Homeಕರ್ನಾಟಕಬಿಜೆಪಿಯ ಮತ ವಂಚನೆ ಮಾಹಿತಿ ಬಿಚ್ಚಿಟ್ಟ ರಾಹುಲ್‌ ಗಾಂಧಿ

ಬಿಜೆಪಿಯ ಮತ ವಂಚನೆ ಮಾಹಿತಿ ಬಿಚ್ಚಿಟ್ಟ ರಾಹುಲ್‌ ಗಾಂಧಿ

ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಭಾರತದ ಹಲವು ರಾಜ್ಯಗಳ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಗುರುವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,250 ಮತಗಳನ್ನು ವಿವಿಧ ರೀತಿಯಲ್ಲಿ ವಂಚಿಸಿ ಮತಗಳವು ಮಾಡಿರುವುದನ್ನು ಮಾಹಿತಿ ಬಿಚ್ಚಿಟ್ಟರು.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00, 250 ಮತದಾರರಲ್ಲಿ 11,965 ನಕಲಿ ಮತದಾರರು, 40,009 ಸುಳ್ಳು ಹಾಗೂ ಅಮಾನ್ಯ ವಿಳಾಸ, 10,452 ಮಂದಿ ಒಂದೇ ವಿಳಾಸದಲ್ಲಿ ಮತದಾನ ಮಾಡಿದ ಹಲವರು, 4132 ಮಂದಿ ಅಮಾನ್ಯ ಭಾವಚಿತ್ರ ಮೂಲಕ ಹಾಗೂ 33,692 ಮಂದಿ ಫಾರ್ಮ್‌ 6 ದುರ್ಬಳಕೆ ಮಾಡಿಕೊಂಡು ಮತದಾನ ಮಾಡಿದ್ದಾರೆ ಎಂದು ದಾಖಲೆ ಮೂಲಕ ಬಹಿರಂಗ ಪಡಿಸಿದರು.

ಸುಳ್ಳು ಹಾಗೂ ಅಮಾನ್ಯ ವಿಳಾಸ ನೀಡಿ ಮತದಾನ ಮಾಡಿದ 40,009 ಮಂದಿ ದಾಖಲೆಯ ಬಗ್ಗೆ ಹಾಗೂ 40, 50, ಮತದಾರರು ಒಂದೇ ಕೊಠಡಿಯಲ್ಲಿ ವಾಸವಿರುವ ಬಗ್ಗೆಯೂ ಪರಿಶೀಲನೆಗೊಳಪಡಿಸಿದ ದಾಖಲೆಗಳನ್ನು ಕೂಡ ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಪ್ರದರ್ಶಿಸಿದರು.

ಮಹದೇವಪುರ ಕ್ಷೇತ್ರದಲ್ಲಿ ಮತದಾನ ಮಾಡಿರುವ ಹಲವರು ಬೇರೆ ರಾಜ್ಯಗಳಲ್ಲಿ ಮತದಾರರಾಗಿರುವ ಬಗ್ಗೆ ರಾಹುಲ್‌ ಗಾಂಧಿ ಮಾಹಿತಿ ನೀಡಿದರು. ಒಂದೇ ಹೆಸರಿನ, ಒಂದೇ ವಿಳಾಸದ ಹಾಗೂ ವಿವಿಧ ವಯಸ್ಸಿನ ದಾಖಲೆಯ ಮೂಲಕ ಮತದಾನ ಮಾಡಿದ್ದಾರೆ ಎಂಬುದನ್ನು ರಾಹುಲ್‌ ಗಾಂಧಿ ತಿಳಿಸಿದರು.

2024 ರಲ್ಲಿ ಅಧಿಕಾರದಲ್ಲಿ ಉಳಿಯಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ 25 ಸ್ಥಾನಗಳನ್ನು ‘ಕದಿಯಬೇಕಾಗಿತ್ತು’ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 33,೦೦೦ ಕ್ಕಿಂತ ಕಡಿಮೆ ಮತಗಳ ಅಂತರದಿಂದ 25 ಸ್ಥಾನಗಳನ್ನು ಗೆದ್ದಿತು ಎಂದು ರಾಹುಲ್ ಗಾಂಧಿ ಆರೋಪಿಸಿದರು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments