Homeಕರ್ನಾಟಕಜೆಡಿಎಸ್‌ನ ಗೌರಿಶಂಕರ್ ಕಾಂಗ್ರೆಸ್‌ ಸೇರ್ಪಡೆಗೆ ಸಚಿವ ಕೆ ಎನ್‌ ರಾಜಣ್ಣ ಬಹಿರಂಗ ಅಸಮಧಾನ

ಜೆಡಿಎಸ್‌ನ ಗೌರಿಶಂಕರ್ ಕಾಂಗ್ರೆಸ್‌ ಸೇರ್ಪಡೆಗೆ ಸಚಿವ ಕೆ ಎನ್‌ ರಾಜಣ್ಣ ಬಹಿರಂಗ ಅಸಮಧಾನ

ನಮ್ಮ ಗಮನಕ್ಕೆ ತರದೆ ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್‌ ಮಾಜಿ ಶಾಸಕ ಡಿ ಎಸ್‌ ಗೌರಿಶಂಕರ್ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಸಚಿವ ಕೆ ಎನ್ ರಾಜಣ್ಣ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಹಾಸನದಲ್ಲಿ ಹಾಸನಾಂಬೆ ಗರ್ಭಗುಡಿ ಬಾಗಿಲು ಮುಚ್ಚುವ ಪೂಜೆಯಲ್ಲಿ ಭಾಗಿಯಾಗಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಜಿಲ್ಲೆಯ ಯಾವ ನಾಯಕರನ್ನೂ ಸಂಪರ್ಕಿಸದೆ ಗೌರಿಶಂಕರ್‌ ಅವರನ್ನು ಸೇರಿಸಿಕೊಂಡಿದ್ದಕ್ಕೆ ಅಸಮಾಧಾನವಿದೆ” ಎಂದರು.

“ಗೌರಿಶಂಕರ್‌ ಅವರ ಸೇರ್ಪಡೆ ಬಗ್ಗೆ ನನಗಾಗಲಿ, ಜಿ ಪರಮೇಶ್ವರ್‌ಗಾಗಲಿ ಜಿಲ್ಲೆಯ ಉಳಿದ ಕಾಂಗ್ರೆಸ್‌ ಶಾಸಕರಿಗಾಗಲಿ ಮಾಹಿತಿ ನೀಡಿಲ್ಲ. ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗಾಗಲಿ ಮಾಹಿತಿ ನೀಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಎಂಬುದು ಸಮುದ್ರವಿದ್ದಂತೆ. ಸಮುದ್ರದಲ್ಲಿ ಗಂಗಾ ಮಾತೆಯಷ್ಟು ಪವಿತ್ರ ಜಲವೂ ಬರುತ್ತದೆ. ಪಕ್ಕದ ಚರಂಡಿ ನೀರು ಕೂಡ ಬರುತ್ತೆ, ಸಮುದ್ರದಲ್ಲಿ ಅಮೃತವೂ ಇದೆ, ವಿಷವೂ ಇದೆ. ಅಮೃತ ಸಿಗೋರಿಗೆ ಅಮೃತ ಸಿಗಲಿದೆ. ವಿಷ ಸಿಗೋರಿಗೆ ವಿಷ ಸಿಗುತ್ತದೆ” ಎಂದು ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ರಾಜಣ್ಣ ಮಾರ್ಮಿಕವಾಗಿ ಹೇಳಿದರು.

“ನಮ್ಮ ಜಿಲ್ಲೆಯಲ್ಲಿ ಏನೇ ಆದ್ರೂ ನಿಭಾಯಿಸುವ ಶಕ್ತಿ ಜನ ನೀಡಿದ್ದಾರೆ. ನಮ್ಮ ಜಿಲ್ಲೆಯ ಜನರು ನನಗೆ, ಡಾ. ಜಿ ಪರಮೇಶ್ವರ್‌ಗೆ ಶಕ್ತಿ ಕೊಟ್ಟಿದ್ದಾರೆ. ಎಂತಹ ಸಂದರ್ಭ ಬಂದರೂ ನಿಭಾಯಿಸುತ್ತೇವೆ. ನಾವೇನು ಅಶಕ್ತರಲ್ಲ” ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments