ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಇತರೆ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್ ವಜಾಗೊಳಿಸಿದೆ.
ಹಾಗಯೇ ‘ನನಗೆ ಸ್ವಲ್ಪ ವಿಷ ಕೊಡಿ’ ಎಂದಿದ್ದ ದರ್ಶನ್ ಅವರ ಕೆಲವು ಬೇಡಿಕೆಗಳನ್ನು ಈಡೇರಿಸಲು ಕೋರ್ಟ್ ಸಮ್ಮತಿಸಿದೆ. ಇದರಿಂದಾಗಿ ದರ್ಶನ್ ಅಂಡ್ ಗ್ಯಾಂಗ್ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲೇ ತಮ್ಮ ವಾಸ ಮುಂದುವರಿಸಬಹುದು.
ದರ್ಶನ್ ಗೆ ಕನಿಷ್ಠ ಮೂಲಸೌಕರ್ಯಗಳನ್ನು ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸಹ ಕೋರ್ಟ್ ಮಾನ್ಯ ಮಾಡಿದ್ದು, ಜೈಲು ಮ್ಯಾನುಯಲ್ ಪ್ರಕಾರ ಏನೆಲ್ಲಾ ಸೌಲಭ್ಯ ಕೊಡಬೇಕು ಅದನ್ನು ನೀಡಿ ಎಂದು ಕೋರ್ಟ್ ಆದೇಶಿಸಿದೆ. ಅಂದರೆ ಜೈಲಿನೊಳಗೆ ಓಡಾಡಲು, ಹಾಸಿಗೆ ದಿಂಬು ನೀಡಲು ಕೋರ್ಟ್ ಸೂಚಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಆರೋಪಿ ನಟ ದರ್ಶನ್, ಕೋರ್ಟ್ ನಲ್ಲಿ ಜಡ್ಜ್ ಮುಂದೆ ತನಗೆ ವಿಷಬೇಕು ಎಂದು ಕೇಳಿದ್ದರು. ನಟ ದರ್ಶನ್ ಬೇಡಿಕೆ ಕೇಳಿದ ಜಡ್ಜ್ ಕೂಡ ಆಶ್ಚರ್ಯ ಪಟ್ಟಿದ್ದರು.
ವಿಷ ಕೇಳಿದ ದರ್ಶನ್ಗೆ ಹಾಗೆಲ್ಲಾ ಕೇಳದಂತೆ ನ್ಯಾಯಾಧೀಶರು ಸೂಚಿಸಿದ್ದರು. ಜೈಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ಮಧ್ಯಾಹ್ನ ನೀಡುವುದಾಗಿ ನ್ಯಾಯಾಧೀಶರು ಬೆಳಗಿನ ವಿಚಾರಣೆಯಲ್ಲಿ ಹೇಳಿದ್ದರು.