Homeಕರ್ನಾಟಕರಾಜ್ಯ ವಿಧಾನಮಂಡಲದ 9 ದಿನದ ಚಳಿಗಾಲ ಅಧಿವೇಶನಕ್ಕೆ ಖರ್ಚಾಗುತ್ತಿದೆ 19 ಕೋಟಿ ರೂ.!

ರಾಜ್ಯ ವಿಧಾನಮಂಡಲದ 9 ದಿನದ ಚಳಿಗಾಲ ಅಧಿವೇಶನಕ್ಕೆ ಖರ್ಚಾಗುತ್ತಿದೆ 19 ಕೋಟಿ ರೂ.!

ಬೆಳಗಾವಿಯ‌ ಸುವರ್ಣ ವಿಧಾನಸೌಧದಲ್ಲಿ ಡಿ.9ರಿಂದ 19ರವರೆಗೆ 9 ದಿನಕಾಲ ನಡೆಯುತ್ತಿರುವ ಚಳಿಗಾಲ ಅಧಿವೇಶನಕ್ಕೆ ಮಾಡಲಾಗುತ್ತಿರುವ ವೆಚ್ಚ ಬರೋಬ್ಬರಿ 19 ಕೋಟಿ ರೂ‌ಪಾಯಿ!

ಇದು ಅಧಿವೇಶನಕ್ಕೆ ಆಗಮಿಸುವ ಶಾಸಕರು, ಮಂತ್ರಿಗಳು, ಅಧಿಕಾರಿಗಳ ವಾಸ್ತವ್ಯ ಹಾಗೂ ಊಟೋಪಚಾರಕ್ಕೆ ಮಾತ್ರ ಮಾಡುತ್ತಿರುವ ವೆಚ್ಚವಾಗಿದೆ. ಇದನ್ನು ಹೊರತುಪಡಿಸಿ ಶಾಸಕರಿಗೆ ಪ್ರಯಾಣ ಭತ್ಯೆ,ಸಭಾ ಭತ್ಯೆ ಆತಿಥ್ಯ ಭತ್ಯೆ ಸೇರಿದಂತೆ ಇತರೆ ಭತ್ಯೆಗಳನ್ನು ಪ್ರತ್ಯೇಕವಾಗಿ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಅಧಿಕಾರಿಗಳಿಗೂ ಅವರ ಹುದ್ದೆಯ ಅರ್ಹತೆ ಆಧರಿಸಿ ನೀಡಲಾಗುತ್ತದೆ.

ಇವುಗಳನ್ನು ಹೊರತುಪಡಿಸಿ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ವಾಸ್ತವ್ಯಕ್ಕೆ 7 ಕೋಟಿ ರೂ. ಖರ್ಚಾಗಲಿದ್ದು, ಹಿಂದಿನ ವರ್ಷ ಒಟ್ಟು 18 ಕೋಟಿ ಖರ್ಚಾಗಿತ್ತು. ಆ ವೆಚ್ಚವನ್ನು ಆಧರಿಸಿ ಶೇಕಡಾ 10 ರಷ್ಟು ಹೆಚ್ಚಳ ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.

ಪ್ರತೀ ವರ್ಷವೂ ಅಧಿವೇಶನದ ಖರ್ಚಿನಲ್ಲಿ ವಾಸ್ತವ್ಯಕ್ಕೆ ಸಿಂಹ ಪಾಲು ಹೋಗುವುದರಿಂದ ಹಣ ಉಳಿಸುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದ ಬಳಿ ಶಾಸಕರ ಭವನ ನಿರ್ಮಿಸುವ ದಶಕದ ಬೇಡಿಕೆ ಬೇಡಿಕೆಯಾಗಿಯೇ ಉಳಿದಿದೆ.

ಊಟಕ್ಕೆ 2.80 ಕೋಟಿ

ಸಚಿವ, ಶಾಸಕ, ಅಧಿಕಾರಿ ಹಾಗೂ ಸಿಬ್ಬಂದಿಯ ಊಟದ ಖರ್ಚಿಗೆ 2.80 ಕೋಟಿ ರೂ ಖರ್ಚಾಗಲಿದೆ. ಮಾರ್ಷಲ್‌ಗಳ ಓಡಾಟ, ಪೊಲೀಸ್ ಬಂದೋಬಸ್ತ್ ಹಾಗೂ ಸಾರಿಗೆ ಸಂಸ್ಥೆಯ ಬಸ್ ಸೇವೆ ಸೇರಿ ಒಟ್ಟಾರೆ 1.20 ಕೋಟಿ ರೂ. ವೆಚ್ಚವಾಗಲಿದೆ. ಸುವರ್ಣ ವಿಧಾನಸೌಧ ಸೇರಿ ಗಣ್ಯರು ತಂಗಿದ ಸ್ಥಳಗಳಲ್ಲಿ ಇಂಟರ್‌ನೆಟ್ ಸೌಲಭ್ಯ, ದೂರವಾಣಿ ವ್ಯವಸ್ಥೆಗೆ 44 ಲಕ್ಷ ರೂ. ವಾಹನಗಳ ಇಂಧನಕ್ಕಾಗಿ 45 ಲಕ್ಷ ರೂ. ಅಧಿವೇಶನ ವೇಳೆ ತುರ್ತಾಗಿ ಬಾಡಿಗೆ ವಾಹನ ಪಡೆಯಲು 25 ಲಕ್ಷ ರೂ. ವಾಹನ ಚಾಲಕರ ವಸತಿ ವ್ಯವಸ್ಥೆಗೆ 20 ಲಕ್ಷ ರೂ. ಸೌಧವನ್ನು ಹೂಗಳಿಂದ ಅಲಂಕಾರಗೊಳಿಸಲು 15 ಲಕ್ಷ ರೂ. ಖರ್ಚಾಗಲಿದೆ ಎಂದು ತಿಳಿಸಿದರು.

ಧರಣಿ ಸ್ಥಳಕ್ಕೆ 8.50 ಲಕ್ಷ

ಅಧಿವೇಶನದ ವೇಳೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಇದಕ್ಕಾಗಿಯೇ ಪ್ರತಿಭಟನಾ ಸ್ಥಳ ನಿಗದಿ ಮಾಡಲಾಗಿದೆ.ಇದಕ್ಕೆ 8.50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಸ್ವಚ್ಛತಾ ಸಿಬ್ಬಂದಿ, ಬಿಸಿ ನೀರಿನ ವ್ಯವಸ್ಥೆ, ಲೇಖನ ಸಾಮಗ್ರಿಗೆ 25 ಲಕ್ಷ ರೂ. ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 15 ಲಕ್ಷ ರೂ. ಅಧಿವೇಶನ ಮಾಹಿತಿ ಕೈಪಿಡಿ, ವಿವಿಧ ಗುರುತಿನ ಚೀಟಿಗಾಗಿ 4 ಲಕ್ಷ ರೂ. ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಸರ್ಕಾರಿ ವಾಹನ ಚಾಲಕರಿಗೆ ನಿರ್ವಹಣಾ ವೆಚ್ಚ 25 ಸಾವಿರ ರೂ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಬೇಡಿಕೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments