ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ ಹೊಂದಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧೀಕ್ಷಕ ಇಂಜಿನಿಯರ್ಗಳ ಮತ್ತು ಕಾರ್ಯಪಾಲಕ ಇಂಜಿನಿಯರ್ಗಳ ಸೇವೆಯನ್ನು ಅವರ ಮಾತೃ ಇಲಾಖೆ ಜಲಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ಹಿಂದಿರುಗಿಸಿ ಹೊರಡಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ ಪಡೆದು ಲೋಕೋಪಯೋಗಿ ಇಲಾಖೆಯಲ್ಲಿ ಉಳಿದು ಪ್ರಸ್ತುತ ಸೇವೆಯಲ್ಲಿರುವ/ ಕಾರ್ಯನಿರ್ವಹಿಸುತ್ತಿರುವ 20 ಅಧೀಕ್ಷಕ ಇಂಜಿನಿಯರ್ಗಳು ಮತ್ತು 38 ಕಾರ್ಯಪಾಲಕ ಇಂಜಿನಿಯರ್ಗಳ ಸೇವೆಯನ್ನು ಅವರುಗಳ ಮಾತೃ ಇಲಾಖೆಯಾದ ಜಲಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ಹಿಂದಿರುಗಿಸಿ ಹೊರಡಿಸಲಾಗಿದ್ದ ಆದೇಶವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಲೋಕೋಪಯೋಗಿ ಇಲಾಖೆಯಲ್ಲಿ ಮುಂಬಡ್ತಿ ನೀಡುವಾಗ ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ ಹೊಂದಿರುವ ಅಧಿಕಾರಿಗಳನ್ನು ಮುಂಬಡ್ತಿಗೆ ಪರಿಗಣಿಸದಂತೆ ಕೋರಲಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಹೈಕೋರ್ಟ್ ವಿಚಾರರಣೆ ನಡೆಸಿ, ಸರ್ಕಾರದ ಆದೇಶಕ್ಕೆ ತಡೆ ನೀಡಿ ಮಧ್ಯಂತ ತೀರ್ಪು ನೀಡಿದೆ.
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ ಪಡೆದು ಲೋಕೋಪಯೋಗಿ ಇಲಾಖೆಯಲ್ಲಿ ಉಳಿದು ಪ್ರಸ್ತುತ ಸೇವೆಯಲ್ಲಿರುವ/ ಕಾರ್ಯನಿರ್ವಹಿಸುತ್ತಿರುವ 20 ಅಧೀಕ್ಷಕ ಇಂಜಿನಿಯರ್ಗಳು ಮತ್ತು 38 ಕಾರ್ಯಪಾಲಕ ಇಂಜಿನಿಯರ್ಗಳ ಸೇವೆಯನ್ನು ಅವರುಗಳ ಮಾತೃ ಇಲಾಖೆಯಾದ ಜಲಸಂಪನ್ಮೂಲ ಇಲಾಖೆಗೆ ಶಾಶ್ವತವಾಗಿ ಹಿಂದಿರುಗಿಸಿ ಹೊರಡಿಸಲಾದ ಆದೇಶವನ್ನು ಸರ್ಕಾರ ಹಿಂಪಡೆದಿದೆ.
ಈ ಮೂಲಕ ಆ ಎಲ್ಲ ಇಂಜಿನಿಯರ್ಗಳು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯವನ್ನು ಮುಂದುವರಿಸಬೇಕಿದೆ.