಬಂಗಾರಪೇಟೆ ಮುಖ್ಯ ರಸ್ತೆಯ ಪ್ಲೈ ಓವರ್ ಸಮೀಪ ಬೆಳಿಗ್ಗೆ ಸುಮಾರು ಏಳು ಗಂಟೆಯ ಸಮಯದಲ್ಲಿ ನರ್ಸಿಂಗ್ ವಿದ್ಯಾರ್ಥಿಯೊಬ್ಬಳ ಭೀಕರ ಕೊಲೆ ನಡೆದಿದೆ.
ಬಂಗಾರಪೇಟೆ ಕಾರಹಳ್ಳಿಯ ನಿವಾಸಿ ಸುಜಾತ ( 25 ) ಮ್ರತ ದುರ್ದೈವಿ. ಮೃತ ಸುಜಾತ ನರಸಾಪುರದ ಹೋಂಡಾ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಳು. ಎಂದಿನಂತೆ ಕಾರಹಳ್ಳಿಯಿಂದ ಬಂದು ಬೈಪಾಸ್ ರಸ್ತೆಯ ಮೇಲ್ಸೇತುವೆಯ ಬಳಿ ಇಳಿದ ವೇಳೆ ಘಟನೆ ನಡೆದಿದೆ.
ಅದೇ ಬಸ್ಸಿನಲ್ಲಿ ಬಂದ ಯುವಕ ಚಿರಂಜೀವಿ ( 30 ) ಎಂಬಾತ ಆಕೆಯೊಂದಿಗೆ ಇಳಿದು ಮಾತುಕತೆ ನಡೆಸುತ್ತಿದ್ದಂತೆ ತನ್ನ ಬಳಿ ತಂದಿದ್ದ ಚಾಕುವಿನಿಂದ ಆಕೆಯ ಸಹಪಾಠಿಗಳ ಹಾಗೂ ಸಾರ್ವಜನಿಕರ ಎದುರಿನಲ್ಲೇ ಆಕೆಯ ಕುತ್ತಿಗೆಗೆ ಬಲವಾಗಿ ಇರಿದು ಅಲ್ಲಿಂದ ಹೊರಡುತ್ತಿದ್ದಾಗ ಅಲ್ಲಿ ನೆರೆದಿದ್ದ ಸಾರ್ವಜನಿಕರೇ ಆತನನ್ನ ಹಿಡಿದು ಆತನ ಬಟ್ಟೆಗಳನ್ನ ಕಳಿಸಿ ಮನಸೋ ಇಚ್ಛೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೃತ ದುರ್ದೈವಿ ಸುಚಾತ ಹಾಗೂ ಪಾತಕಿ ಚಿರಂಜೀವಿ ಒಂದೇ ಊರಿನವರೆಂದೂ ಮೊದಲು ಇಬ್ಬರೂ ಪ್ರೀತಿಸುತ್ತಿದ್ದು ಕಳೆದ ಒಂದು ವರುಷದಿಂದ ಇವರಿಬ್ಬರ ನಡುವೆ ಮನಸ್ಥಾಪ ಇತ್ತು ಎಂಬ ವಿಷಯ ಚರ್ಚೆಯಾಗುತ್ತಿದೆ.
ದ್ವೇಷದ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿರಬಹುದೆಂದು ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದುˌ ಆರೋಪಿಯನ್ನು ವಶಕ್ಕೆ ಪಡೆದಿರುವ ನಗರ ಠಾಣೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.


