ಆರ್ಎಸ್ಎಸ್ ಸ್ಥಾಪನೆಯ100 ನೇ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನ ಮಂತ್ರಿಗಳು ಒಂದು ಅಂಚೆ ಚೀಟಿ ಮತ್ತು 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿರುವುದು ಎಂದಿಗೂ ಒಪ್ಪಿಕೊಂಡಿರದ ಭಾರತದ ಸಂವಿಧಾನಕ್ಕೆ ಒಂದು ಗಂಭೀರ ಗಾಯ ಮತ್ತು ಅವಮಾನವಾಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.
ಅಧಿಕೃತ ನಾಣ್ಯವೊಂದು ಆರೆಸ್ಸೆಸ್ನ ಹಿಂದುತ್ವ ರಾಷ್ಟ್ರ ಎಂಬ ಸಂಕುಚಿತ ಪಂಥವಾದೀ ಪರಿಕಲ್ಪನೆಯ ಸಂಕೇತವಾಗಿರುವ “ಭಾರತ ಮಾತಾ” ಚಿತ್ರವನ್ನು ಆರೆಸ್ಸೆಸ್ ಪ್ರಚುರಪಡಿಸಿದ ಒಂದು ಹಿಂದೂ ದೇವತೆಯ “ಭಾರತ ಮಾತಾ” ಚಿತ್ರವನ್ನು ನಕಲಿಸುವುದು ಅತ್ಯಂತ ಆಕ್ಷೇಪಾರ್ಹ ಸಂಗತಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
“ಅಂಚೆ ಚೀಟಿಯೂ 1963 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಮವಸ್ತ್ರ ಧರಿಸಿದ ಆರೆಸ್ಸೆಸ್ ಸ್ವಯಂಸೇವಕರನ್ನು ತೋರಿಸಿರುವುದು ಕೂಡ ಇತಿಹಾಸವನ್ನು ಸುಳ್ಳಾಗಿಸಿದೆ. ಇದು ಭಾರತ-ಚೀನಾ ಯುದ್ಧದ ಸಮಯದಲ್ಲಿ ಆರೆಸ್ಸೆಸ್ನ ದೇಶಭಕ್ತಿಯನ್ನು ಗುರುತಿಸಿ ನೆಹರು 1963 ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಅದನ್ನು ಆಹ್ವಾನಿಸಿದ್ದರು ಎಂಬ ಸುಳ್ಳನ್ನು ಆಧರಿಸಿದೆ, ಏಕೆಂದರೆ 1963 ರ ಗಣರಾಜ್ಯೋತ್ಸವ ಮೆರವಣಿಗೆ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರ ಒಂದು ಬೃಹತ್ ಸಭೆಯೇ ಆಗಿತ್ತು ಎಂದು ಪುರಾವೆಗಳ ಮೂಲಕ ತೋರಿಸಲಾಗಿದೆ” ಎಂದು ಹೇಳಿದೆ.