ಸಂಸದ ರಾಘವೇಂದ್ರ ಅವರು ಹಿಟ್ ಅಂಡ್ ರನ್ ನಾಯಕರ ಪಟ್ಟಿಗೆ ಸೇರುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಲಹೆ ನೀಡಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಸೋಮವಾರ ಪ್ರತಿಕ್ರಿಯೆ ನೀಡಿದರು.
ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ ಎನ್ನುವ ಸಂಸದ ಬಿ.ವೈ.ರಾಘವೇಂದ್ರ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಿ ಆರೋಪ ಮಾಡಲಿ. ಹಿಟ್ ಅಂಡ್ ರನ್ ಮಾಡುವ ಒಂದಷ್ಟು ನಾಯಕರಿದ್ದಾರಲ್ಲಾ ಅವರಂತೆ ರಾಘವೇಂದ್ರ ಅವರು ಆಗುವುದು ಬೇಡ. ರಾಘವೇಂದ್ರ ಅವರ ಹೆಸರು ಸುಳ್ಳಿಗೆ ಮತ್ತೊಂದು ಉದಾಹರಣೆಯಂತಾಗುವುದು ಬೇಡ” ಎಂದು ತಿರುಗೇಟು ನೀಡಿದರು.
ಜಾಗರೂಕತೆಯಿಂದ ಪಟಾಕಿ ಸಿಡಿಸಿ
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು. ಆದಷ್ಟು ಜಾಗರೂಕತೆಯಿಂದ ಪಟಾಕಿ ಸಿಡಿಸಬೇಕು. ಹಸಿರ ಪಟಾಕಿಯನ್ನು ಮಾತ್ರ ಬಳಸಬೇಕು. ಈಗಾಗಲೇ ಸಣ್ಣಪುಟ್ಟ ಅವಘಡಗಳ ಸುದ್ದಿ ಕೇಳಿಬರುತ್ತಿದೆ. ಯಾವುದೇ ಸಿಡಿಮದ್ದುಗಳನ್ನು ಸಿಡಿಸುವ ಸಂದರ್ಭದಲ್ಲಿಯೂ ಎಚ್ಚರವಿರಲಿ. ಈ ವರ್ಷ ರಾಜ್ಯದಲ್ಲಿ ಉತ್ತಮವಾಗಿ ಮಳೆ ಬಂದಿದೆ. ಸಮೃದ್ಧಿಯಾಗಿ ಬೆಳೆ ಬಂದಿದೆ. ಪ್ರತಿವರ್ಷವೂ ಸಮೃದ್ಧಿಯಾಗಿರಲಿ” ಎಂದು ಪ್ರಾರ್ಥಿಸಿದರು.