ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸಿಕ್ಕಿಬಿದ್ದ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರನ್ಯಾ ರಾವ್ ಪತಿಗೂ ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ ಇಡಿ ಅಧಿಕಾರಿಗಳು, ಕೋರಮಂಗಲದಲ್ಲಿರುವ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ರನ್ಯಾ ಮನೆಯಲ್ಲಿ ಇಡಿ ದಾಳಿ ಮುಂದುವರೆದಿದ್ದು, 8ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಿಆರ್ಪಿಎಫ್ ಸೇರಿ ಒಟ್ಟು ಎಂಟು ಜನ ಅಧಿಕಾರಿಗಳಿಂದ ಪರಿಶೀಲನೆ. ಮಧ್ಯಾ ಹ್ನದ ಊಟವನ್ನು ಸಹ ರನ್ಯಾಳ ಮನೆಗೆ ತರೆಸಿಕೊಂಡ ಇ.ಡಿ ಅಧಿಕಾರಿಗಳು ಇಂಚಿಂಚು ಬಿಡದೆ ಶೋಧ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ.
ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿರೋ ರನ್ಯಾ ರಾವ್ ಪತಿ ಜತಿನ್ ಹುಕ್ಕೇರಿಯ ಅಪಾರ್ಟ್ಮೆಂಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ರನ್ಯಾ ಸಂಬಂಧಿತ ಆಪ್ತರ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಡಿಆರ್ ಐ ನಲ್ಲಿ ದಾಖಲಾಗಿರುವ ಕೇಸ್ ಆಧಾರದ ಮೇಲೆ ಇಡಿಯಲ್ಲಿ ಇಸಿಐಆರ್ ದಾಖಲಾಗಿದೆ. ಇಸಿಐಆರ್ ದಾಖಲಿಸಿ ಬೆಂಗಳೂರಿನ ಹಲವು ಕಡೆ ದಾಳಿ ಮಾಡಲಾಗಿದೆ. ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಅಕ್ರಮವಾಗಿ ಮನಿ ಲಾಂಡರಿಂಗ್ ಆಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಸ್ಮಗ್ಲಿಂಗ್ ಗೆ ಹವಾಲಾ, ಅಕ್ರಮ ಹಣ ವರ್ಗಾವಣೆ ಶಂಕೆ ಇದ್ದು. ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಸಂಬಂಧ ಇಡಿ ತನಿಖೆ ನಡೆಸಲಿದೆ.
ರನ್ಯಾ ಬಗ್ಗೆ ಡಿಆರ್ಐಗೆ ಸುಳಿವು ಕೊಟ್ರಾ ಪತಿ
ಮದುವೆಯಾದ ಎರಡೇ ತಿಂಗಳಿಗೆ ನಟಿ ರನ್ಯಾ ರಾವ್ ಆಗಾಗ ವಿದೇಶಕ್ಕೆ ಹೋಗ್ತಿದ್ರು. ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳ ಕೂಡ ನಡೆದಿದೆ ಎನ್ನಲಾಗುತ್ತಿದೆ. ರನ್ಯಾ ರಾವ್ ಪದೇ ಪದೆ ವಿದೇಶಕ್ಕೆ ಪ್ರಯಾಣ ಗುಟ್ಟಿನ ಗದ್ದಲ ಜೋರಾಗಿತ್ತು. ರನ್ಯಾ- ಜಿತೀನ್ ಜಗಳ ವಿಚ್ಛೇದನ ಹಂತಕ್ಕೂ ತಲುಪಿತ್ತಂತೆ. ಹೀಗಾಗಿ ಪತ್ನಿಯ ಚಿನ್ನ ಕಳ್ಳ ಸಾಗಾಣಿಕೆ ಬಗ್ಗೆ ರನ್ಯಾ ರಾವ್ ಪತಿಯೇ ಡಿಆರ್ಐ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಶಂಕೆ ಕೂಡ ಇದೆ ಎನ್ನಲಾಗುತ್ತಿದೆ.