Homeಕರ್ನಾಟಕ2023-24ನೇ ಸಾಲಿನ ನರೇಗಾ ಪ್ರಶಸ್ತಿ ಪ್ರಕಟ

2023-24ನೇ ಸಾಲಿನ ನರೇಗಾ ಪ್ರಶಸ್ತಿ ಪ್ರಕಟ

ಜಿಲ್ಲೆಗಳಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಗ್ರಾಮೀಣಾಭಿವೃದ್ಧಿ ಕಾಮಗಾರಿ ಅನುಷ್ಠಾನದಲ್ಲಿ ನಾವೀನ್ಯತೆಯನ್ನು ಹಾಗೂ ಉತ್ತಮ ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನಿಸಿದ ಜಿಲ್ಲೆಗಳಿಗೆ ನರೇಗಾ ಪ್ರಶಸ್ತಿಯನ್ನು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆ ನೀಡಿದೆ.

2023-24ನೇ ಸಾಲಿನ ನರೇಗಾ ಪ್ರಶಸ್ತಿಗಳ ಪೈಕಿ ಅತ್ಯುತ್ತಮ ಜಿಲ್ಲಾ ಪಂಚಾಯತ್‌ ಪುರಸ್ಕಾರ ನಾಲ್ಕು ಜಿಲ್ಲಾ ಪಂಚಾಯಿತಿಗಳು ಆಯ್ಕೆಯಾಗಿವೆ.

ಗ್ರಾಮೀಣ ಪ್ರದೇಶದಲ್ಲಿನ ಜನರು ಕೃಷಿ ಬಿಡುವಿನ ಸಮಯದಲ್ಲಿ ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗದಂತೆ ತಡೆಯಲು ಕೇಂದ್ರ ಸರ್ಕಾರವು 02 ಫೆಬ್ರವರಿ 2006 ರಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಿದ ಅಂಗವಾಗಿ ಪ್ರತಿ ವರ್ಷ 02 ಫೆಬ್ರವರಿ ರಂದು ನರೇಗಾ ದಿವಸವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಜಿಲ್ಲೆಗಳಲ್ಲಿ ನರೇಗಾ ಯೋಜನೆಯಡಿ ಸಕ್ರಿಯವಾಗಿ ಕೆಲಸ ನಿರ್ವಹಿಸಿದ ಕೂಲಿಕಾರರನ್ನು ಹಾಗೂ ಕಾಯಕ ಬಂಧುಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ.

2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 13.85 ಕೋಟಿ ಮಾನವ ದಿನಗಳ ಕೆಲಸವನ್ನು 30 ಲಕ್ಷ ಕುಟುಂಬಗಳ 54 ಲಕ್ಷಕ್ಕೂ ಹೆಚ್ಚು ಕೂಲಿಕಾರರಿಗೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 11 ಕೋಟಿ ಮಾನವ ದಿನಗಳ ಕೆಲಸವನ್ನು 26.78 ಲಕ್ಷ ಕುಟುಂಬಗಳ 47.27 ಲಕ್ಷಕ್ಕೂ ಹೆಚ್ಚು ಕೂಲಿಕಾರರಿಗೆ ನೀಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದ್ದು, 2023-24 ನೇ ಸಾಲಿನಲ್ಲಿ 9.5 ಲಕ್ಷ ಕಾಮಗಾರಿಗಳನ್ನು ಸೃಜಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಇಲ್ಲಿಯವರೆಗೆ 8.30 ಲಕ್ಷ ಕಾಮಗಾರಿಗಳನ್ನು ಸೃಜಿಸಲಾಗಿದೆ. ಇದರಲ್ಲಿ ವೈಯಕ್ತಿಕ ಫಲಾನುಭವಿಗಳಿಗೆ ತಮ್ಮ ಕುಟುಂಬಗಳ ಜೀವನ ಮಟ್ಟ ಸುಧಾರಣೆಗೆ 1.13 ಲಕ್ಷ ಎಕರೆ ತೋಟಗಾರಿಕೆ ಬೆಳೆ ವಿಸ್ತರಣೆ, 0.16 ಲಕ್ಷ ಎಕರೆ ರೇಷ್ಮೆ ಹಾಗೂ 0.37 ಲಕ್ಷ ಜಾನುವಾರು ಶೆಡ್‌ ನಿರ್ಮಾಣಕ್ಕೂ ಕೂಡ ಅವಕಾಶ ನೀಡಲಾಗಿದೆ.

ಅತ್ಯುತ್ತಮ ಜಿಲ್ಲಾ ಪಂಚಾಯತ್‌ ಪುರಸ್ಕಾರ

ಬೆಂಗಳೂರು ವಿಭಾಗೀಯ-ದಾವಣಗೆರೆ ಜಿಲ್ಲಾ ಪಂಚಾಯತಿ
ಬೆಳಗಾವಿ ವಿಭಾಗೀಯ-ಬಾಗಲಕೋಟೆ ಜಿಲ್ಲಾ ಪಂಚಾಯತಿ
ಕಲ್ಬುರ್ಗಿ ವಿಭಾಗೀಯ-ಬಳ್ಳಾರಿ ಜಿಲ್ಲಾ ಪಂಚಾಯತಿ
ಮೈಸೂರು ವಿಭಾಗೀಯ-ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ
ಅಮೃತ ಸರೋವರ ಜಿಲ್ಲಾ ಪುರಸ್ಕಾರ

ಅಮೃತ ಸರೋವರ ಜಿಲ್ಲಾ ಪುರಸ್ಕಾರ-ಬೆಳಗಾವಿ ಜಿಲ್ಲಾ ಪಂಚಾಯಿತಿ

ಉದ್ಯೋಗ ಸೃಜನೆಯ ಅತ್ಯುತ್ತಮ ಪುರಸ್ಕಾರ

ಉದ್ಯೋಗ ಸೃಜನೆಯ ಅತ್ಯುತ್ತಮ ಪುರಸ್ಕಾರ-ತುಮಕೂರು ಜಿಲ್ಲಾ ಪಂಚಾಯಿತಿ

ಅತ್ಯುತ್ತಮ ಒಗ್ಗೂಡಿಸುವಿಕೆ ಜಿಲ್ಲಾ ಪುರಸ್ಕಾರ

ತೋಟಗಾರಿಕೆ ಇಲಾಖೆ

ಬೆಳಗಾವಿ ವಿಭಾಗ – ಹಾವೇರಿ ಜಿಲ್ಲೆ
ಬೆಂಗಳೂರು ವಿಭಾಗ- ದಾವಣಗೆರೆ ಜಿಲ್ಲೆ
ಕಲ್ಬುರ್ಗಿ ವಿಭಾಗ – ಕೊಪ್ಪಳ ಜಿಲ್ಲೆ
ಮೈಸೂರು ವಿಭಾಗ – ಹಾಸನ ಜಿಲ್ಲೆ

ಅರಣ್ಯ ಇಲಾಖೆ

ಬೆಳಗಾವಿ ವಿಭಾಗ- ಬೆಳಗಾವಿ ಜಿಲ್ಲೆ
ಬೆಂಗಳೂರು ವಿಭಾಗ – ಚಿತ್ರದುರ್ಗ ಜಿಲ್ಲೆ
ಕಲ್ಬರ್ಗಿ ವಿಭಾಗ – ಬಳ್ಳಾರಿ ಜಿಲ್ಲೆ
ಮೈಸೂರು ವಿಭಾಗ – ಹಾಸನ ಜಿಲ್ಲೆ

ರೇಷ್ಮೆ ಇಲಾಖೆ

ಬೆಳಗಾವಿ ವಿಭಾಗ – ವಿಜಯಪುರ ಜಿಲ್ಲೆ
ಬೆಂಗಳೂರು ವಿಭಾಗ – ರಾಮನಗರ ಜಿಲ್ಲೆ
ಕಲ್ಬುರ್ಗಿ ವಿಭಾಗ – ವಿಜಯನಗರ ಜಿಲ್ಲೆ
ಮೈಸೂರು ವಿಭಾಗ – -ಮಂಡ್ಯ ಜಿಲ್ಲೆ

ಕೃಷಿ ಮತ್ತು ಜಲಾನಯನ

ಬೆಳಗಾವಿ ವಿಭಾಗ – ಬೆಳಗಾವಿ ಜಿಲ್ಲೆ
ಬೆಂಗಳೂರು ವಿಭಾಗ – ಚಿಕ್ಕಬಳ್ಳಾಪುರ ಜಿಲ್ಲೆ
ಕಲ್ಬುರ್ಗಿ ವಿಭಾಗ – ವಿಜಯನಗರ ಜಿಲ್ಲೆ
ಮೈಸೂರು ವಿಭಾಗ – ಹಾಸನ ಜಿಲ್ಲೆ

ಪಂಚಾಯತ್‌ ರಾಜ್‌ ಇಂಜಿನಿಯರಿಂಗ್‌ ವಿಭಾಗ

ಮೈಸೂರು ವಿಭಾಗ – ಚಿಕ್ಕಮಗಳೂರು ಜಿಲ್ಲೆ
ಬೆಳಗಾವಿ ವಿಭಾಗ – ಬಾಗಲಕೋಟೆ ಜಿಲ್ಲೆ
ಕಲ್ಬುರ್ಗಿ ವಿಭಾಗ – ರಾಯಚೂರು ಜಿಲ್ಲೆ
ಬೆಂಗಳೂರು ವಿಭಾಗೀಯ -ಕೋಲಾರ ಜಿಲ್ಲೆ

ತಾಲ್ಲೂಕು ಪಂಚಾಯತ್‌ ಪುರಸ್ಕಾರ

ದಾವಣಗೆರೆ ತಾಲ್ಲೂಕು ಪಂಚಾಯತಿ, ದಾವಣಗೆರೆ ಜಿಲ್ಲೆ
ತೀರ್ಥಹಳ್ಳಿ ತಾಲ್ಲೂಕು ಪಂಚಾಯತಿ, ಶಿವಮೊಗ್ಗ ಜಿಲ್ಲೆ
3.ಕಡಬ ತಾಲ್ಲೂಕು ಪಂಚಾಯತಿ, ದಕ್ಷಿಣ ಕನ್ನಡ ಜಿಲ್ಲೆ
ತರಿಕೆರೆ ತಾಲ್ಲೂಕು ಪಂಚಾಯತಿ, ಚಿಕ್ಕಮಗಳೂರು ಜಿಲ್ಲೆ
ಗುಳ್ಳೇದಗುಡ್ಡ ತಾಲ್ಲೂಕು ಪಂಚಾಯತಿ, ಬಾಗಲಕೋಟೆ ಜಿಲ್ಲೆ
ನಿಡಗುಂದಿ ತಾಲ್ಲೂಕು ಪಂಚಾಯತಿ, ವಿಜಯಪುರ ಜಿಲ್ಲೆ
ಸಂಡೂರು ತಾಲ್ಲೂಕು ಪಂಚಾಯತಿ, ಬಳ್ಳಾರಿ ಜಿಲ್ಲೆ
ಹಡಗಲಿ ತಾಲ್ಲೂಕು ಪಂಚಾಯತಿ ವಿಜಯನಗರ ಜಿಲ್ಲೆ

ಅತ್ಯುತ್ತಮ ಗ್ರಾಮ ಪಂಚಾಯತ್‌ ಪುರಸ್ಕಾರ

ಬಾಗಲಕೋಟೆ ಜಿಲ್ಲೆ- ಮುಗಳೋಳ್ಳಿ ಗ್ರಾ.ಪಂ, ಬಾಗಲಕೋಟೆ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ- ಗಂಗವಾರ-ಚೌಡಪ್ಪನಹಳ್ಳಿ,
ದೇವನಹಳ್ಳಿ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ- ದೊಡ್ಡಜಾಲ ಗ್ರಾ.ಪಂ, ಯಲಹಂಕ ತಾಲ್ಲೂಕು,
ಬಳ್ಳಾರಿ ಜಿಲ್ಲೆ- ದಮ್ಮಾರು ಗ್ರಾ.ಪಂ, ಕುರುಗೋಡು ತಾಲ್ಲೂಕು
ಬೆಳಗಾವಿ ಜಿಲ್ಲೆ -ಕೊಟಬಾಗಿ ಗ್ರಾ.ಪಂ ಹುಕ್ಕೇರಿ ತಾಲ್ಲೂಕು
ಬೀದರ್‌ ಜಿಲ್ಲೆ ತೋರಣಾ ಗ್ರಾ.ಪಂ, ಕಮಲನಗರ ತಾಲ್ಲೂಕು,
ಚಾಮರಾಜನಗರ ಜಿಲ್ಲೆ ದಿನ್ನಳ್ಳಿ ಗ್ರಾ.ಪಂ, ಹನೂರು ತಾಲ್ಲೂಕು,
ಚಿತ್ರದುರ್ಗ ಜಿಲ್ಲೆ ಬೆಳಗೆರೆ ಗ್ರಾ.ಪಂ, ಚಳ್ಳಕೆರೆ ತಾಲ್ಲೂಕು
ಚಿಕ್ಕಬಳ್ಳಾಪುರ ಜಿಲ್ಲೆ ಮಂಡಿಕಲ್ಲು ಗ್ರಾ.ಪಂ, ಚಿಕ್ಕಬಳ್ಳಾಪುರ ತಾಲ್ಲೂಕು
ಚಿಕ್ಕಮಗಳೂರು ಜಿಲ್ಲೆ ಬರಗೇನಹಳ್ಳಿ ಗ್ರಾ.ಪಂ, ತರೀಕೆರೆ ತಾಲ್ಲೂಕು ,
ದಾವಣಗೆರೆ ಜಿಲ್ಲೆ ಅರಕೆರೆ ಗ್ರಾ.ಪಂ, ಹೊನ್ನಾಳಿ ತಾಲ್ಲೂಕು,
ಧಾರವಾಡ ಜಿಲ್ಲೆ ಮುತ್ತಗಿ ಗ್ರಾ.ಪಂ,ಕಲಘಟಗಿ ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ ಅಲಂಕಾರು ಗ್ರಾ.ಪಂ, ಕಡಬ ತಾಲ್ಲೂಕು ,
ಗದಗ ಜಿಲ್ಲೆ ಅಂತೂರ್‌ ಬೆಂತೂರ್‌, ಗದಗ ತಾಲ್ಲೂಕು,.
ಹಾವೇರಿ ಜಿಲ್ಲೆ ಯತ್ತಿನಹಳ್ಳಿ ಎಂ.ಕೆ ಗ್ರಾ.ಪಂ ಹಿರೇಕರೂರು ತಾಲ್ಲೂಕು
ಹಾಸನ ಜಿಲ್ಲೆ ಬೆಕ್ಕ, ಗ್ರಾ.ಪಂ ಚನ್ನರಾಯಪಟ್ಟಣ ತಾಲ್ಲೂಕು
ಕೊಪ್ಪಳ ಜಿಲ್ಲೆ ಮುನಿರಾಬಾದ್‌ ಡ್ಯಾಂ, ಗ್ರಾ.ಪಂ ಕೊಪ್ಪಳ ತಾಲ್ಲೂಕು
ಕೊಡಗು ಜಿಲ್ಲೆ ಕೆ.ಬಾಡಗ ಗ್ರಾ.ಪಂ, ವಿರಾಜಪೇಟೆ ತಾಲ್ಲೂಕು
ಕೋಲಾರ ಜಿಲ್ಲೆ ಮದನಹಳ್ಳಿ ಕೋಲಾರ ತಾಲ್ಲೂಕು
ಕಲ್ಬುರ್ಗಿ ಜಿಲ್ಲೆ ಲಾಡಲಾಪೂರ ಗ್ರಾ.ಪಂ, ಚಿತ್ತಾಪೂರ ತಾಲ್ಲೂಕು,
ಮಂಡ್ಯ ಜಿಲ್ಲೆ ಕೆ ಶೆಟ್ಟಹಳ್ಳಿ, ಮದ್ದೂರು ತಾಲ್ಲೂಕು
ಮೈಸೂರು ಜಿಲ್ಲೆ ಬಿದರಹಳ್ಳಿ ಗ್ರಾ.ಪಂ ಸರಗೂರು ತಾಲ್ಲೂಕು
ರಾಮನಗರ ಜಿಲ್ಲೆ ಜಾಲಮಂಗಲ ಗ್ರಾಮ ಪಂಚಾಯಿತಿ, ರಾಮನಗರ ತಾಲ್ಲೂಕು,
ರಾಯಚೂರು ಜಿಲ್ಲೆ ಗುಂಡಾ ಗ್ರಾ.ಪಂ ಮಸ್ಕಿ ತಾಲ್ಲೂಕು,
ಶಿವಮೊಗ್ಗ ಜಿಲ್ಲೆ ತೋಗರ್ಸಿ ಗ್ರಾ.ಪಂ, ಶಿಕಾರಿಪುರ ತಾಲ್ಲೂಕು
ತುಮಕೂರು ಜಿಲ್ಲೆ ಉಜ್ಜನಿ ಗ್ರಾ.ಪಂ ಕುಣಿಗಲ್‌ ತಾಲ್ಲೂಕು,
ಉತ್ತರ ಕನ್ನಡ ಜಿಲ್ಲೆ.ದೇವಳಮಕ್ಕಿ ಗ್ರಾ.ಪಂ ಕಾರವಾರ ತಾಲ್ಲೂಕು,
ಉಡುಪಿ ಜಿಲ್ಲೆ ಹಕ್ಲಾಡಿ ಗ್ರಾ.ಪಂ, ಕುಂದಾಪುರ ತಾಲ್ಲೂಕು
ವಿಜಯಪುರ ಜಿಲ್ಲೆ ರೂಗಿ ಗ್ರಾ.ಪಂ, (ಹಿರೇರೂಗಿ) ಇಂಡಿ ತಾಲ್ಲೂಕು
ವಿಜಯನಗರ ಜಿಲ್ಲೆ ಹ್ಯಾರಡ ಗ್ರಾ.ಪಂ, ಹೂವಿನ ಹಡಗಲಿ ತಾಲ್ಲೂಕು
ಯಾದಗಿರಿ ಜಿಲ್ಲೆ ದೋರನಹಳ್ಳಿ ಗ್ರಾ.ಪಂ, ಶಹಾಪೂರ ತಾಲ್ಲೂಕು

ವಿಶೇಷ ಪ್ರಶಂಸಾ ಪತ್ರ ವಿತರಣೆ ಕಾಯಕಬಂಧು

ಗಣಪತಿ ಶಿವಾಜಿ, ಚಿಗಳ್ಳಿ ಗ್ರಾ,ಪಂ ಮುಂಡಗೋಡ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆ
ಅನೀತಾ ತುಕಾರಾಮ ಬೆಳಗಾವಕರ, ಕಡೋಲಿ ಗ್ರಾ.ಪಂ ಬೆಳಗಾವಿ ತಾಲ್ಲೂಕು ಬೆಳಗಾವಿ ಜಿಲ್ಲೆ
ಗಂಗಮ್ಮ, ಸಿ.ಕೆ.ಪುರ, ಪಾವಗಡ ತಾಲ್ಲೂಕು ತುಮಕೂರು ಜಿಲ್ಲೆ
ಸುಮಿತ್ರಾ, ಕೊರಲಹಳ್ಳಿ ಗ್ರಾ.ಪಂ, ಶಿವಮೊಗ್ಗ ತಾಲ್ಲೂಕು , ಶಿವಮೊಗ್ಗ ಜಿಲ್ಲೆ
ಶ್ರೀದೇವಿ ಎಲಿಬಳ್ಳಿ ಅಳವಂಡಿ ಗ್ರಾ.ಪಂ ಕೊಪ್ಪಳ ತಾಲ್ಲೂಕು, ಕೊಪ್ಪಳ ಜಿಲ್ಲೆ
ಮಹಾಲಕ್ಷ್ಮೀ, ಯರಗೋಳ ಗ್ರಾ.ಪಂ, ಯಾದಗಿರಿ ತಾಲ್ಲೂಕು ಯಾದಗಿರಿ ಜಿಲ್ಲೆ
ಲತಾ ಡಿ.ಕೆ, ಡಿ ಎ ಕೆರೆ ಗ್ರಾ.ಪಂ ಮದ್ದೂರು ತಾಲ್ಲೂಕು, ಮಂಡ್ಯ
ಅನುಪಮಾ ಶೆಟ್ಟಿ,ಕುಂದಾವರ ಗ್ರಾ.ಪಂ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ

ವೈಯಕ್ತಿಕ ಫಲಾನುಭವಿಗಳು

ನಾಗಪ್ಪ ಶಾ ಹೋಳಿಕಟ್ಟಿ, ಅಗಡಿ ಗ್ರಾ.ಪಂ ಹಾವೇರಿ ತಾಲ್ಲೂಕು, ಹಾವೇರಿ ಜಿಲ್ಲೆ
ವೀರಪ್ಪ ಶಿವಪ್ಪತಲ್ಲೂರ, ಅಬ್ಬಿಗೆರೆ ಗ್ರಾ.ಪಂ, ರೋಣ ತಾಲ್ಲೂಕು ಗದಗ ಜಿಲ್ಲೆ
ಚಿಕ್ಕವೆಂಕಟರಮಣಪ್ಪ, ಇರಗಂಪಲ್ಲಿ, ಚಿಂತಾಮಣಿ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ
ಧನಲಕ್ಷ್ಮಿ ದ್ಯಾಮವ್ವನಹಳ್ಳಿ ಗ್ರಾ.ಪಂ, ಚಿತ್ರದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆ
ಪಾರ್ವತಿ, ಕರಜಗಿ ಗ್ರಾ.ಪಂ,ಅಫಜಲಪೂರ ತಾಲ್ಲೂಕು ಕಲ್ಬುರ್ಗಿ ಜಿಲ್ಲೆ
ಜಗದೀಶ್‌ ಹೂಗಾರ್‌ , ಡೋಣಗಾಪೂರ ಗ್ರಾ.ಪಂ, ಭಾಲ್ಕಿ ತಾಲ್ಲೂಕು ಬೀದರ್‌ ಜಿಲ್ಲೆ
ಮೇಘ ವಿ, ಹೊರೆಯಾಲ ಗ್ರಾ.ಪಂ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ
ಹೊನ್ನಮ್ಮ, ತಲಮಕ್ಕಿ ಗ್ರಾಮ, ಬಿಂತ್ರವಳ್ಳಿ ಗ್ರಾ.ಪಂ, ಕೊಪ್ಪ ತಾಲ್ಲೂಕು ಚಿಕ್ಕಮಗಳೂರು ಜಿಲ್ಲೆ
ಸರ್ಕಾರೇತರ ಸಂಸ್ಥೆಗಳು

ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆ
ಪೌಂಡೇಷನ್‌ ಫಾರ್‌ ಇಕಲಾಜಿಕಲ್‌ ಸೆಕ್ಯೂರಿಟಿ ಸಂಸ್ಥೆ ಚಿಂತಾಮಣಿ ವಿಶೇಷ ಪ್ರಶಂಸಾ ಪತ್ರ
ತರಭೇತಿ ಸಂಸ್ಥೆ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಂಸ್ಥೆ ಮೈಸೂರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments