Homeಕರ್ನಾಟಕ7ನೇ ವೇತನ ಆಯೋಗದ ಅವಧಿ ಮತ್ತೆ ವಿಸ್ತರಣೆ; ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಸದ್ಯಕ್ಕಿಲ್ಲ

7ನೇ ವೇತನ ಆಯೋಗದ ಅವಧಿ ಮತ್ತೆ ವಿಸ್ತರಣೆ; ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಸದ್ಯಕ್ಕಿಲ್ಲ

ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ನೇಮಿಸಿದ್ದ 7ನೇ ವೇತನ ಆಯೋಗದ ಅವಧಿಯನ್ನು ರಾಜ್ಯ ಸರ್ಕಾರ ಮತ್ತೆ ವಿಸ್ತರಿಸಿದೆ. ಇದರಿಂದಾಗಿ ವೇತನ ಪರಿಷ್ಕರಣೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರು ವೇತನ ಪರಿಷ್ಕರಣೆಗೆ ಇನ್ನೂ ಕೆಲವು ದಿನಗಳ ಕಾಲ ಕಾಯಬೇಕಾಗಿದೆ.

ನೌಕರರ ವೇತನ ಶ್ರೇಣಿಗಳ ಪರಿಷ್ಕರಣೆಗಾಗಿ ಹಿಂದಿನ ಸರ್ಕಾರ ನಿವೃತ್ತ ಮುಖ್ಯಕಾರ್ಯದರ್ಶಿ ಸುಧಾಕರ್‌ ರಾವ್ ಅವರ ಅಧ್ಯಕ್ಷತೆಯಲ್ಲಿ 2022ರ ನವೆಂಬರ್ 19ರಂದು ಆಯೋಗ ರಚಿಸಿತ್ತು. ಆಯೋಗ ತನ್ನ ಶಿಫಾರಸುಗಳ ವರದಿ ಸಲ್ಲಿಸಲು 6 ತಿಂಗಳ ಗಡುವು ನೀಡಲಾಗಿತ್ತು.

ನಂತರ ಇದರ ಅವಧಿಯನ್ನು ಕಳೆದ ಮೇ 15 ರಂದು ಮತ್ತೆ 6 ತಿಂಗಳುಗಳ ಕಾಲ ವಿಸ್ತರಿಸಿತ್ತು. ಹೀಗಾಗಿ ಇದೇ 18ಕ್ಕೆ ಅವಧಿ ಮುಗಿಯಬೇಕಿತ್ತು. ಆದರೆ ಇದೀಗ ಇದರ ಅವಧಿಯನ್ನು ಮತ್ತೆ 2024 ಮಾರ್ಚ್ 15 ರವರೆಗೆ ವಿಸ್ತರಿಸಿದೆ. ಇದರಿಂದಾಗಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಮಾಡುವ ಸವಾಲು ಸರ್ಕಾರದ ಮುಂದಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿದೆ. ತಕ್ಷಣಕ್ಕೆ ನೌಕರರ ವೇತನ ಪರಿಷ್ಕರಣೆ ಮಾಡಿದರೆ ಆರ್ಥಿಕ ಹೊರೆಯಾಗಲಿದೆ. ಈ ಹಿನ್ನೆಲೆಯಲ್ಲಿ ಆಯೋಗದ ವರದಿಯನ್ನು ತಡವಾಗಿ ಪಡೆದುಕೊಂಡರೆ ಒಳಿತು ಎಂಬ ಲೆಕ್ಕಾಚಾರದಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments