Homeಕರ್ನಾಟಕಆರ್ಥಿಕ ಅಪರಾಧವಿರುವ ಕಂಪನಿಗಳನ್ನು ಸರಕಾರ ತಲೆ ಮೇಲೆ ಹೊತ್ತುಕೊಂಡಿದೆ: ಗೋವಿಂದ ಕಾರಜೋಳ

ಆರ್ಥಿಕ ಅಪರಾಧವಿರುವ ಕಂಪನಿಗಳನ್ನು ಸರಕಾರ ತಲೆ ಮೇಲೆ ಹೊತ್ತುಕೊಂಡಿದೆ: ಗೋವಿಂದ ಕಾರಜೋಳ

ಆರ್ಥಿಕ ಅಪರಾಧ ಇರುವವರ ಕಂಪನಿಗಳನ್ನು ಕರ್ನಾಟಕ ಸರಕಾರ ತಲೆ ಮೇಲೆ ಹೊತ್ತುಕೊಂಡು ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಜನ ಸತ್ತಿದ್ದು, ಈ ದುರ್ಘಟನೆಗೆ ಸಿದ್ದರಾಮಯ್ಯನವರ ಸರ್ಕಾರ ನೇರ ಹೊಣೆ. ಆದ್ದರಿಂದ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು” ಎಂದು ಒತ್ತಾಯಿಸಿದರು.

“ಹಿಂದಿನ ಸರಕಾರ ಈ ಆರ್ಥಿಕ ಅಪರಾಧಿ ಕಂಪನಿಗಳ ಸಂಭ್ರಮಾಚಾರಣೆಗೆ ಮುಂದಾಗಿಲ್ಲ ಹಾಗೂ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿಲ್ಲ. ಬ್ರ್ಯಾಂಡ್ ಅಂಬಾಸಿಡರ್ ಆಗಿ ಕೆಲಸ ಮಾಡಿರುವಂತದ್ದು ಸಿದ್ದರಾಮಯ್ಯನವರ ಸರ್ಕಾರ ಎಂದು ಟೀಕಿಸಿದರು. ಮೊನ್ನೆ ಬೆಂಗಳೂರಿನಲ್ಲಿ ನಡೆದ ದುರಂತಕ್ಕೆ ನೇರವಾಗಿ ಕರ್ನಾಟಕ ಸರ್ಕಾರವೇ ಹೊಣೆಗಾರ” ಎಂದು ಆರೋಪಿಸಿದರು.

“ದೇಶದ ಇಬ್ಬರು ಆರ್ಥಿಕ ಅಪರಾಧಿಗಳಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಒಂದನೇಯದ್ದು ಆರ್‌ಸಿಬಿ. ಇದು ವಿಸ್ಕಿ ಮಾರಾಟಕ್ಕಾಗಿ ಹುಟ್ಟಿಕೊಂಡ ವಿಜಯ್ ಮಲ್ಯರವರ ಒಂದು ಕಂಪನಿ. ಎರಡನೇಯದ್ದು ‘ಐಪಿಎಲ್’ ಲಲಿತ್ ಮೋದಿಯವರದ್ದು. ಇವರು ಕೂಡ ದೇಶದ ಆರ್ಥಿಕ ಅಪರಾಧಿ. ಇಬ್ಬರು ಆರ್ಥಿಕ ಅಪರಾಧಿಗಳು ಅಪರಾಧವನ್ನು ಮಾಡಿ ದೇಶದ ಖಜಾನೆಗೆ ಕನ್ನ ಹಾಕಿ ದೇಶ ಬಿಟ್ಟು ಹೋದವರು” ಎಂದು ಅವರು ಟೀಕಿಸಿದರು.

“ಯಾವ ಕಾರಣಕ್ಕಾಗಿ ವಿಜಯ ಮಲ್ಯ ಅವರ ಆರ್.ಸಿ.ಬಿ. ಕಂಪನಿ ಮತ್ತು ಲಲಿತ್ ಮೋದಿಯವರ ಐಪಿಎಲ್ ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೀರಿ ಎಂಬುದನ್ನು ಈ ದೇಶದ ಜನತೆ ಮತ್ತ ನಾಡಿನ ಜನತೆ ತಿಳಿಸಬೇಕಾಗಿತ್ತು” ಎಂದು ತಿಳಿಸಿದರು.

ವಿರೋಧ ಪಕ್ಷದ ಉಪ ನಾಯಕ ಹಾಗೂ ಶಾಸಕ ಅರವಿಂದ್ ಬೆಲ್ಲದ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಅವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments