Homeಕರ್ನಾಟಕದುರಂತ ಸ್ಥಳಕ್ಕೆ ಜಮೀರ್ ಅಹಮದ್ ಖಾನ್ ಭೇಟಿ

ದುರಂತ ಸ್ಥಳಕ್ಕೆ ಜಮೀರ್ ಅಹಮದ್ ಖಾನ್ ಭೇಟಿ

ಸಚಿವ ಜಮೀರ್ ಅಹಮದ್ ಖಾನ್ ಅವರು ವಿಲ್ಸನ್ ಗಾರ್ಡನ್ ನ ಚಿನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟ ಗೊಂಡು ದುರಂತ ನಡೆದ ಸ್ಥಳ ಹಾಗೂ ನಗರ್ತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕ ವಾಗಿ ಪರಿಹಾರ ನೀಡಿದರು.

ವಿಲ್ಸನ್ ಗಾರ್ಡನ್ ಚೆನ್ನಯ್ಯನ ಪಾಳ್ಯದಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿ ಮನೆಗಳು ಹಾನಿ ಯಾದ ಸ್ಥಳಕ್ಕೆ ಭೇಟಿ ನೀಡಿ ಮೃತ ಬಾಲಕನ ಕುಟುಂಬಕ್ಕೆ ಐದು ಲಕ್ಷ ರೂ., ತಾಯಿ-ಮಗಳು ಗಾಯಳು ಕುಟುಂಬಕ್ಕೆ ಎರಡು ಲಕ್ಷ ರೂ., ಇಬ್ಬರು ಗಾಯಾಳು ಕುಟುಂಬಕ್ಕೆ ಎರಡು ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 25 ಸಾವಿರ ರೂ. ನೀಡಿದರು.

ಕೆ ಎಂ ಡಿಸಿ ಅಧ್ಯಕ್ಷ ಅಲ್ತಾಫ್ ಖಾನ್ ಉಪಸ್ಥಿತರಿದ್ದರು. ನಂತರ ಬೆಂಗಳೂರು ನಗರ್ತ ಪೇಟೆಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಚಿವರೂ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ಮದನ್, ಸುರೇಶ್ ಕುಟುಂಬಕ್ಕೆ ವೈಯಕ್ತಿಕವಾಗಿ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು. ಮುಖಂಡ ಯುವರಾಜ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments