HomeSportಕಾಲ್ತುಳಿತ ಘಟನೆ ಬಳಿಕ ಮೌನವಾಗಿದ್ದ ಆರ್‌ಸಿಬಿ ಈಗ ಅಭಿಮಾನಿಗಳನ್ನು ಉದ್ದೇಶಿಸಿ ಭಾವನಾತ್ಮಕ ಪೋಸ್ಟ್‌

ಕಾಲ್ತುಳಿತ ಘಟನೆ ಬಳಿಕ ಮೌನವಾಗಿದ್ದ ಆರ್‌ಸಿಬಿ ಈಗ ಅಭಿಮಾನಿಗಳನ್ನು ಉದ್ದೇಶಿಸಿ ಭಾವನಾತ್ಮಕ ಪೋಸ್ಟ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೂರು ತಿಂಗಳ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.

ಜಗತ್ತಿನಲ್ಲೇ ಅತೀ ಹೆಚ್ಚು ಫ್ಯಾನ್ಸ್ ಹೊಂದಿರುವ ಬೆಂಗಳೂರಿನ ಆರ್‌ಸಿಬಿ ತಂಡ ಬರೋಬ್ಬರಿ 18 ವರ್ಷಗಳ ನಂತರ ಐಪಿಎಲ್ ಟ್ರೋಫಿ ಗೆದ್ದಿತ್ತು. ಆರ್‌ಸಿಬಿ ಗೆಲುವು ಕಂಡು ಕ್ರೀಡಾಭಿಮಾನಿಗಳು ಹಗಲು ರಾತ್ರಿ ಸಂಭ್ರಮಿಸಿದ್ದರು. ಆದರೆ ಆ ಗೆಲುವಿನ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. 24 ಗಂಟೆಗಳಲ್ಲಿ ಶೋಕದ ವಾತಾವರಣ ತಿರುಗಿತ್ತು.

ಟ್ರೋಫಿ ಗೆದ್ದು ಬೆಂಗಳೂರಿಗೆ ಬಂದಿಳಿದಿದ್ದ ಆರ್‌ಸಿಬಿ ತಂಡವನ್ನು ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಸಾವಿರಾರು ಮಂದಿ ಅಭಿಮಾನಿಗಳು ಬಂದಿದ್ದಾಗ ಕಾಲ್ತುಳಿತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದರು. ಆ ನಂತರ ಸಾಕಷ್ಟು ಬೆಳವಣಿಗೆಗಳು ಸಂಭವಿಸಿದವು. ಬಳಿಕ ದುರ್ಘಟನೆಗೆ ಸಂತಾಪ ಸೂಚಿಸಿದ್ದ ಆರ್‌ಸಿಬಿ ತಂಡ ಬಳಿಕ ಸೈಲೆಂಟ್ ಆಗಿತ್ತು.

ಅಲ್ಲಿಂದ ಮೂರು ತಿಂಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕಿರದ ಆರ್‌ಸಿಬಿ ಇದೀಗ ಪೋಸ್ಟ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ.

ಪೋಸ್ಟ್‌ನಲ್ಲಿ ಏನಿದೆ?

ಪ್ರಿಯ 12ನೇ ಸೇನಾಧಿಕಾರಿಗಳೇ, ಇದು ನಿಮಗೆ ನಮ್ಮ ಹೃತ್ತೂರ್ವಕ ಪತ್ರ! ನಿಮ್ಮ 12ನೇ ಸೈನ್ಯದ ಬಗ್ಗೆ ನಾವು ತುಂಬಾ ಸಂತೋಷಪಡುತ್ತೇವೆ. ನಾವು ಮೌನಕ್ಕೆ ಜಾರಿರಲಿಲ್ಲ. ದುಃಖದಲ್ಲಿ ಮುಳುಗಿದ್ದೆವು. ಈ ಸ್ಥಳವು ಒಂದು ಕಾಲದಲ್ಲಿ ನೀವು ಹೆಚ್ಚು ಆನಂದಿಸಿದ ಶಕ್ತಿ, ನೆನಪುಗಳು ಮತ್ತು ಕ್ಷಣಗಳಿಂದ ತುಂಬಿತ್ತು.. ಆದರೆ ಜೂನ್ 4 ಎಲ್ಲವನ್ನೂ ಬದಲಾಗಿ ಹೋಯಿತು.

ಆ ದಿನ ನಮ್ಮ ಹೃದಯಕ್ಕೆ ನೋವನ್ನುಂಟು ಮಾಡಿದೆ. ಅಂದಿನಿಂದ ಮೌನವು ಎಲ್ಲವನ್ನೂ ಸ್ತಬ್ಧವಾಗಿತ್ತು. ಆ ಮೌನದಲ್ಲಿ, ನಾವು ದುಃಖಿಸುತ್ತಿದ್ದೇವೆ, ಕೇಳುತ್ತಿದ್ದೇವೆ & ಕಲಿಯುತ್ತಿದ್ದೇವೆ. ನಿಧಾನವಾಗಿ, ನಾವು ಕೇವಲ ಪ್ರತಿಕ್ರಿಯೆಗಿಂತ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ನಾವು ನಿಜವಾಗಿಯೂ ನಂಬುವ ವಿಷಯದಲ್ಲಿ ಸಾಗಿದ್ದೇವೆ.

ಆರ್‌ಸಿಬಿ ನಮ್ಮ ಅಭಿಮಾನಿಗಳನ್ನು ಗೌರವಿಸುವ, ನೋವನ್ನು ಗುಣಪಡಿಸುವ ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವ ಅಗತ್ಯವನ್ನು ತಿಳಿದುಕೊಂಡಿದೆ. ನಮ್ಮ ಸಮುದಾಯ ಮತ್ತು ಅಭಿಮಾನಿಗಳು ರೂಪಿಸಿದ ಅರ್ಥಪೂರ್ಣ ಕ್ರಿಯೆಗೆ ವೇದಿಕೆಯಾಗಿದೆ. ನಾವು ಇಂದು ಈ ಸ್ಥಳಕ್ಕೆ ಹಿಂತಿರುಗುತ್ತೇವೆ, ಆಚರಣೆಯೊಂದಿಗೆ ಅಲ್ಲ ಆದರೆ ಕಾಳಜಿಯೊಂದಿಗೆ. ಹೊಸತನ್ನು ಹಂಚಿಕೊಳ್ಳಲು. ನಿಮ್ಮೊಂದಿಗೆ ನಿಲ್ಲಲು. ಮುಂದೆ ನಡೆಯಲು, ಒಟ್ಟಿಗೆ. ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯಲು. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.. ಎಂದು ಟ್ವೀಟ್‌ ಮಾಡಿದೆ.

ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ತಂಡ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments