Homeಕರ್ನಾಟಕ608 ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ: ಮುನೀಶ್ ಮೌದ್ಗಿಲ್

608 ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ: ಮುನೀಶ್ ಮೌದ್ಗಿಲ್

ಬಿಬಿಎಂಪಿಯ ಎಲ್ಲಾ 8 ವಲಯಗಳಲ್ಲಿ 608 ಆಸ್ತಿಗಳಿಂದ ದೀರ್ಘಕಾಲದ ಆಸ್ತಿ ತೆರಿಗೆ ಬಾಕಿ ವಸೂಲಿಗಾಗಿ ಸ್ಥಿರ ಆಸ್ತಿಗಳ ಹರಾಜು ಮಾರಾಟ ಮಾಡಲಾಗುತ್ತಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ರವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ವಿಚಾರವಾಗಿ ಕಾರಣ ಕೇಳಿ ನೋಟೀಸ್, ಬೇಡಿಕೆ ನೋಟೀಸ್, ಆಸ್ತಿಗಳ ಮುಟ್ಟೊಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಕೂಡಾ ಸಾಕಷ್ಟು ಆಸ್ತಿ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡುವ ಸಲುವಾಗಿ ಆಸ್ತಿ ತೆರಿಗೆ ಪಾವತಿಸದ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ಮಾಡಲಾಗುತ್ತದೆ. ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ವಲಯ ಆಯುಕ್ತರಾದ ರಮೇಶ್ ರವರ ನಿರ್ದೇಶನದಂತೆ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಪ ವಿಭಾಗಗಳಲ್ಲಿ ಬರುವ ಆಸ್ತಿ ಸ್ವತ್ತುಗಳಿಗೆ ಕಂದಾಯ ಪರಿಷ್ಕರಣೆ/ಬಾಕಿ ಉಳಿಸಿಕೊಂಡಿರುವ ಅಥವಾ ಇದುವರೆಗೂ ಆಸ್ತಿ ತೆರಿಗೆಯನ್ನು ಪಾವತಿಸದಿರುವ ಸ್ವತ್ತುಗಳನ್ನು ಗುರುತಿಸಿ ನಿಯಮಾನುಸಾರವಾಗಿ ಪರಿಶೀಲಿಸಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಅದರಂತೆ ವಲಯವಾರು ವಿವರಗಳು ಈ ಕೆಳಗಿನಂತಿವೆ.

ಪೂರ್ವ ವಲಯ:

ಪೂರ್ವ ವಲಯದಲ್ಲಿ ಬರುವ ಜೆ.ಸಿ ನಗರ, ಮಾರುತಿ ಸೇವಾನಗರ, ಹೆಚ್.ಬಿ.ಆರ್ ಲೇಔಟ್, ಜೀವನ್ ಬೀಮಾನಗರ, ಸಿ.ವಿ ರಾಮನ್ ನಗರ, ಶಾಂತಿನಗರ ವಸಂತನಗರ ಉಪ ವಿಭಾಗಗಳಲ್ಲಿ ತಲಾ 10, ಹೆಬ್ಬಾಳ, ಕೆ.ಜಿ ಹಳ್ಳಿ ಉಪ ವಿಭಾಗಗಳಲ್ಲಿ ತಲಾ 11, ಪುಲೇಶಿನಗರ, ದೊಮ್ಮಲೂರು ಉಪ ವಿಭಾಗಗಳಲ್ಲಿ ತಲಾ 9 ಹಾಗೂ ಶಿವಾಜಿನಗರ ಉಪ ವಿಭಾಗದಲ್ಲಿ 8 ಸೇರಿದಂತೆ ಒಟ್ಟು 118 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ಪಶ್ಚಿಮ ವಲಯ:

ಪಶ್ಚಿಮ ವಲಯದಲ್ಲಿ ಬರುವ ಚಿಕ್ಕಪೇಟೆ, ಚಂದ್ರ ಲೇಔಟ್, ಚಾಮರಾಜಪೇಟೆ, ಗಾಂಧಿ ನಗರ, ಗೋವಿಂದರಾಜಪುರ, ಜೆ.ಜೆ.ಆರ್ ನಗರ, ಮಲ್ಲೇಶ್ವರ, ಮಹಾಲಕ್ಷಿö್ಮಪುರ, ಮತ್ತಿಕೆರೆ, ನಾಗಪುರ, ರಾಜಾಜಿನಗರ ಹಾಗೂ ಶ್ರೀರಾಮಮಂದಿರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 120 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ದಕ್ಷಿಣ ವಲಯ:

ದಕ್ಷಿಣ ವಲಯದಲ್ಲಿ ಬರುವ ಬಿಟಿಎಂ ಲೇಔಟ್, ಕೋರಮಂಗಲ, ಬನಶಂಕರಿ, ಪದ್ಮನಾಭನಗರ, ಜಯನಗರ, ಜೆ.ಪಿ ನಗರ, ಗಾಳಿ ಆಂಜನೇಯ ದೇವಸ್ಥಾನ, ವಿಜಯನಗರ, ಹೊಂಬೇಗೌಡ ನಗರ ಉಪವಿಭಾಗಳಲ್ಲಿ ತಲಾ 10, ಗಿರಿನಗರ ಉಪ ವಿಭಾಗದಲ್ಲಿ 8, ಬಸವನಗುಡಿ ಉಪ ವಿಭಾಗದಲ್ಲಿ 6 ಹಾಗೂ ಕೆಂಪೇಗೌಡ ನಗರ ಉಪ ವಿಭಾಗದಲ್ಲಿ 5 ಸೇರಿದಂತೆ ಒಟ್ಟು 109 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ಮಹದೇವಪುರ ವಲಯ:

ಮಹದೇವಪುರ ವಲಯದಲ್ಲಿ ಬರುವ ಹೊರಮಾವು, ಹೆಚ್.ಎ.ಎಲ್, ಕೆ.ಆರ್ ಪುರಂ, ಮಾರತಹಳ್ಳಿ, ಹೂಡಿ ಹಾಗೂ ವೈಟ್ ಫೀಲ್ಡ್ ಸೇರಿದಂತೆ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 60 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ಬೊಮ್ಮನಹಳ್ಳಿ ವಲಯ:

ಬೊಮ್ಮನಹಳ್ಳಿ ವಲಯದಲ್ಲಿ ಬರುವ ಬೇಗೂರು, ಉತ್ತರ ಹಳ್ಳಿ, ಯಲಚೇನಹಳ್ಳಿ, ಬೊಮ್ಮನಹಳ್ಳಿ, ಅರಕೆರೆ, ಹೆಚ್.ಎಸ್.ಆರ್ ಲೇಔಟ್ ಹಾಗೂ ಅಂಜನಾಪುರ ಉಪವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 70 ಆಸ್ತಿಗಳನ್ನು 14ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ಯಲಹಂಕ ವಲಯ:

ಯಲಹಂಕ ವಲಯದಲ್ಲಿ ಬರುವ ಯಲಹಂಕ, ಯಲಹಂಕ ಸ್ಯಾಟಲೈಟ್ ಟೌನ್, ಬ್ಯಾಟರಾಯನಪುರ ಹಾಗು ವಿದ್ಯಾರಣ್ಯಪುರ ಉಪ ವಿಭಾಗಳಲ್ಲಿ ತಲಾ 10 ಆಸ್ತಿಗಳಂತೆ ಒಟ್ಟು 40 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ಆರ್.ಆರ್ ನಗರ ವಲಯ:

ಆರ್.ಆರ್ ನಗರ ವಲಯದಲ್ಲಿ ಬರುವ ಲಗ್ಗೆರೆ, ಆರ್.ಆರ್ ನಗರ, ಲಕ್ಷ್ಮಿದೇವಿನಗ, ಯಶವಂತಪುರ ಉಪವಿಭಾಗಳಲ್ಲಿ ತಲಾ 10, ಕೆಂಗೇರಿ ಹಾಗೂ ಹೇರೋಹಳ್ಳಿ ಉಪ ವಿಭಾಗಗಳಲ್ಲಿ ತಲಾ 5 ಸೇರಿದಂತೆ ಒಟ್ಟು 50 ಆಸ್ತಿಗಳನ್ನು 10ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ದಾಸರಹಳ್ಳಿ ವಲಯ:

ದಾಸರಹಳ್ಳಿ ವಲಯದಲ್ಲಿ ಬರುವ ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯ ಉಪವಿಭಾಗಳಲ್ಲಿ ತಲಾ 10 ಹಾಗೂ ಹೆಗ್ಗನಹಳ್ಳಿ ಉಪ ವಿಭಾಗದಲ್ಲಿ 11 ಸೇರಿದಂತೆ ಒಟ್ಟು 41 ಆಸ್ತಿಗಳನ್ನು 13ನೇ ಫೆಬ್ರವರಿ 2025 ರಂದು ಹರಾಜು ಮಾಡಲಾಗುತ್ತದೆ.

ತಕ್ಷಣವೇ ನಿಮ್ಮ ಆಸ್ತಿ ತೆರಿಗೆ ಪಾವತಿಸಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ 2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮತ್ತು ಬಿಬಿಎಂಪಿಗೆ ಸುಮಾರು 390 ಕೋಟಿ ರೂ. ಬಾಕಿ ಪಾವತಿಸಬೇಕಿರುವವರು, ಈ ರೀತಿಯ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸುವ ಸಲುವಾಗಿ ಎಲ್ಲಾ ಆಸ್ತಿ ತೆರಿಗೆದಾರರು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ವಿನಂತಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments