Homeಕರ್ನಾಟಕಹಾಲು, ಮೊಸರು ಬಿಟ್ಟು ನಂದಿನಿ ಉತ್ಪನ್ನಗಳ ಮೇಲಿನ ದರ ಇಳಿಕೆ

ಹಾಲು, ಮೊಸರು ಬಿಟ್ಟು ನಂದಿನಿ ಉತ್ಪನ್ನಗಳ ಮೇಲಿನ ದರ ಇಳಿಕೆ

ಕೇಂದ್ರ ಸರ್ಕಾರ ಶೇ.12ರಿಂದ 5ಕ್ಕೆ ಜಿಎಸ್​​ಟಿ ಕಡಿತ ಮಾಡಿದ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕದಲ್ಲಿ ಕೆಎಂಎಫ್​​ ತನ್ನ ನಂದಿನಿ ಹಾಲಿನ ಕೆಲವು ಉತ್ಪನ್ನಗಳ ಮೇಲಿನ ದರ ಇಳಿಕೆ ಮಾಡಿದೆ.

ಸೆ.22ರಿಂದ ಹೊಸ ದರ ಜಾರಿಗೆ ಬರಲಿದ್ದು, ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರು ಶನಿವಾರ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದಾರೆ.

ಜಿಎಸ್​​ಟಿ ಸ್ಲ್ಯಾಬ್‌ಗಳ ಮತ್ತು ದರಗಳ ಕಡಿತ ಇಳಿಕೆ ಬೆನ್ನಲ್ಲೇ ದರ ಇಳಿಕೆಗೆ ವಿಚಾರಾವಗಿ ಕೆಎಂಎಫ್​ ಶುಕ್ರವಾರ ​ ಅಧಿಕಾರಿಗಳು ಸಭೆ ಮಾಡಿ ಹೊಸ ದರ ನಿಗದಿ ಮಾಡಿದ್ದಾರೆ. ಇಂದಿನ ಸುದ್ದಿಗೋಷ್ಠಿಯಲ್ಲಿ ಯಾವುದರ ದರ ಎಷ್ಟು ಇಳಿಕೆ ಎಂಬುವುದನ್ನು ಕೆಎಂಎಫ್ ವ್ಯವಸ್ಥಾಪಕರು ವಿವರಿಸಿದ್ದಾರೆ.

“ಮಾರಾಟಗಾರರಿಗೆ ಹಳೆಯ ಉತ್ಪನ್ನಗಳನ್ನು ಹೊಸ ಪಟ್ಟಿಯಂತೆ ಮಾರಾಟ ಮಾಡಲು ಸೂಚಿಸಲಾಗಿದೆ. ಹಳೆಯ ದರದಲ್ಲಿ ಮಾರಾಟ ಮಾಡಿದರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಲಾಗಿದೆ. ಹಾಲು ಮತ್ತು ಮೊಸರಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ” ಎಂದು ವಿವರಿಸಿದರು.

2017ರಲ್ಲಿ ಹಾಲಿನ ಉತ್ಪನ್ನಗಳ ಮೇಲೆ ಜಿಎಸ್​​ಟಿ ವಿಧಿಸಲಾಗಿತ್ತು. 2022 ರಲ್ಲಿ ಜಿಎಸ್​ಟಿಯನ್ನು ಶೇಕಡಾ 22ಕ್ಕೆ ಹೆಚ್ಚಿಸಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹಾಲಿನ ಉತ್ಪನ್ನಗಳ ಮೇಲಿನ ಸರಕು ಸೇವಾ ತೆರಿಗೆಯನ್ನು ಶೇ.12ರಿಂದ 5ಕ್ಕೆ ಇಳಿಕೆ ಮಾಡಿದೆ. ಇದು ಬೆಲೆ ಏರಿಕೆಯ ಬಿಸಿಯನ್ನು ಸ್ವಲ್ಪ ಪ್ರಮಾಣದಲ್ಲಿ ತಗ್ಗಿಸಿದೆ.

ನಂದಿನಿ ತುಪ್ಪ, ಬೆಣ್ಣೆ, ಚೀಸ್, ಕುರುಕು ತಿಂಡಿಗಳ ಮೇಲಿನ ಜಿಎಸ್‌ಟಿ ಶೇ.12 ರಿಂದ 5ಕ್ಕೆ ಮತ್ತು ನಂದಿನಿ ಕುಕ್ಕಿಸ್, ಚಾಕೋಲೇಟ್ಸ್, ಐಸ್‌ಕ್ರೀಂ, ಇನ್ಸ್‌ಟಾಂಟ್ ಮಿಕ್ಸ್ ಮತ್ತು ಪ್ಯಾಕ್ಸ್ ನೀರಿನ ಮೇಲಿನ ಜಿಎಸ್‌ಟಿ ಶೇ.18 ರಿಂದ 5ಕ್ಕೆ ದರ ಇಳಿಸಿದೆ. ನಂದಿನಿ ಪನೀರ್ ಮತ್ತು ಯುಹೆಚ್‌ಟಿ ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್‌ಟಿ ಶೇ.5 ರಿಂದ 0. ರಂತೆ ಇಳಿಕೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments